ETV Bharat / entertainment

ಮುಂಬೈ ದಾಳಿ ಕುರಿತ ಜಾವೇದ್‌ ಅಖ್ತರ್‌ ಹೇಳಿಕೆಯನ್ನು 'ಸಂವೇದನಾರಹಿತ' ಎಂದ ಪಾಕ್​ ನಟ

ಫೈಜ್ ಉತ್ಸವದಲ್ಲಿ ಪಾಕಿಸ್ತಾನದ​ ಬಗ್ಗೆ ಕವಿ ಜಾವೇದ್ ಅಖ್ತರ್ ನೀಡಿದ್ದ ಹೇಳಿಕೆಗೆ ಪಾಕ್​ ನಟ ಅಲಿ ಜಾಫರ್ ಪ್ರತಿಕ್ರಿಯಿಸಿದ್ದಾರೆ.

Ali Zafar reacts on Javed Akhtar statement
ಜಾವೇದ್ ಅಖ್ತರ್ ಹೇಳಿಕೆಗೆ ಅಲಿ ಜಾಫರ್ ಪ್ರತಿಕ್ರಿಯೆ
author img

By

Published : Feb 24, 2023, 3:42 PM IST

ಇತ್ತೀಚೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಫೈಜ್ ಉತ್ಸವದಲ್ಲಿ ಭಾರತದ ಖ್ಯಾತ ಕವಿ, ಗೀತೆ ರಚನೆಕಾರ ಜಾವೇದ್ ಅಖ್ತರ್ ಪಾಲ್ಗೊಂಡಿದ್ದರು. ಆ ಸಭೆಯಲ್ಲಿ ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿ ಜಾವೇದ್ ಅಖ್ತರ್ ಅವರು ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 26/11ರ ಮುಂಬೈ ದಾಳಿಯ ಕುರಿತಾಗಿ ಭಾರತೀಯರ ಹೃದಯದಲ್ಲಿ ಅಡಗಿರುವ ನೋವಿನ ಬಗ್ಗೆ ಮಾತನಾಡಿದ್ದ ಅಖ್ತರ್, ಪಾಕ್​​​ ನಡೆಯನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಇದಕ್ಕೆ ಪಾಕ್​​ ಗಾಯಕ ಹಾಗು ನಟ ಅಲಿ ಜಾಫರ್ (Ali Zafar) ಪ್ರತಿಕ್ರಿಯಿಸಿದ್ದಾರೆ.

ಫೈಜ್ ಉತ್ಸವದಲ್ಲಿ ಪಾಕ್​​ ಗಾಯಕ ಅಲಿ ಜಾಫರ್ ತಮ್ಮ ಒಂದೆರಡು ಹಾಡುಗಳನ್ನು ಹಾಡಿ ಅಲ್ಲಿ ಸೇರಿದ್ದ ಗಣ್ಯರನ್ನು ಮನರಂಜಿಸಿದ್ದರು. ಇದೀಗ ಜಾವೇದ್ ಅಖ್ತರ್ ಮಾತಿಗೆ ಅವರ ಹೆಸರನ್ನು ಉಲ್ಲೇಖಿಸದೇ ಇನ್‌ಸ್ಟಾಗ್ರಾಮ್ ಪೋಸ್ಟ್‌ ಹಾಕಿದ್ದಾರೆ.

"ನಾನು ಹೆಮ್ಮೆಯ ಪಾಕಿಸ್ತಾನಿ. ಸ್ವಾಭಾವಿಕವಾಗಿ ಯಾವುದೇ ಪಾಕಿಸ್ತಾನಿ ತನ್ನ ದೇಶ ಅಥವಾ ಜನರ ವಿರುದ್ಧ ಯಾವುದೇ ಹೇಳಿಕೆಯನ್ನು ಮೆಚ್ಚಲಾರ. ಹೃದಯಗಳನ್ನು ಮತ್ತಷ್ಟು ಹತ್ತಿರ ತರುವ ಉದ್ದೇಶದಿಂದ ಇಂಥ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತವೆ.''

"ಪಾಕಿಸ್ತಾನವು ಭಯೋತ್ಪಾದನೆಯಿಂದ ಎಷ್ಟರ ಮಟ್ಟಿಗೆ ನೋವು ಅನುಭವಿಸಿದೆ ಮತ್ತು ಅನುಭವಿಸುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಅಂತಹ ಸಂವೇದನಾಶೀಲವಲ್ಲದ ಮತ್ತು ಆಹ್ವಾನಿಸಲ್ಪಡದ ಟೀಕೆಗಳು ಅನೇಕ ಜನರ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸಬಹುದು."

"ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಿಮ್ಮ ಹೊಗಳಿಕೆ ಮತ್ತು ಟೀಕೆಗಳನ್ನು ನಿಜವಾಗಿಯೂ ಗೌರವಿಸುತ್ತೇನೆ. ಆದರೆ ಯಾವುದೇ ತೀರ್ಮಾನ ಅಥವಾ ತೀರ್ಪನ್ನು ಕೊಡುವ ಮೊದಲು ಸತ್ಯ ಅರಿಯುವ ಪ್ರಯತ್ನ ಮಾಡಿ ಎಂದು ವಿನಂತಿಸುತ್ತೇನೆ." ಎಂದು ಸೋಶಿಯಲ್​ ಮೀಡಿಯಾ ಬಳಕೆದಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಇದನ್ನೂ ಓದಿ: ಪಾಕ್‌ ನೆಲದಲ್ಲೇ ಮುಂಬೈ ದಾಳಿಗೆ ಚಾಟಿ ಬೀಸಿದ ಜಾವೆದ್ ಅಖ್ತರ್‌: 'ಮನೆಗೆ ನುಗ್ಗಿ ಹೊಡೆದಿದ್ದೀರಾ' ಎಂದ ಕಂಗನಾ

ಜಾವೇದ್‌ ಅಖ್ತರ್ ಹೇಳಿದ್ದೇನು?: "ನಾವು ಮುಂಬೈನಿಂದ ಬಂದವರು. ನಮ್ಮ ನಗರದ ಮೇಲೆ ನಡೆದ ದಾಳಿಯನ್ನು ನಾವು ನೋಡಿದ್ದೇವೆ. ಅವರು (ದಾಳಿಕೋರರು) ನಾರ್ವೆ ಅಥವಾ ಈಜಿಪ್ಟ್‌ನಿಂದ ಬಂದವರಲ್ಲ. ಅವರು ಇನ್ನೂ ನಿಮ್ಮ ದೇಶದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ" ಎಂದು ಜಾವೇದ್​ ಅಖ್ತರ್​ ಹೇಳಿದ್ದರು. "ಪಾಕಿಸ್ತಾನಿ ಕಲಾವಿದರಾದ ನುಸ್ರತ್ ಫತೇ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರನ್ನು ಭಾರತದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಆದರೆ ಪಾಕಿಸ್ತಾನವು ಲತಾ ಮಂಗೇಶ್ಕರ್ ಅವರ ಒಂದೇ ಒಂದು ಪ್ರದರ್ಶನವನ್ನೂ ನಡೆಸಿಲ್ಲ" ಎಂದು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಮೇರೆ ಬ್ರದರ್ ಕಿ ದುಲ್ಹನ್, ಚಶ್ಮೆ ಬದ್ದೂರ್ ಮತ್ತು ಡಿಯರ್ ಝಿಂದಗಿ ಚಲನಚಿತ್ರಗಳಲ್ಲಿ ನಟ ಅಲಿ ಜಾಫರ್ ಕಾಣಿಸಿಕೊಂಡಿದ್ದಾರೆ. 2016ರಲ್ಲಿ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 19 ಭಾರತೀಯ ಸೇನಾ ಸಿಬ್ಬಂದಿ ಹತ್ಯೆಯಾದ ನಂತರ ಪಾಕಿಸ್ತಾನಿ ನಟರು ಭಾರತೀಯ ಚಿತ್ರಗಳಲ್ಲಿ ನಟಿಸುವುದನ್ನು ನಿರ್ಬಂಧಿಸಲಾಗಿದೆ.

ಮುಂಬೈ ಮೇಲೆ ಪಾಕ್‌ ದುಷ್ಕೃತ್ಯ: ನವೆಂಬರ್ 26, 2008ರಂದು ಉಗ್ರ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೋಯ್ಬಾಗೆ ಸೇರಿದ 10 ಪಾಕಿಸ್ತಾನಿ ಭಯೋತ್ಪಾದಕರು ಮುಂಬೈನಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಕೊಂದು ಹಾಕಿದ್ದರು. 26/11 ದಾಳಿಯ ಪ್ರಮುಖ ಸಂಚುಕೋರರನ್ನು ಶಿಕ್ಷಿಸದ ಪಾಕಿಸ್ತಾನದ ನಡೆಯನ್ನು ಭಾರತ ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.