ತಮಿಳುನಾಡು (ಚೆನ್ನೈ): ಸಮಸ್ಯೆಯ ಬಗ್ಗೆ ಇರುವ ಮನೋಭಾವವೇ ನಿಜವಾದ ಸಮಸ್ಯೆ ಎಂದು ನಟಿ ಹಾಗೂ ಯೋಗ ತಜ್ಞೆ ಶಿಲ್ಪಾ ಶೆಟ್ಟಿ ಸೋಮವಾರ ಹೇಳಿದ್ದಾರೆ. ರೋಹಿತ್ ಶೆಟ್ಟಿಯವರ ವೆಬ್ ಸೀರೀಸ್ 'ಇಂಡಿಯನ್ ಪೊಲೀಸ್ ಫೋರ್ಸ್' ಸೆಟ್‌ನಲ್ಲಿ ಕಾಲು ಮುರಿತದಿಂದ ಚೇತರಿಸಿಕೊಳ್ಳುತ್ತಿರುವ ನಟಿ, ವೀಲ್ಚೇರ್ನಲ್ಲಿ ಕುಳಿತು ಕೆಲವು ಯೋಗ ಸ್ಟ್ರೆಚ್‌ಗಳನ್ನು ಮಾಡಿದ ವಿಡಿಯೋ ಕ್ಲಿಪ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಸಮಸ್ಯೆಯು ನಿಜವಾಗಿಯೂ ಸಮಸ್ಯೆಯೇ ಅಥವಾ ಸಮಸ್ಯೆಯ ಬಗೆಗಿನ ನಮ್ಮ ಮನೋಭಾವವೇ ನಿಜವಾದ ಸಮಸ್ಯೆಯೇ?" ಎಂದು ಪ್ರಶ್ನಿಸಿದ್ದಾರೆ.
"ಈ ಆಲೋಚನೆಯು ಇಂದು ಬೆಳಗ್ಗೆ ನನ್ನನ್ನು ಯೋಚಿಸುವಂತೆ ಮಾಡಿತು. ಗಾಯವು ನನ್ನ ದಿನಚರಿಯನ್ನು ಆನಂದಿಸುವುದಕ್ಕೆ ಏಕೆ ತಡೆಯಾಗಬೇಕು? ಮತ್ತು ನಾನು ಅದಕ್ಕೆ ಆ ಶಕ್ತಿಯನ್ನು ನೀಡುವುದಿಲ್ಲ ಎಂದು ನಾನು ನಿರ್ಧರಿಸಿದೆ. ಇಂದಿನ ಯೋಗಾಭ್ಯಾಸವು ಅತ್ಯಂತ ಸರಳ ಮತ್ತು ಸುಲಭವಾದ ಭಂಗಿಯನ್ನು ಒಳಗೊಂಡಿದೆ.
ತಾಡಾಸಾನ (ತಾಳೆ ಮರದ ಭಂಗಿ) ಇದು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಪಕ್ಕಕ್ಕೆ ಉತ್ತಮವಾದ ಹಿಗ್ಗುವಿಕೆಯನ್ನು ಒದಗಿಸುತ್ತದೆ ಮತ್ತು ಓರೆಯಾದ ಸ್ನಾಯುಗಳಿಗೆ ಉತ್ತಮ ಚಲನೆಯನ್ನು ನೀಡುತ್ತದೆ ಮತ್ತು ಬೆನ್ನುಮೂಳೆಗೆ ನಮ್ಯತೆಯನ್ನು ನೀಡುತ್ತದೆ ಎಂದು ಅವರು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದರ ನಂತರ ಅವರು ಗೋಮುಖಾಸನ (ಹಸು ಮುಖದ ಭಂಗಿ)ವನ್ನು ಪರಿಚಯಿಸಿದರು. ಇದು ದೇಹದ ಭಂಗಿಯನ್ನು ಸುಧಾರಿಸುವುದಲ್ಲದೇ, ಭುಜಗಳು ಮತ್ತು ಟ್ರೈಸಿಪ್ಸ್ಗಳನ್ನು ವಿಸ್ತರಿಸುತ್ತದೆ. ಇದಲ್ಲದೇ ಇದು ಎದೆ ಮತ್ತು ಶ್ವಾಸಕೋಶ ತೆರೆಯಲು ಸಹಾಯ ಮಾಡುತ್ತದೆ. ನೀವು ಹೆಪ್ಪುಗಟ್ಟಿದ ಭುಜವನ್ನು ಹೊಂದಿದ್ದರೆ ಅದರ ನಿವಾರಣೆಗೆ ಇದು ಸಹಾಯಕವಾಗಲಿದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ಓದಿ: ವಾರಾಂತ್ಯಕ್ಕೆ ವಿಶ್ವದಾದ್ಯಂತ ಕಮಾಲ್ ಮಾಡಿದ ಬ್ರಹ್ಮಾಸ್ತ್ರ.. ನಾಲ್ಕು ದಿನದಲ್ಲಿ ಗಳಿಸಿದ್ದೆಷ್ಟು?