ETV Bharat / entertainment

'ಭವಿಷ್ಯದ ಚಿಂತೆ ಕಾಡುತಿದೆ'.. ರಶ್ಮಿಕಾ ಡೀಪ್​ಫೇಕ್​ ವಿಡಿಯೋದಲ್ಲಿರುವ ಅಸಲಿ ಮಹಿಳೆ ಪ್ರತಿಕ್ರಿಯೆ - etv bharat kannada

Rashmika mandanna deep fake video: ನಟಿ ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋ ವೈರಲ್​ ಆಗುತ್ತಿದ್ದು, ಈ ಮಧ್ಯೆ ವಿಡಿಯೋದಲ್ಲಿರುವ ಮೂಲ( ಅಸಲಿ ಅಥವಾ ನಿಜವಾದ)​ ಮಹಿಳೆ ಪ್ರತಿಕ್ರಿಯಿಸಿದ್ದಾರೆ.

Original woman in Rashmika mandannas deepfake video reacts
'ಮನಸ್ಸಿಗೆ ನೋವಾಯಿತು'.. ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋದಲ್ಲಿರುವ ಒರಿಜಿನಲ್ ಮಹಿಳೆ ಪ್ರತಿಕ್ರಿಯೆ
author img

By ETV Bharat Karnataka Team

Published : Nov 7, 2023, 3:53 PM IST

Updated : Nov 7, 2023, 4:39 PM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ (ಎಐ) ತಂತ್ರಜ್ಞಾನ ಬಳಸಿ ಯುವತಿಯೊಬ್ಬರ ಶರೀರಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಅಂಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ, ಇದೀಗ ರಶ್ಮಿಕಾ ಮಂದಣ್ಣ ನಕಲಿ ವಿಡಿಯೋದಲ್ಲಿರುವ ಮೂಲ( ಅಸಲಿ)​ ಮಹಿಳೆ ಪ್ರತಿಕ್ರಿಯಿಸಿದ್ದಾರೆ.

Original woman in Rashmika mandannas deepfake video reacts
'ಮನಸ್ಸಿಗೆ ನೋವಾಯಿತು'.. ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋದಲ್ಲಿರುವ ಒರಿಜಿನಲ್ ಮಹಿಳೆ ಪ್ರತಿಕ್ರಿಯೆ

ಅಕ್ಟೋಬರ್​ 8ರಂದು ಆಂಗ್ಲೋ ಇಂಡಿಯನ್​ ಯುವತಿ ಝರಾ ಪಟೇಲ್​ ಎಂಬವರು ತಮ್ಮ ವಿಡಿಯೋ ಹಂಚಿಕೊಂಡಿದ್ದರು. ಫಿಟ್​ ಡ್ರೆಸ್​ ಹಾಕಿ ಲಿಫ್ಟ್​ ಏರುವ ದೃಶ್ಯ ಇದಾಗಿತ್ತು. ಆದರೆ, ಇದೇ ವಿಡಿಯೋಗೆ ಯಾರೋ ಕಿಡಿಗೇಡಿಗಳು ಎಐ ತಂತ್ರಜ್ಞಾನ ಬಳಸಿ ಝರಾ ಶರೀರಕ್ಕೆ ರಶ್ಮಿಕಾ ಮುಖವನ್ನು ಅಂಟಿಸಿ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆಯುವುದರ ಜೊತೆಗೆ ಸಖತ್​ ವೈರಲ್​ ಆಗಿತ್ತು. ಜನರು ಕೂಡ ಇದು ನಟಿ ರಶ್ಮಿಕಾ ಮಂದಣ್ಣ ಅವರು ಅಂತಾನೇ ಭಾವಿಸಿದ್ದರು.

ಆದರೆ, ಈ ವಿಡಿಯೋ ಫ್ಯಾಕ್ಟ್​ ಚೆಕ್​ ಮಾಡಿಸಿದ ಭಾರತೀಯ ಪತ್ರಕರ್ತ ಅಭಿಷೇಕ್​ ಕುಮಾರ್​ ಎಂಬವರು ಇದು ನಕಲಿ ಎಂದು ಸಾಬೀತುಪಡಿಸಿದರು. ಮೂಲ ವಿಡಿಯೋವನ್ನು ಪತ್ತೆ ಹಚ್ಚಿ ಎಡಿಟೆಡ್​ ಹಾಗೂ ಒರಿಜಿನಲ್​ ಎರಡೂ ವಿಡಿಯೋಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದರು. ವೈರಲ್​ ಆಗುತ್ತಿರುವ ರಶ್ಮಿಕಾರದ್ದೇ ಎನ್ನಲಾದ ವೈರಲ್​ ವಿಡಿಯೋ ನಿಜವಾಗಿಯೂ ಅವರದ್ದಲ್ಲ. ಆಂಗ್ಲೋ ಇಂಡಿಯನ್​ ಯುವತಿ ಝರಾ ಪಟೇಲ್ ಅವರದ್ದು ಎಂದು ಸ್ಪಷ್ಟಪಡಿಸಿದ್ದರು. ನಿನ್ನೆ ಸಂಪೂರ್ಣವಾಗಿ ಇದೇ ವಿಚಾರ ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಆ ಬಳಿಕ, ಈ ಡೀಪ್​ಫೇಕ್​ ವಿಡಿಯೋ ಕುರಿತು ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದರು. 'ನನಗೆ ಈ ವಿಚಾರ ನಿಜಕ್ಕೂ ನೋವುಂಟು ಮಾಡಿದೆ' ಎಂದು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ, ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​, ಈ ರೀತಿಯ ವಿಡಿಯೋ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿನ ಒರಿಜಿನಲ್​ ಮಹಿಳೆ ಆಂಗ್ಲೋ ಇಂಡಿಯನ್​ ಯುವತಿ ಝರಾ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನಟಿ ರಶ್ಮಿಕಾ ಮಂದಣ್ಣ ಫೇಕ್​ ವಿಡಿಯೋ ವೈರಲ್; 'ಕ್ರಮ ಕೈಗೊಳ್ಳಿ' ಎಂದ ಅಮಿತಾಭ್​ ಬಚ್ಚನ್​

ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಹಾಕಿಕೊಂಡಿರುವ ಝರಾ, "ನನ್ನ ಶರೀರಕ್ಕೆ ಜನಪ್ರಿಯ ನಟಿಯ ಮುಖ ಎಡಿಟ್​ ಮಾಡಿದ ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ನಕಲಿ ವಿಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ರೀತಿ ಮಾಡಿರುವುದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಇಲ್ಲಿ ಏನಾಗುತ್ತಿದೆ ಎಂದು ತಿಳಿದು ನಾನು ವಿಚಲಿತಳಾಗಿದ್ದೇನೆ ಮತ್ತು ಅಸಾಮಾಧಾನಗೊಂಡಿದ್ದೇನೆ. ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಬಗ್ಗೆ ಚಿಂತೆ ಕಾಡತೊಡಗಿದೆ. ಅವರಿನ್ನು ಸೋಷಿಯಲ್​ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ಇನ್ನೂ ಹೆಚ್ಚು ಭಯ ಪಡುವಂತಾಗಿದೆ. ದಯವಿಟ್ಟು, ಯಾವುದೇ ವಿಡಿಯೋ, ಫೋಟೋ ನೋಡುವ ಮುನ್ನ, ಶೇರ್​ ಮಾಡುವ ಮೊದಲು ಅವರ ನಿಜಾಂಶವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಇಂಟರ್ನೆಟ್​ನಲ್ಲಿ ಬರುವುದು ಎಲ್ಲವೂ ನಿಜವಲ್ಲ" ಎಂದು ಬರೆದುಕೊಂಡಿದ್ದಾರೆ.

ಡೀಪ್​ಫೇಕ್​ ಎಂದರೇನು?: ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ (ಎಐ) ಎಂಬ ತಂತ್ರಜ್ಞಾನವಿದೆ. ಇದನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ದೇಹಕ್ಕೆ ಮತ್ಯಾರದ್ದೋ ಮುಖವನ್ನು ಜೋಡಿಸಿ ಒರಿಜಿನಲ್​ ಆಗಿ ಕಾಣುವಂತೆ ಮಾಡಲಾಗುತ್ತದೆ. ಇದು ನೋಡುವಾಗ ನೈಜವಾಗಿಯೇ ಕಾಣಿಸುತ್ತವೆ. ಈ ತಂತ್ರಜ್ಞಾನವನ್ನು ಬಳಸಿ ಅನೇಕರು ಇಂತಹ ಕಿಡಿಗೇಡಿ ಕೆಲಸವನ್ನು ಮಾಡುವುದುಂಟು. ಹೀಗಾಗಿ ಸೋಷಿಯಲ್​ ಮೀಡಿಯಾಗಳಲ್ಲಿ ನೀವು ಫೋಟೋ, ವಿಡಿಯೋ ​ಅಪ್​ಲೋಡ್​ ಮಾಡುವ ಮುನ್ನ ಎಚ್ಚರಿಕೆಯಿಂದಿರಬೇಕಾದುದು ಅಗತ್ಯ.

ಇದನ್ನೂ ಓದಿ: 'ಭಯದ ಜೊತೆಗೆ ತುಂಬಾ ನೋವಾಯಿತು': ಫೇಕ್​ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

Last Updated : Nov 7, 2023, 4:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.