ಬಾಲಿವುಡ್ ತಾರಾ ದಂಪತಿ ಕಾಜೋಲ್ ಮತ್ತು ಅಜಯ್ ದೇವ್ಗನ್ ಮುದ್ದು ಮಗಳು ನೈಸಾ ದೇವ್ಗನ್. ಇದೀಗ ಮತ್ತೊಮ್ಮೆ ಟ್ರೋಲಿಗರ ಆಟಕ್ಕೆ ತುತ್ತಾಗಿದ್ದಾರೆ ದೇವ್ಗನ್ ದಂಪತಿಯ ಪುತ್ರಿ. ಸ್ನೇಹಿತ ಓರ್ಹಾನ್ ಅವತ್ರಾಮಣಿ (Orhan Awatramani) ಮತ್ತು ರೂಮರ್ ಬಾಯ್ಫ್ರೆಂಡ್ ವೇದಾಂತ್ ಮಹಾಜನ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಇತ್ತೀಚೆಗೆ ನೈಸಾ ದೇವ್ಗನ್ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದು, ಅವರೊಂದಿಗಿನ ಫೋಟೋ ಟ್ರೋಲ್ ಆಗಿದೆ.
ವದಂತಿಯ ಗೆಳೆಯ ವೇದಾಂತ್ ಮಹಾಜನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಾರ್ಟಿಯ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೈಸಾ ದೇವ್ಗನ್ ಸಖತ್ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆರಗುಗೊಳಿಸುವ ನೋಟ ಬೀರಿರುವ ಸ್ಟಾರ್ ಕಿಡ್, ರೂಮರ್ ಬಾಯ್ಫ್ರೆಂಡ್ ವೇದಾಂತ್ ಜೊತೆ ಕ್ಲೋಸ್ ಅಪ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನೈಸಾ ವೇದಾಂತ್ ಜೋಡಿ ನೆಟ್ಟಿಗರ ಗಮನ ಸೆಳೆದಿದೆ. ಆನ್ಲೈನ್ಲ್ಲಿ ಫೋಟೋಗಳು ವೈರಲ್ ಆಗಿದೆ. ಸ್ಟಾರ್ ಕಿಡ್ ಫೋಟೋ ಟ್ರೋಲ್ ದಾಳಿಗೊಳಗಾಗಿದೆ.
ವೇದಾಂತ್ ಮಹಾಜನ್ ಓರ್ವ ಉದ್ಯಮಿ. ಈವೆಂಟ್ ಪ್ಲ್ಯಾನಿಂಗ್ ಇಂಡಸ್ಟ್ರಿಯಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಇನ್ನೂ ಸದ್ಯ ನೈಸಾ ಸ್ನೇಹಿತನಾಗಿ ಗುರುತಿಸಿಕೊಂಡಿರುವ ಓರ್ಹಾನ್ ಅವತ್ರಾಮಣಿ ಅವರು ನಟಿ ಜಾನ್ವಿ ಕಪೂರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಇವರನ್ನು ಮಿಸ್ಟರಿ ಮ್ಯಾನ್ ಎಂದೇ ಕರೆಯಲಾಯಿತು.
ಸೋಷಿಯಲ್ ಮೀಡಿಯಾದಲ್ಲಿ ವೇದಾಂತ್ ಮಹಾಜನ್ ಶೇರ್ ಮಾಡಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ, ನೆಟ್ಟಿಗರು ದೇವ್ಗನ್ ಪುತ್ರಿಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ನೆಟ್ಟಿಗರು ಕಾಮೆಂಟ್ ಮೂಲಕ ಬಗೆಬಗೆ ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Ghoomer Trailer: ಇತಿಮಿತಿ ಮೆಟ್ಟಿ ನಿಂತು ಕ್ರಿಕೆಟ್ ಸಾಧನೆ - ಬಲಗೈ ಇಲ್ಲದಿದ್ದರೇನಂತೆ? ಎಡಗೈಯಲ್ಲೇ ಬೌಲಿಂಗ್!
ಸ್ಟಾರ್ ಕಿಡ್ ಟ್ರೋಲ್ಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಮೈಬಣ್ಣ, ಡ್ರೆಸ್ಸಿಂಗ್ ಸ್ಟೈಲ್ ವಿಚಾರವಾಗಿ ಆಗಾಗ್ಗೆ ಟ್ರೋಲ್ಗೆ ಒಳಗಾಗುತ್ತಾರೆ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದ ವೇಳೆ ಸರಿಯಾಗಿ ಹಿಂದಿ ಮಾತನಾಡದ ಕಾರಣ ಅವರನ್ನು ಟೀಕಿಸಲಾಗಿತ್ತು.
ಇದನ್ನೂ ಓದಿ: ನನ್ನ ಸಿನಿ ಜರ್ನಿಯಲ್ಲೇ ನಾನು ಕೇಳಿರುವ ಉತ್ತಮ ಕಥೆ 'ಕೌಸಲ್ಯ ಸುಪ್ರಜಾ ರಾಮ': ಡಾರ್ಲಿಂಗ್ ಕೃಷ್ಣ
ನೈಸಾ ದೇವ್ಗನ್ ಸದ್ಯ ಬಾಲಿವುಡ್ಗೆ ಎಂಟ್ರಿ ಕೊಡುವ ಯಾವುದೇ ಉದ್ದೇಶ ಹೊಂದಿಲ್ಲ. ಆದ್ರೆ ಪೋಷಕರು ಸಾಕಷ್ಟು ಜನಪ್ರಿಯರಾಗಿರುವುದರ ಹಿನ್ನೆಲೆ ನೈಸಾ ಕುಂತರೂ ನಿಂತರೂ ಸುದ್ದಿಯಾಗುತ್ತಾರೆ. ಆಗಾಗ್ಗೆ ಟ್ರೋಲ್ಗೂ ಒಳಗಾಗುತ್ತಾರೆ. ತಾಯಿ ಕಾಜೋಲ್ ಇತ್ತೀಚೆಗಷ್ಟೇ ಈ ಬಗ್ಗೆ ಮಾತನಾಡಿದ್ದರು. ಮಗಳು ಪಾಪರಾಜಿ ಮತ್ತು ಟ್ರೋಲ್ಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾಳೆ. ಪಾಪರಾಜಿಗಳೊಂದಿಗೆ ಹೇಗೆ ವ್ಯವಹರಿಸಬೇಕು, ಟ್ರೋಲ್ಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ನಾವು ಹೇಳಿಕೊಡುವ ಅವಶ್ಯಕತೆ ಇಲ್ಲ. ಅನುಭವಗಳಿಂದ ಪರಿಸ್ಥಿತಿ ಇಭಾಯಿಸುವುದನ್ನು ಕಲಿತಿದ್ದಾಳೆ ಎಂದು ತಿಳಿಸಿದ್ದರು.