ETV Bharat / entertainment

NTR ಶತಮಾನೋತ್ಸವ: ರಜಿನಿಕಾಂತ್ ಸೇರಿದಂತೆ ಗಣ್ಯರು ಭಾಗಿ

author img

By

Published : Apr 28, 2023, 7:29 PM IST

ನಂದಮೂರಿ ತಾರಕ ರಾಮರಾವ್ ಅವರ ಶತಮಾನೋತ್ಸವ ಸಮಾರಂಭ ನಡೆಯಲಿದೆ.

Rajinikanth reaches Vijayawada
NTR ಶತಮಾನೋತ್ಸವ: ರಜನಿಕಾಂತ್ ಸೇರಿದಂತೆ ಗಣ್ಯರು ಭಾಗಿ

ವಿಜಯವಾಡ (ಆಂಧ್ರಪ್ರದೇಶ): ತೆಲುಗಿನ ಖ್ಯಾತ ನಟ, ದಿ. ನಂದಮೂರಿ ತಾರಕ ರಾಮ ರಾವ್ ಅವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗುವ ಸಲುವಾಗಿ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಭಾಗಿಯಾಗಿದ್ದಾರೆ. ಇಂದು ಬೆಳಗ್ಗೆ ಆಂಧ್ರ ಪ್ರದೇಶಕ್ಕೆ ಆಗಮಿಸಿದ್ದು, ನಟ ಬಾಲಕೃಷ್ಣ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ನಂದಮೂರಿ ತಾರಕ ರಾಮರಾವ್ ಅವರ ಪುತ್ರ ಹಾಗೂ ಟಾಲಿವುಡ್ ಖ್ಯಾತ ನಟ ಎನ್. ಬಾಲಕೃಷ್ಣ ಅವರು ಇಲ್ಲಿನ ಗನ್ನವರಂ ವಿಮಾನ ನಿಲ್ದಾಣದಲ್ಲಿ ನಟ ರಜನಿಕಾಂತ್ ಅವರನ್ನು ಬರಮಾಡಿಕೊಂಡರು. ಇಂದು ಸಂಜೆಯ ಕಾರ್ಯಕ್ರಮದಲ್ಲಿ ಸೂಪರ್‌ಸ್ಟಾರ್ ಭಾಗವಹಿಸಲಿದ್ದಾರೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಸೇರಿದಂತೆ ಇತರ ನಾಯಕರು, ಗಣ್ಯರು, ಚಿತ್ರೋದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಾಲಯ್ಯ ಎಂದೇ ಖ್ಯಾತರಾಗಿರುವ ಬಾಲಕೃಷ್ಣ ಅವರು ಅಭಿಮಾನಿಗಳಿಗೆ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ.

ತೆಲುಗು ರಾಜ್ಯಗಳ ಜನ ಮನದಲ್ಲಿ ನಂದಮೂರಿ ತಾರಕ ರಾಮರಾವ್ ಅವರು ದೇವಮಾನವರಾಗಿ ಅಚ್ಚಳಿಯದೇ ಉಳಿದಿದ್ದಾರೆ. ತೆಲುಗು ಚಿತ್ರರಂಗದ ಪ್ರಸಿದ್ಧ ನಟ. 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಇವರು ಪೌರಾಣಿಕ ಪಾತ್ರಗಳನ್ನು ಮಾಡಲು ಹೆಸರುವಾಸಿಯಾಗಿದ್ದರು. ಕೃಷ್ಣಾರ್ಜುನ ಯುದ್ಧಂ (1962) ಮತ್ತು ದಾನ ವೀರ ಶೂರ ಕರ್ಣ ಸೇರಿದಂತೆ 17ಕ್ಕೂ ಹೆಚ್ಚು ಚಿತ್ರಗಳಲ್ಲಿ ಎನ್​​​ಆರ್ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮೋಘ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರು 1982ರಲ್ಲಿ ತೆಲುಗು ದೇಶಂ ಪಕ್ಷ ಕಟ್ಟುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಒಂಬತ್ತು ತಿಂಗಳಲ್ಲಿ ಅಧಿಕಾರಕ್ಕೆ ಬರುವ ಮೂಲಕ ದಾಖಲೆ ಸೃಷ್ಟಿಸಿದರು.

ಇದನ್ನೂ ಓದಿ: 'ಉರುಳೋ ಕಾಲವೇ' ಅಂತಿದ್ದಾರೆ 'ಮತ್ತೆ ಮದುವೆ'ಯಾದ ಪವಿತ್ರಾ ಲೋಕೇಶ್ - ನರೇಶ್

ಆಂಧ್ರಪ್ರದೇಶದಲ್ಲಿ 1923ರ ಮೇ 28ರಂದು ಜನಿಸಿದ ನಂದಮೂರಿ ತಾರಕ ರಾಮರಾವ್ 1983 ರಿಂದ 1989ರವರೆಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 1994ರ ಡಿಸೆಂಬರ್​ನಲ್ಲಿ ಭರ್ಜರಿ ವಿಜಯದೊಂದಿಗೆ ಟಿಡಿಪಿಯನ್ನು ಮತ್ತೆ ಅಧಿಕಾರಕ್ಕೆ ತಂದರು. ಆದರೆ, ಕೆಲವು ತಿಂಗಳ ನಂತರ ಅವರ ಅಳಿಯನಿಂದ ಬಂಡಾಯವನ್ನು ಎದುರಿಸಿದರು. ಎನ್‌ಟಿಆರ್‌ ಅವರ ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ ಅವರು ಪಕ್ಷ ಮತ್ತು ಆಡಳಿತಾತ್ಮಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಚಂದ್ರಬಾಬು ನಾಯ್ಡು ಅಸಮಾಧಾನಗೊಂಡಿದ್ದರು. ಎನ್‌ಟಿಆರ್‌ ಅವರ ಮೊದಲ ಹೆಂಡತಿಯ ಮಕ್ಕಳ ಬೆಂಬಲದೊಂದಿಗೆ, ಚಂದ್ರಬಾಬು ನಾಯ್ಡು ಸೆಪ್ಟೆಂಬರ್ 1995ರಲ್ಲಿ ಎನ್‌ಟಿಆರ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಟಿಡಿಪಿ ಸಂಸ್ಥಾಪಕರು ಜನವರಿ 18, 1996ರಂದು ಹೃದಯ ಸ್ತಂಭನದಿಂದ ನಿಧನರಾದರು.

ಇದನ್ನೂ ಓದಿ: ದೈವದೊಂದಿಗೆ ಡಿವೈನ್​ ಸ್ಟಾರ್​: ನೇಮೋತ್ಸವದಲ್ಲಿ ರಿಷಬ್​ ಶೆಟ್ಟಿ ಭಾಗಿ, ವಿಡಿಯೋ ನೋಡಿದ್ರಾ?

ಇಂದು ನಡೆಯುತ್ತಿರುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ರಜನಿಕಾಂತ್ ಆಗಮಿಸಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಇವರು ಮುಂದೆ ಲಾಲ್​ ಸಲಾಮ್​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದನ್ನು ಸ್ವತಃ ಅವರ ಮಗಳು ಐಶ್ವರ್ಯಾ ಅವರೇ ನಿರ್ದೇಶಿಸುತ್ತಿದ್ದಾರೆ. ರಜಿನಿಕಾಂತ್ ಅತಿಥಿ ಪಾತ್ರ ವಹಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.