ETV Bharat / entertainment

Neeyat trailer: ವಿದ್ಯಾ ಬಾಲನ್​ ಅಭಿನಯದ 'ನೀಯತ್' ಚಿತ್ರದ ಟ್ರೇಲರ್​ ಬಿಡುಗಡೆ - ಮಿಷನ್ ಮಂಗಲ್ ಚಿತ್ರ

ನಟಿ ವಿದ್ಯಾ ಬಾಲನ್​ ಅಭಿನಯದ 'ನೀಯತ್' ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ. ನಾಲ್ಕು ವರ್ಷಗಳ ನಂತರ 'ಜಲ್ಸಾ' ತಾರೆ ಮತ್ತೆ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

Neeyat trailer
ವಿದ್ಯಾ ಬಾಲನ್​
author img

By

Published : Jun 22, 2023, 7:52 PM IST

ಬಾಲಿವುಡ್​ ನಟಿ ವಿದ್ಯಾ ಬಾಲನ್​ 'ನೀಯತ್' ಎಂಬ ಮರ್ಡರ್​ ಮಿಸ್ಟರಿಯೊಂದಿಗೆ​ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರವನ್ನು ಅನು ಮೇನನ್​ ನಿರ್ದೇಶಿಸಿದ್ದಾರೆ. ಇಂದು 'ನೀಯತ್'​ ಟ್ರೇಲರ್​ ಅನಾವರಣಗೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ವಿದ್ಯಾ ಬಾಲನ್​ ಟ್ರೇಲರ್​ನಲ್ಲಿ ಕೊಲೆ ರಹಸ್ಯ ಭೇದಿಸುವ ಪತ್ತೆದಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಮಿಷನ್ ಮಂಗಲ್ ಚಿತ್ರದ ಬಳಿಕ ನಾಲ್ಕು ವರ್ಷಗಳ ನಂತರ ವಿದ್ಯಾ ಬಾಲನ್ ಮತ್ತೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನು ಮೇನನ್​ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಕಪೂರ್, ರಾಹುಲ್ ಬೋಸ್, ನೀರಜ್ ಕಬಿ, ಶಹಾನಾ ಗೋಸ್ವಾಮಿ, ಅಮೃತ ಪುರಿ, ದೀಪನ್ನಿತಾ ಶರ್ಮಾ, ನಿಕಿ ವಾಲಿಯಾ, ಶಶಾಂಕ್ ಅರೋರಾ, ಪ್ರಜಕ್ತಾ ಕೋಲಿ ಮತ್ತು ದಾನೇಶ್ ರಜ್ವಿ ಕೂಡ ನಟಿಸಿದ್ದಾರೆ.

ನೀಯತ್​ನಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡ ವಿದ್ಯಾ, "ನೀಯತ್​ನಲ್ಲಿ ಡಿಟೆಕ್ಟಿವ್ ಮೀರಾ ರಾವ್ ನಿಮ್ಮ ದೈನಂದಿನ, ಕ್ಲಾಸಿಕ್ ಪತ್ತೇದಾರಿ ಅಲ್ಲ, ಅದು ನನಗೆ ತುಂಬಾ ಖುಷಿ ನೀಡಿದೆ. ಇದು ಒಂದು ಅಸಾಮಾನ್ಯ ಮತ್ತು ಚಮತ್ಕಾರಿ ಪಾತ್ರ. ಆದರೆ ನಾನು ಪ್ರತಿಭಾವಂತ ನಟರೊಂದಿಗೆ ಕೆಲಸ ಮಾಡಿದ್ದೇನೆ." ಎಂದರು.

ಇದನ್ನೂ ಓದಿ: Adipurush: ವಿವಾದಕ್ಕೊಳಗಾದ ಭಗವಾನ್ ಹನುಮಂತನ ಡೈಲಾಗ್ಸ್​​ ಸರಿಪಡಿಸಿದ ಚಿತ್ರತಂಡ - ವಿಡಿಯೋ ನೋಡಿ

ಮುಂದುವರೆದು, "ಈ ಚಿತ್ರವು ಶಕುಂತಲಾ ದೇವಿ ನಂತರ ಅನು ಮೇನನ್​ ಅವರೊಂದಿಗಿನ ನನ್ನ ಎರಡನೇ ಜರ್ನಿಯಾಗಿದೆ. ವಿಕ್ರಮ್, ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಮತ್ತು ಪ್ರೈಮ್ ವಿಡಿಯೋ ಜೊತೆ ನಾಲ್ಕನೇ ಬಾರಿ ಕೆಲಸ ಮಾಡುತ್ತಿದ್ದೇನೆ. ಈ ಸಿನಿಮಾಕ್ಕಾಗಿ ನಾನು ಅವರೊಂದಿಗೆ ಕೆಲಸ ಮಾಡುವ ಅತ್ಯಂತ ಅದ್ಭುತ ಸಮಯವನ್ನು ಹೊಂದಿದ್ದೇನೆ. ನೀಯತ್ ಬಿಡುಗಡೆಯೊಂದಿಗೆ ನಾನು ಮತ್ತೆ ಚಿತ್ರಮಂದಿರಗಳಿಗೆ ಮರಳಲು ತುಂಬಾ ಸಂತೋಷಪಡುತ್ತೇನೆ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಗಳಿಗಾಗಿ ಕಾಯುತ್ತಿದ್ದೇನೆ" ಎಂದಿದ್ದಾರೆ.

ಶಕುಂತಲಾ ದೇವಿ, ಶೆರ್ನಿ ಮತ್ತು ಜಲ್ಸಾ ಯಶಸ್ವಿ ಸಿನಿಮಾಗಳ ನಂತರ ವಿದ್ಯಾ ಬಾಲನ್​ ಮತ್ತೆ ಥಿಯೇಟರ್​ಗೆ ಮರಳಿದ್ದಾರೆ. ನೀಯತ್ ಜುಲೈ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Mysuru Film city: ಚಿಗುರೊಡೆದ 'ಮೈಸೂರು ಫಿಲ್ಮ್​ ಸಿಟಿ' ಕನಸು: ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದೇನು?

ವಿದ್ಯಾ ಬಾಲನ್​ ಸಿನಿಮಾಗಳಿಂದ ನಾಲ್ಕು ವರ್ಷ ದೂರವಿದ್ದರೂ, ಅಭಿಮಾನಿಗಳಿಗೆ ಸೋಶಿಯಲ್​ ಮೀಡಿಯಾ ಮೂಲಕ ಸನಿಹವಾಗಿದ್ದಾರೆ. ಹೊಸ ಬಗೆಯ ಫೋಟೋಶೂಟ್​ ಮಾಡಿಸುತ್ತ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡುತ್ತಾರೆ. 44ರ ವಯಸ್ಸಿನಲ್ಲಿಯೂ ಪಡ್ಡೆ ಹುಡುಗರ ಕಣ್ಮನ ಸೆಳೆಯುವಲ್ಲಿ ನಟಿ ಯಶಸ್ವಿಯಾಗಿದ್ದಾರೆ.

ವಿಭಿನ್ನ ಕಥೆಯಾಧಾರಿತ 'ಡರ್ಟಿ ಪಿಕ್ಚರ್' ಚಿತ್ರದ ಮೂಲಕ ಬಾಲಿವುಡ್​ನಲ್ಲಿ ಶುಕ್ರದೆಸೆ ಆರಂಭಿಸಿದ ಅವರು ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಮಹಿಳಾ ಪ್ರಧಾನ ಪಾತ್ರಗಳಲ್ಲೇ ಹೆಚ್ಚು ನಟಿಸಿರುವ ಇವರು ಇತ್ತೀಚೆಗೆ ತೆರೆಕಂಡ ಮಿಷನ್ ಮಂಗಲ್​ನಲ್ಲೂ ಯಶಸ್ಸು ಕಂಡಿದ್ದರು. ಸದ್ಯ ತಮ್ಮ ನಟನಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಡರ್ಟಿ ಪಿಕ್ಚರ್ ಚಿತ್ರದ ತಾರೆ, ವೆಬ್​ ಸಿರೀಸ್​ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.