ETV Bharat / entertainment

ವಿವೇಕ್​ ಆತ್ರೇಯ ನಿರ್ದೇಶನದಲ್ಲಿ ನ್ಯಾಚುರಲ್​ ಸ್ಟಾರ್​ ನಾನಿ ಮುಂದಿನ ಸಿನಿಮಾ ಘೋಷಣೆ - ಈಟಿವಿ ಭಾರತ ಕನ್ನಡ

ನ್ಯಾಚುರಲ್​ ಸ್ಟಾರ್​ ನಾನಿಯ 31ನೇ ಸಿನಿಮಾ ಅಧಿಕೃತ ಘೋಷಣೆಯಾಗಿದೆ. ವಿವೇಕ್​ ಆತ್ರೇಯ ನಿರ್ದೇಶನ ಹಾಗೂ ಡಿವಿವಿ ಎಂಟರ್​ಟೈನ್​ಮೆಂಟ್​ ಬ್ಯಾನರ್​ ನಿರ್ಮಿಸಲಿದೆ.

Natural Star Nani next movie announced
ವಿವೇಕ್​ ಆತ್ರೇಯ ನಿರ್ದೇಶನದಲ್ಲಿ ನ್ಯಾಚುರಲ್​ ಸ್ಟಾರ್​ ನಾನಿ ಮುಂದಿನ ಸಿನಿಮಾ ಘೋಷಣೆ
author img

By ETV Bharat Karnataka Team

Published : Oct 21, 2023, 7:46 PM IST

ನ್ಯಾಚುರಲ್​ ಸ್ಟಾರ್​ ನಾನಿ ತಮ್ಮ ಹೊಸ ಸಿನಿಮಾ ಅನೌನ್ಸ್​ ಮಾಡಿದ್ದಾರೆ. 'ಅಂಟೆ ಸುಂದರಾನಿಕಿ'ಯಂತಹ ಕಾಮಿಡಿ ಎಮೋಷನಲ್​ ಸಿನಿಮಾವನ್ನು ನಿರ್ದೇಶಿಸಿದ್ದ ವಿವೇಕ್​ ಆತ್ರೇಯ ಅವರು ನಾನಿಯ 31ನೇ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಈ ವಿಚಾರ ಹಲವು ದಿನಗಳಿಂದ ಸುದ್ದಿಯಲ್ಲಿತ್ತು. ಇದೀಗ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ. ಈ ಸಿನಿಮಾವನ್ನು ಡಿವಿವಿ ಎಂಟರ್​ಟೈನ್​ಮೆಂಟ್​ ಬ್ಯಾನರ್​ ನಿರ್ಮಿಸಲಿದೆ.

ನಾನಿ 31 ಚಿತ್ರದ ಘೋಷಣೆಗೆ ಚಿತ್ರತಂಡ ವಿಡಿಯೋವೊಂದನ್ನು ಹಂಚಿಕೊಂಡಿದೆ. ಡಿವಿವಿ ಎಂಟರ್​ಟೈನ್​ಮೆಂಟ್ ಎಕ್ಸ್​ ಖಾತೆಯಲ್ಲಿ ನಾನಿ 31ರ ಮಾಹಿತಿ ಹೊರಬಿದ್ದಿದ್ದು, 'ನಮ್ಮ ನ್ಯಾಚುರಲ್ ಸ್ಟಾರ್ ನಾನಿ ಮತ್ತು ವಿವೇಕ್ ಆತ್ರೇಯ ಜೋಡಿಯ ಮೋಸ್ಟ್ ಲವ್ವೆಬಲ್ ಕಾಂಬೋ ಮತ್ತೆ ಬಂದಿದೆ' ಎಂದು ಬರೆದುಕೊಂಡಿದೆ. ಅಕ್ಟೋಬರ್​ 24 ರಂದು ಸಿನಿಮಾ ಸೆಟ್ಟೇರಲಿದ್ದು, ಅಂದು ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಥ್ರಿಲ್ಸ್, ಚಿಲ್ ಮತ್ತು ಮೋಜಿಗಾಗಿ ಸಿದ್ಧರಾಗಿ ಎಂದು ತಿಳಿಸಿದೆ. ವಿಡಿಯೋದಲ್ಲಿನ ಹಿನ್ನೆಲೆ ಸಂಗೀತವು ಆಕ್ಷನ್ ಎಂಟರ್‌ಟೈನರ್‌ನಂತಿದೆ.

ಆದರೆ, ಈ ಬಾರಿ ವಿವೇಕ್​ ಆತ್ರೇಯ ನಿರ್ದೇಶನದಲ್ಲಿ 'ಅಂಟೆ ಸುಂದರಾನಿಕಿ'ಯಂತಹ ಸಾಫ್ಟ್​ ಸಿನಿಮಾದ ಬದಲು ಒಳ್ಳೆ ಆ್ಯಕ್ಷನ್​ ಅಂಶಗಳಿರುವ ಸಿನಿಮಾವೊಂದು ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. 'ಮೆಂಟಲ್ ಮಡಿಲೊ', 'ಬ್ರೋಚೆವರೆವರುರಾ', 'ಅಂಟೆ ಸುಂದರಾನಿಕಿ'.. ಹೀಗೆ ಡಿಫರೆಂಟ್​ ಶೀರ್ಷಿಕೆ ಕೊಟ್ಟಿರುವ ವಿವೇಕ್​ ಈ ಚಿತ್ರಕ್ಕೂ ವಿಭಿನ್ನ ಟೈಟಲ್​ ಫೈನಲ್​ ಮಾಡಿದ್ದಾರಂತೆ. 'ಸರಿಪೋದಾ ಶನಿವಾರಂ' ಎಂದು ಶೀರ್ಷಿಕೆ ಇಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 'Hi Nanna': ನಾನಿಯ 'ಹಾಯ್ ನಾನ್ನ'ಗೆ ಮೃಣಾಲ್​ ಠಾಕೂರ್​ ನಾಯಕಿ: ಅಪ್ಪ-ಮಗಳ ಬಾಂಧವ್ಯದ ಕಥೆಯಿದು..

ಇದರೊಂದಿಗೆ ನಾನಿಯ 31ನೇ ಚಿತ್ರಕ್ಕೆ ನಿರ್ದೇಶಕ ವಿವೇಕ್​ ಆತ್ರೇಯ ಆಕ್ಷನ್​ ಕಟ್​ ಹೇಳುತ್ತಿದ್ದಾರೆ. ಮಾಹಿತಿ ಪ್ರಕಾರ, ಈ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳು ಈಗಾಗಲೇ ಮುಗಿದಿದೆ. ಪ್ರೀ-ಪ್ರೊಡಕ್ಷನ್​ ಕೆಲಸ ಕೂಡ ಅಂತಿಮ ಹಂತಕ್ಕೆ ಬಂದಿದೆ. ಪ್ರಿಯಾಂಕಾ ಮೋಹನ್​ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಡಿವಿವಿ ದಾನಯ್ಯ ನಿರ್ಮಾಣದ ಮತ್ತೊಂದು ಚಿತ್ರವಾದ ಪವನ್​ ಕಲ್ಯಾಣ್​ ಅವರ 'ಓಜಿ'ಗೂ ಇವರೇ ಹೀರೋಯಿನ್​. ಒಂದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ಪ್ರಿಯಾಂಕಾ ಮೋಹನ್​ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ನಾನಿ 30ನೇ ಸಿನಿಮಾ: ನಾನಿ ನಟನೆಯ 30ನೇ ಸಿನಿಮಾ 'ಹಾಯ್​ ನಾನ್ನ'. 'ದಸರಾ' ಬ್ಲಾಕ್​ಬಸ್ಟರ್​ ಆದ ಬಳಿಕ ನಾನಿ ನಟಿಸುತ್ತಿರುವ ಚಿತ್ರವಿದು. ಈಗಾಗಲೇ ಸಿನಿಮಾದ ಟೀಸರ್​ ಕೂಡ ಬಿಡುಗಡೆಯಾಗಿದೆ. ಎಮೋಷನಲ್ ಫ್ಯಾಮಿಲಿ ಎಂಟರ್ಟೈನ್​ಮೆಂಟ್​ ಸಬ್ಜೆಕ್ಟ್​ ಒಳಗೊಂಡ ಈ ಚಿತ್ರ ಅಪ್ಪ ಮತ್ತು ಮಗಳ ಬಾಂಧವ್ಯದ ಸುತ್ತ ಸುತ್ತುತ್ತದೆ. ತಂದೆ ಪಾತ್ರದಲ್ಲಿ ನಾನಿ ಹಾಗೂ ಮಗಳ ಪಾತ್ರದಲ್ಲಿ ಬೇಬಿ ಕಿಯಾರಾ ಖಾನ್ ಹಾಗೂ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ನಾಯಕಿಯಾಗಿದ್ದಾರೆ.

ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವೈರ ಎಂಟರ್ಟೈನ್​ಮೆಂಟ್ಸ್​ ಬ್ಯಾನರ್ ಅಡಿ ಮೋಹನ್ ಚೆರುಕುರಿ, ಡಾ. ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾನು ಜಾನ್ ವರ್ಗೀಸ್ ಐಎಸ್​ಸಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ. ಮತ್ತೊಂದೆಡೆ, ಚಿತ್ರದಲ್ಲಿ 'ಸಲಾರ್' ಬ್ಯೂಟಿ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ನ್ಯಾಚುರಲ್ ಸ್ಟಾರ್ ನಾನಿಗೆ ಕಿಚ್ಚ ಸುದೀಪ್ ಸಾಥ್: 'ಹಾಯ್ ನಾನ್ನ' ಸಿನಿಮಾ ಸಾಂಗ್​ ರಿಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.