ETV Bharat / entertainment

ನ್ಯಾಚುರಲ್ ಸ್ಟಾರ್ ನಾನಿ ಹೊಸ ಸಿನಿಮಾಗೆ ಸಾಥ್ ನೀಡಿದ ಮೆಗಾ ಸ್ಟಾರ್ - ETV Bharat kannada News

ಚಿತ್ರದ ಟೈಟಲ್ ರಿವೀಲ್​ ಮಾಡದೆ ಮೂವತ್ತನೇ ಸಿನಿಮಾದ ಅಪ್ಡೇಟ್ ಹಂಚಿಕೊಂಡ ನ್ಯಾಚುರಲ್ ಸ್ಟಾರ್ ನಾನಿ.

Clap for Mega Star Chiranjeevi's movie
ಮೆಗಾ ಸ್ಟಾರ್ ಚಿರಂಜೀವಿ ಚಿತ್ರಕ್ಕೆ ಕ್ಲ್ಯಾಪ್
author img

By

Published : Feb 2, 2023, 7:22 AM IST

ಹೊಸ ವರ್ಷದ ಆರಂಭದ ದಿನ ನ್ಯಾಚುರಲ್ ಸ್ಟಾರ್ ನಾನಿ ತಮ್ಮ 30ನೇ ಸಿನಿಮಾದ ಅಪ್ಡೇಟ್ ಹಂಚಿಕೊಂಡಿದ್ದಾರೆ. ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ಅಡಿ ನಾನಿ ಸಿನಿ ಕೆರಿಯರ್​ನ ಮೂವತ್ತನೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿಕ್ಕ viಡಿಯೋ ಝಲಕ್ ಮೂಲಕ ಗಮನ ಸೆಳೆದಿದ್ದ ಚಿತ್ರತಂಡ ಕೆಲ ದಿನಗಳ ಹಿಂದೆ ಹೆಸರಿಡದ ಈ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿತ್ತು.

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು, ಅಶ್ವಿನಿ ದತ್ ಕ್ಯಾಮರಾ ಚಾಲನೆ ಮಾಡುವ ಮೂಲಕ ಸಿನಿಮಾಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಬುಚ್ಚಿ ಬಾಬು, ಕಿಶೋರ್ ತಿರುಮಲ, ಹನು ರಾಘವಪುಡಿ, ವಸಿಷ್ಠ ಮತ್ತು ವಿವೇಕ್ ಆತ್ರೇಯ ಚಿತ್ರದ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಜೇಂದ್ರ ಪ್ರಸಾದ್ ಚಿತ್ರದ ಸ್ಕ್ರಿಪ್ಟ್ ಚಿತ್ರತಂಡಕ್ಕೆ ಹಸ್ತಾಂತರಿಸಿದರು. ಪಸಲ ಕರುಣ್ ಕುಮಾರ್, ಗಿರೀಶ್ ಅಯ್ಯರ್, ಚೋಟ ಕೆ ನಾಯ್ಡು, ಸುರೇಶ್ ಬಾಬು, ದಿಲ್ ರಾಜು,14 ರೀಲ್ಸ್ ಗೋಪಿ-ರಾಮ್ ಅಚಂತ, ಎಕೆ ಅನಿಲ್ ಸುಂಕರ, ಮೈತ್ರಿ ರವಿ, ಡಿವಿವಿ ದಾನಯ್ಯ, ಶ್ರವತಿ ರವಿ ಕಿಶೋರೆ, ಕೆ.ಎಸ್ ರಾವ್, ಸಾಹು ಗರಪಾಟಿ, ನಿಹಾರಿಕ ಕೊನಿಡೇಲ ಸೇರಿದಂತೆ ಹಲವರು ಚಿತ್ರದ ಮುಹೂರ್ತದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Mega star with film team
ಚಿತ್ರ ತಂಡದೊಂದಿಗೆ ಮೆಗಾ ಸ್ಟಾರ್​

ನಾನಿ ಮೂವತ್ತನೆ ಚಿತ್ರ ಇದಾಗಿದ್ದು, ಶೌರ್ಯುವ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ ಎನ್ನಲಾಗಿದೆ.

ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ದಸರಾ ಟೀಸರ್​ : ಕಳೆದ 3 ದಿನಗಳ ಹಿಂದೆ ನಾನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಮೆಗಾ ಪ್ರಾಜೆಕ್ಟಾ ಪ್ಯಾನ್​ ಇಂಡಿಯಾ ಸಿನಿಮಾ ' ದಸರಾ ' ಟೀಸರ್​ ಬಿಡುಗಡೆ ಆಗಿತ್ತು. ಈ ಸಿನಿಮಾದ ಟೀಸರ್​ ಕನ್ನಡ, ಹಿಂದಿ, ತಮಿಳು, ಮಾಲಯಾಳಂ ಭಾಷೆಯ ಸ್ಟಾರ್​ ನಟರು ರಿಲೀಸ್​ ಮಾಡಿದ್ದರು. ಮಾಸ್​ ಆ್ಯಕ್ಷನ್​ ವಿಷಯ ಒಳಗೊಂಡ 'ದಸರಾ' ಸಿನಿಮಾ ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರುತ್ತಿರುವ​ ಚಿತ್ರದಲ್ಲಿ ನಾನಿ ಮಾಸ್​ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಟೀಸರ್​ ಅನ್ನು ಬಾಲಿವುಡ್​ ನಟ ಶಾಹಿದ್​ ಕಪೂರ್​, ತಮಿಳು ನಟ ಧನುಷ್​, ಸ್ಯಾಂಡಲ್​ವುಡ್​ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ, ಮಾಲಯಾಳಂ ನಟ ದುಲ್ಕರ್​ ಸಲ್ಮಾನ್​ ಅವರು ಬಿಡುಗಡೆ ಮಾಡಿದ್ದರು. ಈ ಬಗ್ಗೆ ಮಾಹಿತಿಯನ್ನು ಚಿತ್ರ ತಂಡ ವಿಶೇಷ ವಿಡಿಯೋ ಮುಖಾಂತರ ಮಾಹಿತಿ ಹಂಚಿಕೊಂಡಿತ್ತು.

ಇದನ್ನೂ ಓದಿ :'ದಸರಾ‌' ಟೀಸರ್ ಬಿಡುಗಡೆಗೊಳಿಸಲಿದ್ದಾರೆ ನಟ ರಕ್ಷಿತ್‌ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.