ETV Bharat / entertainment

NBK108: 'ಭಗವಂತ ಕೇಸರಿ'ಯಾಗಿ ಟಾಲಿವುಡ್​​ ನಟಸಿಂಹ ನಂದಮೂರಿ ಬಾಲಕೃಷ್ಣ; ರಗಡ್​ ಲುಕ್​ನಲ್ಲಿ ಬಾಲಯ್ಯ​ - ಈಟಿವಿ ಭಾರತ ಕನ್ನಡ

ನಟ ನಂದಮೂರಿ ಬಾಲಕೃಷ್ಣ ಅಭಿನಯದ ಮುಂಬರುವ ಆಕ್ಷನ್ ಚಿತ್ರ NBK108ರ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ.

NBK108
ಭಗವಂತ ಕೇಸರಿ
author img

By

Published : Jun 8, 2023, 7:17 PM IST

ಟಾಲಿವುಡ್​ ಸೂಪರ್​ ಸ್ಟಾರ್​ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಮುಂಬರುವ ಆಕ್ಷನ್ ಚಿತ್ರ NBK108 ರ ಟೈಟಲ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 'ಭಗವಂತ ಕೇಸರಿ' ಯಾಗಿ ನಟಸಿಂಹ ತೆರೆ ಮೇಲೆ ಅಬ್ಬರಿಸಲಿದ್ದಾರೆ. ನಂದಮೂರಿ ಚಿತ್ರದ ಶೀರ್ಷಿಕೆಯೊಂದಿಗೆ ತಮ್ಮ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

"ಅಣ್ಣ ಬಂದಾಯ್ತು, ಇನ್ನು ಮಾಸ್​ ಎಂಟರ್​ಟೈನ್​ಮೆಂಟ್​ ಶುರು. ನಂದಮೂರಿ ಬಾಲಕೃಷ್ಣ #BhagavanthKesari (ಭಗವಂತ ಕೇಸರಿ) ಯಾಗಿ" ಎಂಬ ಕ್ಯಾಪ್ಶನ್​ ನೀಡಿದ್ದಾರೆ. ಈ ಮೂಲಕ NBK108 ಚಿತ್ರವು 'ಭಗವಂತ ಕೇಸರಿ' ಎಂಬುದಾಗಿ ನಾಮಕರಣಗೊಂಡಿದ್ದು, ಅಧಿಕೃತ ಘೋಷಣೆಯಾಗಿದೆ. ಟಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಅಭೂತಪೂರ್ವವಾದ ದಾಖಲೆಯ 108 ಸ್ಥಳಗಳಲ್ಲಿ ನಿರ್ಮಾಪಕರು ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. 108 ಹೋರ್ಡಿಂಗ್‌ಗಳಲ್ಲಿ ಟೈಟಲ್​ ಪೋಸ್ಟರ್​ ಅನಾವರಣಗೊಂಡಿದೆ.

ಹಿಂದೆಂದೂ ಕಾಣದ ಹೊಸ ಪಾತ್ರದಲ್ಲಿ ಬಾಲಕೃಷ್ಣ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪೋಸ್ಟರ್​​ನಲ್ಲಿ ಬಾಲಯ್ಯ ಪವರ್​ಫುಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ತಿಯನ್ನು ನೆಲಕ್ಕೆ ಊರಿ ಫೈಟಿಂಗ್​ ಸೀನ್​ನಲ್ಲಿ ಇರುವಂತೆ ಕಾಣುತ್ತಿದೆ. ಜನಸಾಮಾನ್ಯರ ದೇವರೆಂದೇ ಖ್ಯಾತಿ ಪಡೆದಿರುವ ಬಾಲಯ್ಯ ಅವರ ಹೊಸ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.​

ಇದನ್ನೂ ಓದಿ: 'ಎನ್​ಬಿಕೆ 108': ಕನ್ನಡತಿ ಶ್ರೀಲೀಲಾ​ಗೆ ನಂದಮೂರಿ ಬಾಲಕೃಷ್ಣ ಜೊತೆ ನಟಿಸುವ ಚಾನ್ಸ್‌!

NBK108 teaser: ನಿರ್ದೇಶಕ ಅನಿಲ್ ರವಿಪುಡಿ ಬಾಲಕೃಷ್ಣ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ರೆಡಿ ಮಾಡಿದ್ದಾರೆ. ಬಾಲಯ್ಯ ಅವರ ಹುಟ್ಟುಹಬ್ಬದಂದು ‘ಭಗವಂತ ಕೇಸರಿ’ ಚಿತ್ರದ ಟೀಸರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಚಿತ್ರವನ್ನು ಶೈನ್ ಸ್ಕ್ರೀನ್ ಬ್ಯಾನರ್ ಅಡಿಯಲ್ಲಿ ಹರೀಶ್ ಪೆದ್ದಿ ಮತ್ತು ಸಾಹು ಗರಪಾಟಿ ನಿರ್ಮಿಸುತ್ತಿದ್ದಾರೆ.

ಭಗವಂತ ಕೇಸರಿ ಚಿತ್ರತಂಡ ಹೀಗಿದೆ..: 'ಭಗವಂತ ಕೇಸರಿ' ಸಿನಿಮಾವನ್ನು ಅನಿಲ್​ ರವಿಪುಡಿ ನಿರ್ದೇಶಿಸುತ್ತಿದ್ದು, ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬಾಲಯ್ಯ ಎದುರು ಕಾಜಲ್ ಅಗರ್ವಾಲ್ ನಾಯಕಿಯಾಗಿದ್ದಾರೆ. ಇವರಿಬ್ಬರೂ ಒಟ್ಟಿಗೆ ನಟಿಸುತ್ತಿರುವ ಮೊದಲ ಚಿತ್ರವಿದು. ನಟಿ ಶ್ರೀಲೀಲಾ ಮತ್ತು ತಮಿಳು ಸ್ಟಾರ್ ನಟ ಶರತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲಯ್ಯ ಮತ್ತು ಶ್ರೀಲೀಲಾ ತಂದೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ವಿಜಯದಶಮಿಯಂದು ಉಡುಗೊರೆಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ.

ಬಾಬಿ ಜೊತೆ ಬಾಲಯ್ಯ ಹೊಸ ಸಿನಿಮಾ: ಬಾಲಕೃಷ್ಣ ಹುಟ್ಟುಹಬ್ಬದಂದು ಹೊಸ ಸಿನಿಮಾ ಅನೌನ್ಸ್ ಆಗಲಿದೆ. 'ವಾಲ್ತೇರು ವೀರಯ್ಯ' ಚಿತ್ರದ ಮೂಲಕ ಸಂಕ್ರಾಂತಿ ಹಿಟ್ ಗಿಟ್ಟಿಸಿಕೊಂಡಿರುವ ನಿರ್ದೇಶಕ ಬಾಬಿ, ಬಾಲಯ್ಯ ಜೊತೆ ಸಿನಿಮಾ ಮಾಡಲಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಅನಿಲ್ ರವಿಪುಡಿ ಅವರ ಭಗವಂತ ಕೇಸರಿ ಚಿತ್ರದ ಶೂಟಿಂಗ್​ ಮುಗಿದ ನಂತರ ಈ ಸಿನಿಮಾ ಸೆಟ್ಟೇರಲಿದೆ.

ಇದನ್ನೂ ಓದಿ: Sandalwood actors: ಸ್ಯಾಂಡಲ್​ವುಡ್​ನಲ್ಲಿ ಅವಕಾಶಗಳ ಕೊರತೆ.. ಪರಭಾಷೆ ಸಿನಿಮಾಗಳಲ್ಲಿ ಡಿಮ್ಯಾಂಡ್​​ ಹೆಚ್ಚಿಸಿಕೊಳ್ಳುತ್ತಿರುವ ಕನ್ನಡಿಗರಿವರು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.