ETV Bharat / entertainment

'ಈ ದೃಶ್ಯ ನಮ್ಮ ಚಿತ್ರದ ಒಂದು ಭಾಗ': ಅಭಿಮಾನಿಗೆ ಹೊಡೆದ​ ವಿಡಿಯೋಗೆ ಪ್ರತಿಕ್ರಿಯಿಸಿದ ನಾನಾ ಪಾಟೇಕರ್ - ಜರ್ನಿ ಸಿನಿಮಾ

Nana Patekar apologizes after hitting a fan; ಅಭಿಮಾನಿಯೋರ್ವರಿಗೆ ನಟ ನಾನಾ ಪಾಟೇಕರ್ ಹೊಡೆದಿರುವ ವಿಡಿಯೋ ವೈರಲ್​ ಆಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಈ ಬಗ್ಗೆ ಸ್ವತಃ ಅವರೇ ಪ್ರತಿಕ್ರಿಯಿಸಿದ್ದಾರೆ.

Nana Patekar apologizes after hitting a fan
ಹುಡುಗನಿಗೆ ಹೊಡೆದ​ ವಿಡಿಯೋಗೆ ಪ್ರತಿಕ್ರಿಯಿಸಿದ ನಾನಾ ಪಾಟೇಕರ್
author img

By ETV Bharat Karnataka Team

Published : Nov 16, 2023, 4:12 PM IST

ಬುಧವಾರದಂದು ನಟ ನಾನಾ ಪಾಟೇಕರ್ ಅವರ ವಿಡಿಯೋವೊಂದು ವೈರಲ್​​ ಆಗಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇತ್ತೀಚೆಗೆ ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಅಭಿಮಾನಿಗೆ ಹೊಡೆದಿದ್ದಾರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು.

ವೈರಲ್​ ವಿಡಿಯೋದಲ್ಲೇನಿತ್ತು? ಬ್ರೌನ್​ ಕೋಟ್​, ಹ್ಯಾಟ್​​ ಧರಿಸಿ ಜನಸಮೂಹದ ನಡುವೆ ನಿಂತಿದ್ದ ನಾನಾ ಪಾಟೇಕರ್ ಅವರ ವಿಡಿಯೋ ಬುಧವಾರ ಆನ್​ಲೈನ್​ನಲ್ಲಿ ಶರವೇಗದಲ್ಲಿ ವೈರಲ್​ ಆಗಿತ್ತು. ಅಭಿಮಾನಿಯೋರ್ವರು ಹಿಂಬದಿಯಿಂದ ಬಂದು ಹಿರಿಯ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ನಟ ಅಭಿಮಾನಿಯ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾರೆ. ನಟನ ಪಕ್ಕದಲ್ಲಿ ನಿಂತಿದ್ದ ಇತರೆ ಸಿಬ್ಬಂದಿ ಕೂಡ ಆ ಹುಡುಗನ ಕತ್ತು ಹಿಡಿದು ಸೆಟ್‌ನಿಂದ ಹೊರಹೋಗುವಂತೆ ಮಾಡುತ್ತಾರೆ. ಈ ವಿಡಿಯೋ ವೈರಲ್​ ಆಗಿ, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೈನಲಿ ಹಿರಿಯ ನಟ ಘಟನೆ ಬಗ್ಗೆ ಮೌನ ಮುರಿದಿದ್ದಾರೆ. ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿ "ಬೈ ಮಿಸ್ಟೇಕ್​ ಹೀಗಾಗಿದೆ" ಎಂದು ತಿಳಿಸಿದ್ದಾರೆ. ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​ನಲ್ಲಿ ವಿಡಿಯೋ ಸಂದೇಶದ ಮೂಲಕ ನಡೆದ ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

  • The video which is circulating on social media has been misinterpreted by many. What actually happened was a misunderstanding during the rehearsal of a shot from my upcoming film 'Journey'. pic.twitter.com/UwNClACGVG

    — Nana Patekar (@nanagpatekar) November 15, 2023 " class="align-text-top noRightClick twitterSection" data=" ">

ನಾನಾ ಪಾಟೇಕರ್ ಪ್ರತಿಕ್ರಿಯೆ: ಟ್ವಿಟರ್​ ಮೂಲಕ ನಟ ನಾನಾ ಪಾಟೇಕರ್ ಪ್ರತಿಕ್ರಿಯಿಸಿ, "ನಾನು ಆ ಹುಡುಗನಿಗೆ ಹೊಡೆದ ವಿಡಿಯೋ ವೈರಲ್ ಆಗುತ್ತಿದೆ. ಈ ಸೀಕ್ವೆನ್ಸ್ ನಮ್ಮ ಚಿತ್ರದ ಒಂದು ಭಾಗ. ನಾವು ಆ ದೃಶ್ಯದ ರಿಹರ್ಸಲ್ (ಪೂರ್ವಾಭ್ಯಾಸ) ಮಾಡಿದ್ದೆವು. ನಮಗೆ ಎರಡನೇ ಬಾರಿ ರಿಹರ್ಸಲ್ ನಡೆಸಲು ಹೇಳಲಾಯಿತು. ನಿರ್ದೇಶಕರು ನನಗೆ ಶುರು ಮಾಡುವಂತೆ ಹೇಳಿದರು. ಹುಡುಗ ಬಂದಾಗ ನಮ್ಮ ಸೀಕ್ವೆನ್ಸ್ ಪ್ರಾರಂಭವಾಗುತ್ತದೆ. ಆದ್ರೆ ಆ ಹುಡುಗ (ವೈರಲ್​ ವಿಡಿಯೋದಲ್ಲಿರುವವರು) ಯಾರೆಂದು ನನಗೆ ತಿಳಿದಿರಲಿಲ್ಲ. ಅವನು ನಮ್ಮ ಸಿಬ್ಬಂದಿಯಲ್ಲಿ ಒಬ್ಬ ಎಂದು ಭಾವಿಸಿದೆ. ಹಾಗಾಗಿ ನಾನು ಸ್ಕ್ರಿಪ್ಟ್​​ ಪ್ರಕಾರ ಅವನಿಗೆ ಹೊಡೆದೆ. ನಂತರ, ಆ ಹುಡುಗ ನಮ್ಮ ಚಿತ್ರತಂಡದವನಲ್ಲ ಎಂಬುದು ತಿಳಿಯಿತು. ಹಾಗಾಗಿ ನಾನು ಅವನನ್ನು ಮಾತನಾಡಿಸಲು ನೋಡಿದೆ, ಆದರೆ ಅವನು ಓಡಿಹೋದ. ಬಹುಶಃ ಅವನ ಸ್ನೇಹಿತ ಈ ವಿಡಿಯೋವನ್ನು ಶೂಟ್ ಮಾಡಿರಬಹುದು. ನಾನು ಯಾರೊಂದಿಗೂ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಬೇಡ ಎಂದು ಹೇಳಿಲ್ಲ. ನಾನೀಗೆ ಮಾಡುವುದೂ ಇಲ್ಲ. ಬೈ ಮಿಸ್ಟೇಕ್​​ ಹೀಗಾಗಿದೆ. ಏನಾದರೂ ಮಿಸ್​ ಅಂಡರ್​ಸ್ಟ್ಯಾಂಡ್ ಆಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನಿನ್ನು ಈ ರೀತಿ ಮಾಡುವುದಿಲ್ಲ" ಎಂದು ತಿಳಿಸಿದ್ದಾರೆ.

  • Nana Patekar slaps a teenager who tried to take a selfie with him
    Why should one give these celebrities any importance after all they are human beings like us.
    Success goes into their head. pic.twitter.com/lrlkYo9Bui

    — 💝🌹💖jaggirmRanbir💖🌹💝 (@jaggirm) November 16, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಅಭಿಮಾನಿಗೆ ನಟ ನಾನಾ ಪಾಟೇಕರ್ ಏಟು? ವಿಡಿಯೋ ವೈರಲ್​

ಗದರ್ 2 ನಟ ಉತ್ಕರ್ಷ್ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿಸುತ್ತಿರುವ 'ಜರ್ನಿ' ಚಿತ್ರದ ಶೂಟಿಂಗ್​ ಸೆಟ್‌ನಲ್ಲಿ ಈ ಘಟನೆ ನಡೆದಿದೆ. ನಟ ನಾನಾ ಪಾಟೇಕರ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯದಾಗಿ, ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: 'ಬ್ಯಾಡ್ ಮ್ಯಾನರ್ಸ್' ಬಿಡುಗಡೆಗೆ ದಿನಗಣನೆ: ಪ್ರಚಾರ ಜೋರು, ದರ್ಶನ್​ ಸಾಥ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.