ETV Bharat / entertainment

ನಾಗಚೈತನ್ಯ-ಸಾಯಿ ಪಲ್ಲವಿ ಅಭಿನಯದ 'ತಂಡೆಲ್​' ಫಸ್ಟ್ ಗ್ಲಿಂಪ್ಸ್​ ರಿಲೀಸ್​

author img

By ETV Bharat Karnataka Team

Published : Jan 6, 2024, 3:05 PM IST

Thandel first glimpse: ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ 'ತಂಡೆಲ್​' ಫಸ್ಟ್ ಗ್ಲಿಂಪ್ಸ್ ಅನಾವರಣಗೊಂಡಿದೆ.

Thandel teaser release
ತಂಡೆಲ್ ಟೀಸರ್​ ರಿಲೀಸ್​

ಟಾಲಿವುಡ್​​ ಹೀರೋ ನಾಗ ಚೈತನ್ಯ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ತಂಡೆಲ್​'. ಚಂದೂ ಮೊಂಡೇಟಿ ನಿರ್ದೇಶನದ ಈ ಚಿತ್ರದಲ್ಲಿ ನಾಗ ಚೈತನ್ಯ ಜೊತೆ ಸರಳ ಸುಂದರಿ ಸಾಯಿ ಪಲ್ಲವಿ ತೆರೆ ಹಂಚಿಕೊಂಡಿದ್ದಾರೆ. 2016ರ ಹಿಟ್​ ಚಿತ್ರ ಪ್ರೇಮಂ ಮತ್ತು 2018ರ ಸವ್ಯಸಾಚಿ ಸಿನಿಮಾ ನಂತರ ಚಂದೂ ಮೊಂಡೇಟಿ ಮತ್ತು ನಾಗ ಚೈತನ್ಯ ಕಾಂಬಿನೇಶನ್​ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದು. ಇಂದು ಚಿತ್ರನಿರ್ಮಾಪಕರು ಫಸ್ಟ್ ಗ್ಲಿಂಪ್ಸ್ / ಟೀಸರ್ ಅನಾವರಣಗೊಳಿಸಿ, ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದಾರೆ.

ತಂಡೆಲ್ ಫಸ್ಟ್ ಗ್ಲಿಂಪ್ಸ್: ಎರಡು ನಿಮಿಷ ಮತ್ತು ಹನ್ನೊಂದು ಸೆಕೆಂಡ್​ ಅವಧಿಯ 'ತಂಡೆಲ್' ಫಸ್ಟ್ ಗ್ಲಿಂಪ್ಸ್​​ ಬಹಳ ಕುತೂಹಲಕಾರಿಯಾಗಿದೆ. ಸಮುದ್ರದ ನಡುವೆ ಇರುವ ಹಡಗಿನ ದೃಶ್ಯದೊಂದಿಗೆ ಟೀಸರ್​ ಪ್ರಾರಂಭವಾಗುತ್ತದೆ. ಮೀನುಗಾರನಾಗಿ ನಾಗ ಚೈತನ್ಯ ಕಾಣಿಸಿಕೊಂಡಿದ್ದಾರೆ. ನಾಗ ಚೈತನ್ಯ ಸೇರಿ 22 ಜನರು ಪಾಕಿಸ್ತಾನದ ಕರಾಚಿ ಸೆಂಟ್ರಲ್ ಜೈಲಿನಲ್ಲಿರುವ ದೃಶ್ಯ ಈ ಟೀಸರ್​​ನಲ್ಲಿದೆ. ಅಲ್ಲಿನ ಅಧಿಕಾರಿಯ ವಿಚಾರಣೆಗೊಳಗಾದ ನಟ ದೃಢವಾಗಿ ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಿದ್ದದ್ದಾರೆ. ನಟನ ಡೈಲಾಗ್​ಗಳು ರೋಮಾಂಚನಕಾರಿಯಾಗಿವೆ.

  • " class="align-text-top noRightClick twitterSection" data="">

ನಾಗ ಚೈತನ್ಯ ಪಾಕಿಸ್ತಾನಿ ಜೈಲಿನಲ್ಲಿ "ಭಾರತ್ ಮಾತಾ ಕಿ ಜೈ" ಎಂಬ ಘೋಷಣೆ ಕೂಗಿದಾಗ ದೃಶ್ಯದ ತೀವ್ರತೆ ಉತ್ತುಂಗಕ್ಕೇರುತ್ತದೆ. ನಂತರ, ನಟಿ ಸಾಯಿ ಪಲ್ಲವಿಯ ಪರಿಚಯದೊಂದಿಗೆ ಟೀಸರ್ ಪೂರ್ಣಗೊಂಡಿದೆ. ನಾಗ ಚೈತನ್ಯ ಅವರ ಪುನರಾಗಮನದ ಬಗ್ಗೆ ನಟಿಯ ನಿರೀಕ್ಷೆ, ಶೀಘ್ರದಲ್ಲೇ ಹಿಂತಿರುಗುವ ಭರವಸೆಯನ್ನು ಕೊನೆಯ ದೃಶ್ಯ ಕೊಟ್ಟಿದೆ.

ಇದನ್ನೂ ಓದಿ: ಅನಿಮಲ್ ಸಕ್ಸಸ್ ಸಂಭ್ರಮಕ್ಕಾಗಿ ​ಪುಷ್ಪ- 2ರಿಂದ ಬ್ರೇಕ್​ ಪಡೆದ ರಶ್ಮಿಕಾ ಮಂದಣ್ಣ

'ತಂಡೆಲ್'​ 2018ರಲ್ಲಿ ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಮೀನುಗಾರ ಸಮುದಾಯದ ಸುತ್ತ ಸುತ್ತುವ ಕಥಾಹಂದರವು, ಬಲವಾದ ಪ್ರೇಮಕಥೆ ಮತ್ತು ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹೊಂದಿದೆ. ಚಿತ್ರದ ಅಧಿಕೃತ ಘೋಷಣೆಗೂ ಮುನ್ನ ನಾಗಚೈತನ್ಯ ಅವರು ಶ್ರೀಕಾಕುಲಂಗೆ ಭೇಟಿ ನೀಡಿದ್ದರು. ಸ್ಥಳೀಯ ಮೀನುಗಾರರೊಂದಿಗೆ ತಮ್ಮನ್ನು ತೊಡಗಿಸಿಕೊಂಡು, ಸಂಭಾವ್ಯ ಚಿತ್ರೀಕರಣದ ಸ್ಥಳಗಳನ್ನು ವೀಕ್ಷಿಸಿದ್ದರು. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ 2021ರ ಯಶಸ್ವಿ ಸಿನಿಮಾ 'ಲವ್ ಸ್ಟೋರಿ'ಯಲ್ಲಿ ಮೊದಲ ಬಾರಿಗೆ ತೆರೆಹಂಚಿಕೊಂಡಿದ್ದರು. ತಂಡೆಲ್​ ಈ ಜೋಡಿಯ ಎರಡನೇ ಸಿನಿಮಾ.

ಇದನ್ನೂ ಓದಿ: 2024ರಲ್ಲಿ ಮದುವೆಯಾಗಲಿರುವ ನಟಿಮಣಿಯರು ಇವರೇ ನೋಡಿ

ಗೀತಾ ಆರ್ಟ್ಸ್ ಬ್ಯಾನರ್​ ಅಡಿಯಲ್ಲಿ ಬನ್ನಿ ವಾಸ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಅವರ ಸಂಗೀತವಿದೆ. ಶಾಮ್ದತ್ ಸೈನುದ್ದೀನ್ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.