ETV Bharat / entertainment

ನನ್ನ ಕೆಲಸಗಳಿಗೆ ಸ್ಫೂರ್ತಿ ಸುಧಾಮೂರ್ತಿ ಅಮ್ಮ: ನಿರ್ಮಾಪಕ ಎಂ ರಮೇಶ್ ರೆಡ್ಡಿ - ಸ್ಫೂರ್ತಿ ಸುಧಾಮೂರ್ತಿ ಅಮ್ಮ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್​ನಲ್ಲಿ ಬಂದ ಗಾಳಿಪಟ 2 ಸಿನಿಮಾ ಕರ್ನಾಟಕ ಅಲ್ಲದೇ ವಿಶ್ವದಾದ್ಯಂತ ತೆರೆಕಂಡು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆ ಕಲೆಕ್ಷನ್​ ಮಾಡಿದೆ. ಈ ಖುಷಿಯನ್ನು ಇತ್ತೀಚೆಗೆ ಗಾಳಿಪಟ 2 ಸಿನಿಮಾದ ಚಿತ್ರ ತಂಡ ಹಂಚಿಕೊಂಡಿತ್ತು. ಇದರ ಜೊತೆಗೆ ಈ ಯಶಸ್ಸಿನ ಖುಷಿಯನ್ನು ಚಿತ್ರದ ನಿರ್ಮಾಪಕ ಎಂ ರಮೇಶ್ ರೆಡ್ಡಿ ಕೂಡ ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸಿದ್ದಾರೆ.

ನಿರ್ಮಾಪಕ ಎಂ ರಮೇಶ್ ರೆಡ್ಡಿ
ನಿರ್ಮಾಪಕ ಎಂ ರಮೇಶ್ ರೆಡ್ಡಿ
author img

By

Published : Aug 22, 2022, 9:21 PM IST

ಕನ್ನಡದಲ್ಲಿ ನಾತಿಚರಾಮಿ, ಉಪ್ಪು ಹುಳಿ ಖಾರ, ಪಡ್ಡೆಹುಲಿ ಅಂತಹ ಸಿನಿಮಾಗಳನ್ನ ನಿರ್ಮಾಣ ಮಾಡಿ, ಕೈ ಸುಟ್ಟುಕೊಂಡಿದ್ದ ನಿರ್ಮಾಪಕ ಎಂ ರಮೇಶ್ ರೆಡ್ಡಿಗೆ ಗಾಳಿಪಟ 2 ಸಿನಿಮಾ ಲಾಭ ತಂದುಕೊಟ್ಟಿದೆ. ಈ ಸಂತೋಷದಲ್ಲಿರುವ ನಿರ್ಮಾಪಕ ರಮೇಶ್ ರೆಡ್ಡಿ ತಮ್ಮ ಸಂತೋಷವನ್ನು ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ.

ಗಾಳಿಪಟ 2 ಸಿನಿಮಾ ಬಿಡುಗಡೆ ಆಗಿ ಮೂರನೇ ವಾರ ಆದ್ರೂ, ರಿಲೀಸ್ ಆದ ಎಲ್ಲಾ ಚಿತ್ರಮಂದಿಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಸಂತಸದ ವಿಷಯವಾಗಿದೆ. ಈ ಸಿನಿಮಾ ಯಶಸ್ಸಿಗೆ ಕಾರಣರಾದ ನಿರ್ದೇಶಕ ಯೋಗರಾಜ್ ಭಟ್, ನಟರಾದ ಗಣೇಶ್, ದಿಗಂತ್, ಪವನ್ ಕುಮಾರ್, ನಟಿಯರಾದ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್ ಹಾಗೂ ನಿಶ್ವಿಕಾ ನಾಯ್ಡು, ಹಿರಿಯ ನಟ ಅನಂತ ನಾಗ್, ಶ್ರೀನಾಥ್, ರಂಗಾಯಣ ರಘು, ಸುಧಾ ಬೆಳವಾಡಿ, ಪದ್ಮಜಾ ರಾವ್ ಸೇರಿದಂತೆ ಈ ಸಿನಿಮಾಕ್ಕಾಗಿ ದುಡಿದ ತಂತ್ರಜ್ಞನರು, ಸಹ ಕಲಾವಿದರು, ಈ ಸಿನಿಮಾ ವಿತರಣೆ ಮಾಡಿದ ಕೆವಿನ್ ಪ್ರೊಡಕ್ಷನ್ ಅವ್ರಿಗೆ ನನ್ನ ಧನ್ಯವಾದಗಳು ಅಂತಾ ಹೇಳಿದ್ದಾರೆ.

ಪತ್ರದ ಮೂಲಕ ಸಂತೋಷ ವ್ಯಕ್ತಪಡಿಸಿದ ನಿರ್ಮಾಪಕ ಎಂ ರಮೇಶ್ ರೆಡ್ಡಿ

ಇನ್ನು, ಈ ಪತ್ರದಲ್ಲಿ ನಿರ್ಮಾಪಕ ಎಂ ರಮೇಶ್ ರೆಡ್ಡಿ ಇನ್‌ಫೋಸಿಸ್‌ ಮುಖ್ಯಸ್ಥೆಯಾಗಿರುವ ಸುಧಾಮೂರ್ತಿ ಅವ್ರಿಗೆ ವಿಶೇಷ ಧನ್ಯವಾದ ಹೇಳಿದ್ದಾರೆ. ನನ್ನ ಎಲ್ಲಾ ಕೆಲಸಗಳಿಗೆ ಸ್ಫೂರ್ತಿಯಾಗಿರೋ ಸುಧಾಮೂರ್ತಿ ಅಮ್ಮನಿಗೆ ಹೃದಯಪೂರ್ವಕ ವಂದನೆಗಳು ಅಂತಾ ಬರೆದಿದ್ದಾರೆ. ಒಂದು ಕಾಲದಲ್ಲಿ ಗುತ್ತಿಗೆದಾರನಾಗಿದ್ದ ರಮೇಶ್ ರೆಡ್ಡಿ ಬೆಳವಣಿಗೆಗೆ ಸುಧಾಮೂರ್ತಿಯವರ ಬೆಂಬಲವಿದ್ದು, ಇಂದು ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕರ ಮೆಚ್ಚುಗೆಯ 'ಗಾಳಿಪಟ' ಹಾರಿಸಿದ ಭಟ್ಟರು

ಸದ್ಯ ಗಾಳಿಪಟ 2 ಸಕ್ಸಸ್​ನಲ್ಲಿರುವ ಎಂ ರಮೇಶ್ ರೆಡ್ಡಿ, ಶಿವರಾಜ್ ಕುಮಾರ್ ಸೇರಿದಂತೆ ಬಾಲಿವುಡ್​ನಲ್ಲೂ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸೂರಜ್‌ ಪ್ರೊಡಕ್ಷನ್‌ ಹೌಸ್ ಅಡಿ ಸಂದೇಶ ಸಾರುವ ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಮೇಶ್ ರೆಡ್ಡಿ ಕೆಲಸಗಳಿಗೆ ಸುಧಾಮೂರ್ತಿಯವರು ಸ್ಫೂರ್ತಿ ಅನ್ನೋದು ವಿಶೇಷ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.