ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರು, ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದಾರೆ. ಈ ಸಾಲಿಗೀಗ ಬಹುಬೇಡಿಕೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹೊಸ ಸೇರ್ಪಡೆ. ಹೌದು, ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಈಗ ನಿರ್ಮಾಪಕರಾಗಿದ್ದಾರೆ. abbs studios ಸಂಸ್ಥೆಯ ಮೊದಲ ಚಿತ್ರವಾಗಿ "ಜಸ್ಟ್ ಮ್ಯಾರೀಡ್" ನಿರ್ಮಾಣಗೊಳ್ಳುತ್ತಿದೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ.
- " class="align-text-top noRightClick twitterSection" data="">
ಸಿ.ಆರ್ ಬಾಬಿ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿ ಸೇರ್ಪಡೆಯಾಗಿದ್ದಾರೆ. ಗಣೇಶ ಚತುರ್ಥಿ ಶುಭ ಸಂದರ್ಭದಲ್ಲಿ ಜಸ್ಟ್ ಮ್ಯಾರಿಡ್ ಚಿತ್ರದ "ಗಂ ಗಣೇಶಾಯ ನಮಃ" ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆ ಆಗಿದೆ. ಶಶಿ ಕಾವೂರ್ ಬರೆದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವರುಣ್ ರಾಮಚಂದ್ರ, ಮಧ್ವೇಶ್ ಭಾರದ್ವಾಜ್, ಅಭಿಷೇಕ್ ಹಾಗೂ ವಿಶಾಖ್ ಹಾಡಿದ್ದಾರೆ. ಗಣಪತಿ ಕುರಿತಾದ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಿ.ಆರ್ ಬಾಬಿ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸಿ.ಆರ್.ಬಾಬಿ, ಇದೀಗ ನಿರ್ದೇಶಕಿಯಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: 'ರಾಗ್‌ನೀತಿ' ಮದುವೆ ಸಂಭ್ರಮ ಹೇಗಿದೆ ಗೊತ್ತಾ?: ವೆಡ್ಡಿಂಗ್ ಥೀಮ್, ಸಂಗೀತ, ಆರತಕ್ಷತೆಯ ಸಂಪೂರ್ಣ ಮಾಹಿತಿ
ಹೆಸರೇ ಹೇಳುವಂತೆ "ಜಸ್ಟ್ ಮ್ಯಾರಿಡ್" ಒಂದು ಪ್ರೇಮಕಥಾಹಂದರವುಳ್ಳ ಚಿತ್ರ. ಕ್ಲಾಸ್ ಹಾಗೂ ಮಾಸ್ ಸೇರಿ ವಿಭಿನ್ನ ಆಡಿಯನ್ಸ್ಗೂ ಇಷ್ಟವಾಗುವ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಈ ತಿಂಗಳ ಕೊನೆಗೆ ಬೆಂಗಳೂರಿನಲ್ಲಿ ಆರಂಭವಾಗಲಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣರನ್ನು ನಿರ್ಲಕ್ಷಿಸಿದ್ರಾ ಶ್ರದ್ಧಾ ಕಪೂರ್? ವಿಡಿಯೋ ನೋಡಿ ನೆಟ್ಟಿಗರು ಹೀಗಂದ್ರು!
ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ - ನಾಯಕಿಯಾಗಿ ನಟಿಸುತ್ತಿದ್ದು, ಶೃತಿ ಹರಿಹರನ್, ಅಚ್ಯುತ್ ಕುಮಾರ್, ಸಾಕ್ಷಿ ಅಗರ್ವಾಲ್, ರವಿಶಂಕರ್ ಗೌಡ, ವಾಣಿ ಹರಿಕೃಷ್ಣ ಮುಂತಾದವರು ನಟಿಸುತ್ತಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಪಿ.ಜೆ ಛಾಯಾಗ್ರಹಣ, ಅಶಿಕ್ ಕುಸುಗೊಳ್ಳಿ ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಬಾಬಾ ಭಾಸ್ಕರ್ ಅವರ ನೃತ್ಯ ನಿರ್ದೇಶ ಈ ಚಿತ್ರಕ್ಕಿದೆ. ಡಾ.ವಿ ನಾಗೇಂದ್ರ ಪ್ರಸಾದ್, ಶಶಿ ಕವೂರ್, ಪ್ರಮೋದ್ ಮರವಂತೆ, ಧನಂಜಯ್ ಹಾಗೂ ನಾಗಾರ್ಜುನ್ ಶರ್ಮಾ ಹಾಡುಗಳನ್ನು ಬರೆದಿದ್ದಾರೆ.