ಬಹುಭಾಷಾ ತಾರೆ ಖುಷ್ಬೂ 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕುಟುಂಬಸ್ಥರು, ಆತ್ಮೀಯರು, ಸಿನಿರಂಗ, ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂಗೆ ಇಂದು 52ನೇ ಜನ್ಮದಿನ. ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಈಗಲೂ ಅದೆಷ್ಟೋ ಮಂದಿಯ ನೆಚ್ಚಿನ ನಟಿ. 1980ರಲ್ಲಿ ಬಾಲಕಲಾವಿದೆಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿ ಬಳಿಕ ಯಶಸ್ಸಿನ ಹಾದಿಯಲ್ಲಿ ಸಾಗಿದ ಪ್ರತಿಭಾನ್ವಿತೆ.
1980ರಲ್ಲಿ ಹಿಂದಿ ಚಿತ್ರ ದಿ ಬರ್ನಿಂಗ್ ಟ್ರೇನ್ ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ 1985ರಲ್ಲಿ ಜಾಕಿಶ್ರಾಫ್ ಅವರ ಜಾನು ಚಿತ್ರದಲ್ಲಿ ನಟಿಸಿದರು. 1986ರಿಂದ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿತೊಡಗಿದರು. ತೆಲುಗು ಚಿತ್ರ ಕಲಿಯುಗ ಪಾಂಡವುಲು(1986) ಮೂಲಕ ಖುಷ್ಬೂ ದಕ್ಷಿಣ ಭಾರತದ ಪರದೆಗಳಿಗೆ ಪರಿಚಯವಾದರು.
ಇದನ್ನೂ ಓದಿ: ನಾಗಕನ್ಯೆಗೆ ಜನ್ಮದಿನದ ಸಂಭ್ರಮ.. ಹೇಗಿದ್ದ ಮೌನಿ ರಾಯ್ ಹೇಗಾದರು ಗೊತ್ತಾ?
ಕನ್ನಡದಲ್ಲಿ ಖುಷ್ಬೂ ರವಿಚಂದ್ರನ್ ಜೊತೆ ರಣಧೀರ, ಅಂಜದ ಗಂಡು, ಶಾಂತಿ ಕ್ರಾಂತಿ ಮತ್ತು ಯುಗಪುರುಷ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ತೆರೆಮೇಲೆ ರವಿಚಂದ್ರನ್ ಮತ್ತು ಖುಷ್ಬೂ ಜೊಡಿ ತುಂಬಾ ಪ್ರಸಿದ್ಧವಾಗಿತ್ತು. ಖುಷ್ಬೂ ಮೊದಲ ಹೆಸರು ನಖಾತ್ ಖಾನ್.