ETV Bharat / entertainment

Dhoni wife Sakshi: 'ನಾನು ಅಲ್ಲು ಅರ್ಜುನ್ ಫ್ಯಾನ್​, ಪ್ರಭಾಸ್ ಜೊತೆ ಸಿನಿಮಾ ಮಾಡುವ ಯೋಚನೆಯಿದೆ': ಧೋನಿ ಪತ್ನಿ ಸಾಕ್ಷಿ - LGM

Dhoni wife Sakshi: ಟಾಲಿವುಡ್​ ನಟರಾದ ಅಲ್ಲು ಅರ್ಜುನ್ ಮತ್ತು ಪ್ರಭಾಸ್ ಜೊತೆ ಸಿನಿಮಾ ಮಾಡುವ ಕುರಿತು ನಿರ್ಮಾಪಕಿಯಾಗಿ ಹೊರ ಹೊಮ್ಮುತ್ತಿರುವ ಧೋನಿ ಪತ್ನಿ ಸಾಕ್ಷಿ ಮನದಿಂಗಿತ ವ್ಯಕ್ತಪಡಿಸಿದ್ದಾರೆ.

MS Dhoni wife Reveals that she is fan of allu arjun
ಅಲ್ಲು ಅರ್ಜುನ್, ಪ್ರಭಾಸ್ ಜೊತೆ ಸಾಕ್ಷಿ ಧೋನಿ ಸಿನಿಮಾ
author img

By

Published : Jul 25, 2023, 10:05 AM IST

Updated : Jul 25, 2023, 12:51 PM IST

ಕ್ರಿಕೆಟ್ ಕ್ಷೇತ್ರದ ಪಂಡಿತ ಮಹೇಂದ್ರ ಸಿಂಗ್​​ ಧೋನಿ, ಸಿನಿಮಾ ಕ್ಷೇತ್ರದ ಗಣ್ಯ ವ್ಯಕ್ತಿಗಳಾದ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಕ್ರೇಜ್ ಬಗ್ಗೆ ನಿಮಗೆ ಗೊತ್ತೇ ಇದೆ. ಈ ಮೂವರಿಗೆ ದೇಶವಲ್ಲದೇ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಮೂವರೂ ಸೇರಿ ಸಿನಿಮಾ ಮಾಡಿದ್ರೆ ಹೇಗಿರುತ್ತೆ?, ಅಥವಾ ಧೋನಿ ನಿರ್ಮಾಣದಲ್ಲಿ ಪ್ರಭಾಸ್​ ಮತ್ತು ಅಲ್ಲು ಅರ್ಜುನ್​​ ಸಿನಿಮಾ ನಿರ್ಮಾಣವಾದ್ರೆ ಹೇಗಿರುತ್ತೆ? ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಸಿಗೋದ್ರಲ್ಲಿ ಸಂಶಯವೇ ಇಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಭವಿಷ್ಯದಲ್ಲಿ ಇದು ಸಾಧ್ಯವಾಗಲಿದೆ ಎಂದು ಧೋನಿ ಪತ್ನಿ ಸಾಕ್ಷಿ ತಿಳಿಸಿದ್ದಾರೆ.

'ಎಲ್‌ಜಿಎಂ' (ಲೆಟ್ಸ್ ಗೆಟ್ ಮ್ಯಾರಿಡ್​​) ಚಿತ್ರದ ಮೂಲಕ ಕ್ರಿಕೆಟಿಗ ಧೋನಿ ಸಿನಿಮಾ ನಿರ್ಮಾಪಕನಾಗಿ ಹೊರಹೊಮ್ಮುತ್ತಿದ್ದಾರೆ. ಚಿತ್ರ ನಿರ್ಮಾಣದ ವ್ಯವಹಾರಗಳನ್ನು ಪತ್ನಿ ಸಾಕ್ಷಿ ನೋಡಿಕೊಳ್ಳುತ್ತಿದ್ದಾರೆ. ಎಲ್​​ಜಿಎಂ ಸಿನಿಮಾದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿದ್ದಾರೆ. ಕಾಮಿಡಿ, ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಜುಲೈ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ತೆರೆಕಾಣಲು ಕ್ಷಣಗಣನೆ ಆರಂಭವಾಗಿದ್ದು, ಚಿತ್ರತಂಡ ಭರ್ಜರಿ ಪ್ರಚಾರಕಾರ್ಯದಲ್ಲಿ ತೊಡಗಿದೆ.

ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ ಸಾಕ್ಷಿ ಧೋನಿ ಭಾಗವಹಿಸಿದ್ದರು. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡರು. ಜನಪ್ರಿಯ ನಟರಾದ ಅಲ್ಲು ಅರ್ಜುನ್-ಪ್ರಭಾಸ್ ಜೊತೆಗಿನ ಸಿನಿಮಾ ಕುರಿತೂ ಅವರು ಮಾತನಾಡಿದರು.

ಅಲ್ಲು ಅರ್ಜುನ್ ಮತ್ತು ಪ್ರಭಾಸ್ ಭಾರತೀಯ ಚಿತ್ರರಂಗದ ಸ್ಟಾರ್ ನಟರು. ಸದ್ಯ ಅವರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನಾವು ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ಎಲ್​ಜಿಎಂ ಮೂಲಕ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಮುಂದೆ ಅವಕಾಶ ಸಿಕ್ಕರೆ ಖಂಡಿತ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ನಿರ್ಮಾಪಕಿ ಸಾಕ್ಷಿ ಧೋನಿ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ನಾನು ಟಾಲಿವುಡ್​ ಐಕಾನ್ ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿ ಎಂದು ಸಹ ಸಾಕ್ಷಿ ಬಹಿರಂಗಪಡಿಸಿದರು. ಅಲ್ಲು ಅರ್ಜುನ್​ ನಟಿಸಿರುವ ಎಲ್ಲ ಸಿನಿಮಾಗಳನ್ನು ಯೂಟ್ಯೂಬ್​ನಲ್ಲಿ ನೋಡಿದ್ದೇನೆ. ಬಾಹುಬಲಿ ಮತ್ತು ಆರ್‌ಆರ್‌ಆರ್‌ ಚಿತ್ರಗಳನ್ನು ಸಹ ನೋಡಿರುವುದಾಗಿಯೂ ಸಾಕ್ಷಿ ಹೇಳಿದರು.

ಇದನ್ನೂ ಓದಿ: ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಬಿಡುಗಡೆ ದಿನಾಂಕ ಮುಂದೂಡಿಕೆ; ಪ್ರೇಕ್ಷಕರಿಗೆ ನಿರಾಸೆ

'ಲೆಟ್ಸ್ ಗೆಟ್ ಮ್ಯಾರಿಡ್​​' ಮಹೇಂದ್ರ ಸಿಂಗ್​​ ಧೋನಿ ಮತ್ತು ಸಾಕ್ಷಿ ದಂಪತಿ ನಿರ್ಮಾಣದ ಮೊದಲ ಸಿನಿಮಾ. ರಮೇಶ್ ತಮಿಳುಮಣಿ ನಿರ್ದೇಶಿಸಿದ್ದಾರೆ. ವಿಕಾಸ್ ಹಸ್ಜಾ ಸಹ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ನಾದಿಯಾ, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಾಮಾನ್ಯ ಜನರ, ಕುಟುಂಬದ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಇದೇ ಶುಕ್ರವಾರ ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ: ವಿಚಿತ್ರ ಡ್ರೆಸ್​ ತೊಟ್ಟ ಉರ್ಫಿ​ಗೆ ಹಿರಿಕನ ತರಾಟೆ.. 'ನಿಮ್ಮ ಅಪ್ಪನದ್ದು ಏನ್​ ಹೋಗುತ್ತೆ' ಅಂದ ಜಾವೇದ್​

Last Updated : Jul 25, 2023, 12:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.