ETV Bharat / entertainment

'ಮಾನ್ಸೂನ್ ರಾಗ' ಬಿಡುಗಡೆ: ಡಾಲಿ, ಡಿಂಪಲ್ ಕ್ವೀನ್​ ಅವತಾರಕ್ಕೆ ಅಭಿಮಾನಿಗಳು ಫಿದಾ - Dolly Dhananjay

ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಮಾನ್ಸೂನ್ ರಾಗ ಸಿನಿಮಾ ಬಿಡುಗಡೆ ಆಗಿದೆ.

Monsoon Raga movie released today
ಮಾನ್ಸೂನ್ ರಾಗ ಸಿನಿಮಾ ಬಿಡುಗಡೆ
author img

By

Published : Sep 16, 2022, 1:01 PM IST

Updated : Sep 16, 2022, 1:11 PM IST

ಮಾನ್ಸೂನ್ ರಾಗ.. ನಟ ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್​ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಇಂದು ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗಳು ಪರಭಾಷೆಯ ಚಿತ್ರಗಳಿಗೆ ಪೈಪೋಟಿ ಕೊಡುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಉತ್ತಮ, ಗಟ್ಟಿತನದ ಕಥೆ, ಅದ್ಧೂರಿ ಮೇಕಿಂಗ್ ಜೊತೆಗೆ ಸಿನಿಪ್ರಿಯರ ಮನಸ್ಸಿಗೆ ಇಷ್ಟವಾಗುವ ಹಾಡುಗಳಿದ್ರೆ ಸಿನಿಪ್ರೇಕ್ಷಕರು ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ.

ಮಾನ್ಸೂನ್ ರಾಗ ಸಿನಿಮಾ ಬಿಡುಗಡೆ

ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರೋ ಸಂತೋಷ್ ಚಿತ್ರಮಂದಿರದಲ್ಲಿ ಮಾನ್ಸೂನ್ ರಾಗಾ ಬಿಡುಗಡೆ ಆಗಿದ್ದು, ಡಾಲಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ನಿರ್ದೇಶಕ ರವೀಂದ್ರನಾಥ್ ಸಂತೋಷ್ ಚಿತ್ರಮಂದಿರದ ಪ್ರೊಜೆಕ್ಟರ್​ಗೆ ಪೂಜೆ ಮಾಡುವ ಮೂಲಕ ಚಿತ್ರ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್‌ ಕೊಟ್ಟರು. ಧನಂಜಯ್​ ಅಭಿಮಾನಿಗಳು ಬೆಲ್ ಬಾಟಮ್ ಕಾಸ್ಟೂಮ್‌ನಲ್ಲಿ ಚಿತ್ರಮಂದಿರಕ್ಕೆ ಬಂದು ಗಮನ ಸೆಳೆದರು.

Monsoon Raga movie released today
ಮಾನ್ಸೂನ್ ರಾಗ ಸಿನಿಮಾ ಬಿಡುಗಡೆ

ಚಿತ್ರದಲ್ಲಿ ಡಾಲಿ ಧನಂಜಯ್ ಪ್ರೇಮಿಯಾಗಿ‌ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್‌ ಲೈಂಗಿಕ ಕಾರ್ಯಕರ್ತೆಯ ಪಾತ್ರ ನಿರ್ವಹಿಸಿದ್ದಾರೆ. ಸುಹಾಸಿನಿ, ಅಚ್ಯುತ್ ಕುಮಾರ್ ಅವರ ಕಾಂಬಿನೇಶನ್ ಅದ್ಭುತವಾಗಿ ಮೂಡಿ ಬಂದಿದೆ. ಯಶಾ ಶಿವಕುಮಾರ್ ರಾಗ ಸುಧಾ ಹಾಡಿನಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: ರಾಕಿಂಗ್​ ಸ್ಟಾರ್ ಯಶ್ ಹೊಸ ಲುಕ್​​ಗೆ ಫ್ಯಾನ್ಸ್​ ಫಿದಾ

ಅನೂಪ್ ಸೀಳಿನ್ ಸಂಗೀತ, ಕ್ಯಾಮರಾ ಮ್ಯಾನ್‌ ಎಸ್.ಕೆ‌.ರಾವ್ ಛಾಯಾಗ್ರಹಣವಿದೆ. ಗುರು ಕಶ್ಯಪ್ ಸಂಭಾಷಣೆ ಬರೆದಿದ್ದು, ನಿರ್ಮಾಪಕ ವಿಖ್ಯಾತ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ರವೀಂದ್ರನಾಥ್ ನಿರ್ದೇಶನಕ್ಕೆ‌ ಸಿನಿಮಾ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Last Updated : Sep 16, 2022, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.