ETV Bharat / entertainment

ಕುದುರೆ ಸವಾರಿ ಮಾಡುವಾಗ ಬಿದ್ದ ಮಿಸ್​​ ಯೂನಿವರ್ಸ್​​​ ಫೈನಲಿಸ್ಟ್ ಕೊನೆಯುಸಿರು

author img

By

Published : May 6, 2023, 1:17 PM IST

ಕುದುರೆ ಸವಾರಿ ಮಾಡುವ ವೇಳೆ ಕೆಳಗೆ ಬಿದ್ದು ಗಾಯಗೊಂಡಿದ್ದ ರೂಪದರ್ಶಿ ಸಿಯೆನ್ನಾ ವೀರ್ ಶುಕ್ರವಾರ ರಾತ್ರಿ ಮೃತರಾಗಿದ್ದಾರೆ.

Sienna Weir death
ಸಿಯೆನ್ನಾ ವೀರ್ ನಿಧನ

ಮೆಲ್ಬೋರ್ನ್: ವಿಶ್ವ ಸುಂದರಿ ಫೈನಲಿಸ್ಟ್ (ಆಸ್ಟ್ರೇಲಿಯಾ) ಸಿಯೆನ್ನಾ ವೀರ್ (Sienna Weir) ಬಗ್ಗೆ ಹೃದಯ ವಿದ್ರಾವಕ ಸುದ್ದಿ ಬೆಳಕಿಗೆ ಬಂದಿದೆ. ರೂಪದರ್ಶಿ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರು, ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಕಿರಿ ವಯಸ್ಸಿನಲ್ಲೇ ಕೊನೆಯುಸಿರು: ಸಿಯೆನ್ನಾ ವೀರ್ ಅವರು ಕುದುರೆ ಸವಾರಿ ಮಾಡುವ ವೇಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಸಿಯೆನ್ನಾ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು. ಕಿರಿ ವಯಸ್ಸಿನಲ್ಲೇ ರೂಪದರ್ಶಿ ಕೊನೆಯುಸಿರೆಳೆದಿರುವ ಬಗ್ಗೆ ಆಪ್ತ ಮೂಲಗಳು ಮಾಹಿತಿ ಹಂಚಿಕೊಂಡಿದೆ.

ಕುದುರೆ ಸವಾರಿ ವೇಳೆ ಗಾಯಗೊಂಡಿದ್ದ ರೂಪದರ್ಶಿ: ವರದಿಯ ಪ್ರಕಾರ, ಕುದುರೆ ಸವಾರಿಯ ಸಮಯದಲ್ಲಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಸಿಯೆನ್ನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಏಪ್ರಿಲ್ 2ರಂದು ಸಿಡ್ನಿಯ ವಿಂಡ್ಸರ್ ಪೋಲ್ ಗ್ರೌಂಡ್​ನಲ್ಲಿ ಕುದುರೆ ಸವಾರಿ ಮಾಡುತ್ತಿದ್ದರು. ಆ ವೇಳೆ ಕೆಳಗೆ ಬಿದ್ದಿದ್ದಾರೆ. ಈ ಅಪಘಾತದ ನಂತರ ತಕ್ಷಣವೇ ಅವರನ್ನು ವೆಸ್ಟ್‌ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರಿಗೆ ವಾರಗಳವರೆಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ರಾತ್ರಿ ನಿಧನರಾದರು.

ಕುದುರೆ ಸವಾರಿ ಬಗ್ಗೆ ವಿಶೇಷ ಆಸಕ್ತಿ: ಸಿಯೆನ್ನಾ ವೀರ್ ಸಿಡ್ನಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಸೈಕಾಲಜಿಯಲ್ಲಿ ಪದವಿ ಪಡೆದಿದ್ದಾರೆ. ಸಂದರ್ಶನವೊಂದರಲ್ಲಿ, ಹಾರ್ಸ್ ರೈಡಿಂಗ್​ ಅಥವಾ ಕುದುರೆ ಸವಾರಿ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವುದರ ಬಗ್ಗೆ ಹೇಳಿಕೊಂಡಿದ್ದರು.

ಹಾರ್ಸ್​ ರೈಡಿಂಗ್​ ಇಲ್ಲದೇ ನನ್ನ ಜೀವನವಿಲ್ಲ: ನನಗೆ ಈ ಕ್ರೀಡೆಯ ಬಗ್ಗೆ ಇಷ್ಟೊಂದು ಉತ್ಸಾಹ ಎಲ್ಲಿಂದ ಬಂತು ಎಂಬ ವಿಚಾರ ನನ್ನ ಮನೆಯವರಿಗೂ ತಿಳಿದಿರಲಿಲ್ಲ. ಆದರೆ ನಾನು 3 ವರ್ಷದವಳಾಗಿದ್ದಾಗಿನಿಂದ ಕುದುರೆ ಸವಾರಿಯಲ್ಲಿ ಒಲವು ಹೊಂದಿದ್ದೆ. ಹಾರ್ಸ್​ ರೈಡಿಂಗ್​ ಇಲ್ಲದೇ ನನ್ನ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ಶಿವಕಾರ್ತಿಕೇಯನ್ - ಸಾಯಿಪಲ್ಲವಿ: ಕಾಶ್ಮೀರದಲ್ಲಿ ಶೂಟಿಂಗ್​

ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತ, 'ನಾನು ವಾರಕ್ಕೆ ಎರಡರಿಂದ ಮೂರು ಬಾರಿ ಸಿಡ್ನಿಯ ಗ್ರಾಮಾಂತರ ಪ್ರದೇಶಗಳಿಗೆ ರೈಲಿನಲ್ಲಿ ಪ್ರಯಾಣಿಸಿ ಭೇಟಿ ಕೊಡುತ್ತೇನೆ. ಈಗಾಗಲೇ ಅನೇಕ ಸ್ಥಳಗಳಿಗೆ ತೆರಳಿದ್ದೇನೆ' ಎಂದು ಹೇಳಿದ್ದರು. ಇದೀಗ ಸೌಂದರ್ಯ ಕ್ಷೇತ್ರದಲ್ಲಿ ಸಾಧನೆಗೈದ ಸಿಯೆನ್ನಾ ವೀರ್ ನಿಧನಕ್ಕೆ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: 40 ಕೋಟಿ ಬಜೆಟ್‌ನಲ್ಲಿ ತಯಾರಾದ 'ದಿ ಕೇರಳ ಸ್ಟೋರಿ' ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

ಸೌಂದರ್ಯದ ರಾಣಿ ಎಂದೇ ಜನಪ್ರಿಯರಾಗಿದ್ದ ಸಿಯೆನ್ನಾ ವೀರ್ ಸಾವಿಗೆ ಸಂತಾಪ ಸೂಚಿಸಲಾಗುತ್ತಿದೆ. ಅಭಿಮಾನಿಗಳೂ ಸೇರಿದಂತೆ ಅವರ ಛಾಯಾಗ್ರಾಹಕರೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಅಗಲಿಕೆಯಿಂದ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ: 'ಸಮಂತಾ ಹೃದಯವಂತಳು, ಯಾವಾಗಲೂ ಸಂತೋಷವಾಗಿರಬೇಕು': ಮಾಜಿ ಪತ್ನಿ ಕೊಂಡಾಡಿದ ನಾಗ ಚೈತನ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.