ಬಾಲಿವುಡ್ ನಟಿ ಕತ್ರಿನಾ ಕೈಫ್, ತಮಿಳು ನಟ ವಿಜಯ್ ಸೇತುಪತಿ ಜೊತೆಗೆ ಬೆಳ್ಳಿತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಇಬ್ಬರು ಒಟ್ಟಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಮೆರಿ ಕ್ರಿಸ್ಮಸ್' ನಾಳೆ ಬಿಡುಗಡೆಯಾಗಲಿದೆ. ಸಿನಿಮಾ ತೆರೆ ಕಾಣಲು ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಚಿತ್ರದ ಕುರಿತು ಕೆಲವು ಫೋಟೋಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ.
ಸಿನಿಮಾದ ಕೆಲವು ಅದ್ಬುತ ಫೋಟೋಗಳನ್ನು ಹಂಚಿಕೊಂಡಿರುವ ಕತ್ರಿನಾ ಕೈಫ್, 'ನಾಳೆ ಚಿತ್ರದ ಕಥೆ ತಿಳಿಯುವ ಮುನ್ನ ಕೆಲವು ಆಲೋಚಿಸುವ ಕ್ಷಣಗಳು' ಎಂದು ಅಡಿಬರಹ ಬರೆದಿದ್ದಾರೆ. ಜೊತೆಗೆ ಕ್ರಿಸ್ಮಸ್ ಟ್ರೀ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಅವರ ಇನ್ಸ್ಟಾಗ್ರಾಂನಲ್ಲಿ ಕಾಣುತ್ತಿದ್ದಂತೆ, 'ನಿಮ್ಮ ಬಹು ನಿರೀಕ್ಷಿತ ಸಿನಿಮಾ' ಎಂದು ಒಬ್ಬ ಅಭಿಮಾನಿ ಬರೆದರೆ ಮತ್ತೊಬ್ಬ ಅಭಿಮಾನ 'ಇದನ್ನು ನೋಡಲು ಕಾತರವಾಗಿರುವುದಾಗಿ' ತಿಳಿಸಿದ್ದಾರೆ.
ಈ ನಡುವೆ ಚಿತ್ರದ ವಿಶೇಷ ಪ್ರೀಮಿಯರ್ ಶೋ ಬುಧವಾರ ಮುಂಬೈನಲ್ಲಿ ನಡೆದಿದೆ. ಅನೇಕ ಬಿ - ಟೌನ್ ಸೆಲೆಬ್ರಿಟಿಗಳು ಈ ಶೋಗೆ ಆಗಮಿಸಿದ್ದಾರೆ. ಈ ಮೂಲಕ ನಟಿ ಕತ್ರಿನಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಶೋನಲ್ಲಿ ನಟಿ ಕತ್ರಿನಾ ಗಂಡ ವಿಕ್ಕಿ ಕೌಶಲ್ ಜೊತೆಗೆ ಕೈ ಕೈಹಿಡಿದು, ಮಾತನಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದು ಪತ್ನಿಗೆ ಪತಿಯ ಬೆಂಬಲ ನೀಡುತ್ತಿರುವುದನ್ನು ತೋರಿಸುತ್ತಿದೆ.
- " class="align-text-top noRightClick twitterSection" data="">
'ಮೇರಿ ಕ್ರಿಸ್ಮಸ್' ಚಿತ್ರವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದು, ಇತ್ತೀಚಿಗೆ ಚಿತ್ರದ ಹೊಸ ಹಾಡು ಬಿಡುಗಡೆಯಾಗಿತ್ತು. ರೋಮ್ಯಾಂಟಿಕ್ ಟ್ರಾಕ್ ಹೊಂದಿರುವ 'ರಾತ್ ಅಕೆಲಿ ತಿ' ಹಾಡು ಎಲ್ಲರ ಮನ ಗೆದ್ದಿತ್ತು. ಅರ್ಜಿತ್ ಸಿಂಗ್ ಈ ಹಾಡಿಗೆ ದನಿಯಾಗಿದ್ದು, ಹಾಡಿಗೆ ಸಾಹಿತ್ಯವನ್ನು ವರುಣ್ ಗ್ರೋವರ್ ಪೋಣಿಸಿದ್ದಾರೆ. ಪ್ರೀತಂ ಹಾಡಿನ ಸಂಯೋಜನೆ ಮಾಡಿದ್ದಾರೆ. ಪ್ರೀತಂ ಮತ್ತು ವರಣ್ ಒಟ್ಟಿಗೆ ಈ ಹಾಡಿನ ಮೂಲಕ ಮೊದಲ ಬಾರಿ ಕೆಲಸ ಆರಂಭಿಸಿದ್ದಾರೆ.
- " class="align-text-top noRightClick twitterSection" data="">
ಈ ಚಿತ್ರದಲ್ಲಿ ಎರಡು ಭಾಷೆಗಳಲ್ಲಿ ನಿರ್ಮಾಣ ಮಾಡಲಾಗಿದ್ದು, ಎರಡರಲ್ಲೂ ವಿಭಿನ್ನ ಪೋಷಕ ಪಾತ್ರಗಳಿವೆ. ಹಿಂದಿ ಭಾಷೆಯ ಸಿನಿಮಾದಲ್ಲಿ ಕತ್ರಿನಾ, ವಿಜಯ್ ಸೇತುಪತಿ ಜೊತೆಗೆ ಪ್ರಮುಖ ಪಾತ್ರದಲ್ಲಿ ಸಂಜಯ್ ಕಪೂರ್, ವಿನಯ್ ಪಟಾಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ಕಾಣಿಸಿಕೊಂಡರೆ, ತಮಿಳಿನಲ್ಲಿ ರಾಧಿಕ ಸರತ್ ಕುಮಾರ್, ಷಣ್ಮುಗರಾಜ, ಕೆಲವಿನ್ ಜೈ ಬಾಬು, ರಾಜೇಶ್ ವಿಲಿಯಂ ಅದೇ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ಮೆರಿ ಕ್ರಿಸ್ಮಸ್ ಟ್ರೇಲರ್: ಕತ್ರಿನಾ, ವಿಜಯ್ ಸೇತುಪತಿ ಹೊಸ ಸಿನಿಮಾ ಕುತೂಹಲ