ETV Bharat / entertainment

ಆರ್​ಆರ್​ಆರ್​ ಚಿತ್ರಕ್ಕೆ 'ಅತ್ಯುತ್ತಮ ವಿದೇಶಿ ಭಾಷಾ ಚಿತ್ರ' ಪ್ರಶಸ್ತಿ.. 'ಮೇರಾ ಭಾರತ್​ ಮಹಾನ್' ಎಂದ ರಾಜಮೌಳಿ

ಕ್ರಿಟಿಕ್ಸ್ ಚಾಯ್ಸ್​ ಅವಾರ್ಡ್ಸ್​ 2023ರಲ್ಲಿ ‘ಅತ್ಯುತ್ತಮ ವಿದೇಶಿ ಭಾಷೆ ಚಿತ್ರ’ ಪ್ರಶಸ್ತಿಯನ್ನು ‘ಆರ್​ಆರ್​ಆರ್​’ ಚಿತ್ರ ಪಡೆದುಕೊಂಡಿದೆ.

S S Rajamouli
ಆರ್​ಆರ್​ಆರ್​ ಚಿತ್ರ
author img

By

Published : Jan 16, 2023, 2:58 PM IST

ಖ್ಯಾತ ನಿರ್ದೇಶಕ ಎಸ್​ಎಸ್​ ರಾಜಮೌಳಿಯ ಆರ್​ಆರ್​ಆರ್​ ಚಿತ್ರಕ್ಕೆ ಮತ್ತೊಂದು ಗರಿಮೆ ಸಂದಿದೆ. 28 ನೇ ಕ್ರಿಟಿಕ್ಸ್​ ಚಾಯ್ಸ್ ಅವಾರ್ಡ್​ನಲ್ಲಿ ಅತ್ಯುತ್ತಮ ಮೂಲ ಹಾಡು ಮತ್ತು ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಭಾರತ ಮತ್ತೊಮ್ಮೆ ಹೆಮ್ಮೆ ಪಡುವಂತೆ ಮಾಡಿದೆ.

ದಕ್ಷಿಣ ಚಿತ್ರರಂಗದ​ ಸೂಪರ್​ಸ್ಟಾರ್​ಗಳಾದ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ತಮ್ಮ ಅಮೋಘ ನಟನೆಯಿಂದಲೇ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದ್ದರು. ಈ ಚಿತ್ರ ಭಾರತದಲ್ಲಿ ಮಾತ್ರವಲ್ಲದೇ ಹಾಲಿವುಡ್​ನಲ್ಲೂ ಬ್ಲಾಕ್​ಬಸ್ಟರ್​ ಎನಿಸಿಕೊಂಡಿತ್ತು. ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ಸಿನಿಮಾ ಇತ್ತೀಚೆಗೆ ಗೋಲ್ಡನ್​ ಗ್ಲೋಬ್​ ಪ್ರಶಸ್ತಿಯನ್ನು ಕೂಡ ಬಾಚಿಕೊಂಡಿತ್ತು. ಇದೀಗ ಮತ್ತೊಮ್ಮೆ ಅತ್ಯುತ್ತಮ ಮೂಲ ಹಾಡು ಮತ್ತು ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಎಂಬ ಗೌರವವನ್ನು ಗಿಟ್ಟಿಸಿಕೊಂಡಿದೆ. ಈ ಮೂಲಕ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಕಿರೀಟ ತಂದುಕೊಟ್ಟಿದೆ.

'ಮೇರಾ ಭಾರತ್​ ಮಹಾನ್'​... ಪ್ರಶಸ್ತಿಯನ್ನು ಸ್ವೀಕರಿಸಿ ವೇದಿಕೆಯಲ್ಲಿ ಮಾತನಾಡಿದ ನಿರ್ದೇಶಕ ರಾಜಮೌಳಿ, 'ಮೇರಾ ಭಾರತ್​ ಮಹಾನ್'​ ಎಂದು ತಾಯಿನಾಡಿಗೆ ಜೈಕಾರ ಹಾಕಿದ್ದಾರೆ. ಜೊತೆಗೆ ತನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿರುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 'ನನ್ನ ಜೀವನಕ್ಕೆ ಕಾಲಿಟ್ಟ ಮೊದಲ ಮಹಿಳೆ ನನ್ನ ತಾಯಿ ರಾಜ ನಂದಿನಿ. ನನ್ನ ಬಾಲ್ಯ ಶಿಕ್ಷಣದಲ್ಲಿ ಅವರು ಹೆಚ್ಚು ಪ್ರಭಾವ ಬೀರಿದ್ದಾರೆ.

ಕಾಮಿಕ್ಸ್ ಮತ್ತು ಕಥೆ ಪುಸ್ತಕಗಳನ್ನು ಅತಿಯಾಗಿ ಓದಲು ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಅದುವೇ ನನಗೆ ಇಂತಹ ಚಿತ್ರಗಳನ್ನು ಮಾಡಲು ಪ್ರೇರಣೆ ನೀಡಿದೆ. ನಂತರ ನನ್ನ ತಾಯಿಯಂತಿದ್ದ ಅತ್ತಿಗೆ ಶ್ರೀವಲ್ಲಿ ಪ್ರತಿಯೊಂದು ವಿಷಯಕ್ಕೂ ಸಪೋರ್ಟ್​ ನೀಡುತ್ತಿದ್ದರು. ಈಗ ನನ್ನ ಚಿತ್ರಗಳಿಗೆ ಕಾಸ್ಟ್ಯೂಮ್​ ಡಿಸೈನರ್​ ಆಗಿರುವ ನನ್ನ ಪತ್ನಿ ರಮಾ. ಅವಳು ನನ್ನ ಸಿನಿಮಾಕ್ಕೆ ಮಾತ್ರವಲ್ಲ ನನ್ನ ಜೀವನದ ಡಿಸೈನರ್ ಕೂಡ ಹೌದು. ನನ್ನ ಜೀವನದಲ್ಲಿ ಜೀವನದಲ್ಲಿ ಅವಳಿಲ್ಲ ಎಂದರೆ ನಾನೇನೂ ಅಲ್ಲ. ಅವಳ ನಗುವೆ ಸಾಕು ನನ್ನ ಜೀವನ ಬೆಳಗಲು' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಅಂತಿಮವಾಗಿ ಎಲ್ಲದಕ್ಕಿಂತಲೂ ನನ್ನ ತಾಯಿನಾಡು ಭಾರತವೇ ದೊಡ್ಡದು. ಮೇರಾ ಭಾರತ್​ ಮಹಾನ್​- ಜೈ ಹಿಂದ್​ ಎಂದು ರಾಜಮೌಳಿ ಜೈಕಾರ ಹೇಳಿದ್ದಾರೆ. ನಿನ್ನೆಯಷ್ಟೇ ಆರ್​ಆರ್​ಆರ್​ ಬಾಲಿವುಡ್​ ಸಿನಿಮಾವಲ್ಲ. ಅಪ್ಪಟ ತೆಲುಗು ಚಿತ್ರ ಎಂದು ಹೇಳಿ ದಕ್ಷಿಣ ಚಿತ್ರರಂಗದ​ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಇದೀಗ ಭಾರತೀಯರೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್​ ಮೂಲಕ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ ಖಾತೆ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ.

ಅಲ್ಲದೇ ಆರ್​ಆರ್​ಆರ್​ ತಂಡವು ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು 'ನಾಟು ನಾಟು ಹಾಡಿಗೆ ಮತ್ತೊಮ್ಮೆ ಜಯ ಸಿಕ್ಕಿದೆ. ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ ಅನ್ನು ಗೆದ್ದಿದ್ದೇವೆ ಎಂದು ಹೇಳಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆರ್​ಆರ್​ಆರ್​ ಬಾಲಿವುಡ್​ ಸಿನಿಮಾವಲ್ಲ, ಅಪ್ಪಟ ತೆಲುಗು ಚಿತ್ರ: ಅಮೆರಿಕದಲ್ಲಿ ರಾಜಮೌಳಿ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.