ETV Bharat / entertainment

ಇಶಾನ್ ನಟನೆಯ 'ರೇಮೊ' ಚಿತ್ರಕ್ಕೆ ಸಿಕ್ತು ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದ - ಪವನ್ ಒಡೆಯರ್ ನಿರ್ದೇಶನ

ರೇಮೊ ಸಿನಿಮಾದ ಪ್ರಚಾರದಲ್ಲಿ ತೆಲುಗು ಮೆಗಾಸ್ಟಾರ್​ ಚಿರಂಜೀವಿ ಭಾಗಿಯಾಗಿದ್ದು, ಇಶಾನ್​ ಹಾಗೂ ಸಿನಿಮಾ ಯಶಸ್ಸಿಗೆ ಮನದುಂಬಿ ಹಾರೈಸಿದ್ದಾರೆ.

Actor Ishan vwith megastar Chiranjeevi
ಚಿರಂಜೀವಿ ಜೊತೆ ನಟ ಇಶಾನ್​
author img

By

Published : Nov 24, 2022, 8:46 AM IST

ರೇಮೊ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಲು ಸಜ್ಜಾಗಿರುವ ಯುವ ಪ್ರತಿಭೆ ಇಶಾನ್​ಗೆ ಸಿನಿಮಾ ಲೋಕದ ದಿಗ್ಗಜರಿಂದ ಶುಭ ಹಾರೈಕೆಗಳು ಸಿಗುತ್ತಿವೆ. ಸ್ಯಾಂಡಲ್​ವುಡ್ ಸೂಪರ್‌ ಸ್ಟಾರ್​ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಸುದೀಪ್, ಕ್ರೇಜಿಸ್ಟಾರ್ ರವಿಚಂದ್ರನ್ ಹೀಗೆ ಅನೇಕರು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಬ್ಲೆಸ್ಸಿಂಗ್ಸ್ ಕೂಡ ಸಿಕ್ಕಿದೆ.

Remo cinema Poster
ರೇಮೊ ಸಿನಿಮಾ ಪೋಸ್ಟರ್​

‘ರೇಮೊ’ ನವೆಂಬರ್ 25ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾ ಪ್ರಚಾರ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ. ಪ್ರಚಾರದಲ್ಲಿ ಬ್ಯುಸಿಯಾಗಿರುವ ನಾಯಕ ನಟ ಇಶಾನ್, ಚಿರಂಜೀವಿ ಅವರನ್ನು ಭೇಟಿ ಮಾಡಿದ್ದಾರೆ. ಇಶಾನ್ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ಚಿರಂಜೀವಿ ಸಿನಿಮಾ ಯಶಸ್ಸು ಕಾಣಲೆಂದು ಮನದುಂಬಿ ಹಾರೈಸಿದ್ದಾರೆ. ಚಿರಂಜೀವಿ ಭೇಟಿಯಾದ ಪೋಟೋವನ್ನು ಇಶಾನ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಮ್ಯೂಸಿಕಲ್ ಮತ್ತು ರೊಮ್ಯಾಂಟಿಕ್ ಸಬ್ಜೆಕ್ಟ್ ಒಳಗೊಂಡಿದೆ. ಜಯಾದಿತ್ಯ ಬ್ಯಾನರ್​ ಅಡಿ ಸಿ.ಆರ್.ಮನೋಹರ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿ ಆರ್ ಗೋಪಿ ನಿರ್ಮಾಣವೂ ಚಿತ್ರಕ್ಕಿದೆ. ವೈದಿ ಕ್ಯಾಮೆರಾ ವರ್ಕ್, ಕೆ.ಎಂ.ಪ್ರಕಾಶ್ ಸಂಕಲನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತವಿದೆ.

ಇದನ್ನೂ ಓದಿ: ರೇಮೊ ಶೂಟಿಂಗ್​ ವಿಡಿಯೋ ವೈರಲ್: ಆಶಿಕಾರಲ್ಲಿ ಕ್ಷಮೆ ಕೇಳಿದ ನಿರ್ದೇಶಕ ಪವನ್‌ ಒಡೆಯರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.