ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಆರಾಧಿಸುವ ಅಪಾರ ಅಭಿಮಾನಿಗಳಿದ್ದಾರೆ. ಅವರಿಗೆಲ್ಲರಿಗೂ ಶಾಕ್ ನೀಡುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸೂಪರ್ ಸ್ಟಾರ್ ನಟ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂಬುದು ಸದ್ಯ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ವಿಚಾರದ ಬಗ್ಗೆ ಸ್ವತಃ ಚಿರಂಜೀವಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮೆಗಾಸ್ಟಾರ್ ಟ್ವೀಟ್ನಲ್ಲೇನಿದೆ?: "ಸ್ವಲ್ಪ ಸಮಯದ ಹಿಂದೆ ನಾನು ಕ್ಯಾನ್ಸರ್ ಸೆಂಟರ್ ಉದ್ಘಾಟಿಸುವ ವೇಳೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದೆ. ನಿಯಮಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದರೆ ಕ್ಯಾನ್ಸರ್ ಬರದಂತೆ ತಡೆಯಬಹುದು ಎಂದು ಸಲಹೆ ನೀಡಿದ್ದೆ. ಈ ಬಗ್ಗೆ ನಾನು ಕೂಡ ಜಾಗ್ರತೆವಹಿಸಿ ಕೊಲೊನ್ ಸ್ಕೋಪ್ ಪರೀಕ್ಷೆ ಮಾಡಿಸಿದ್ದೆ. ನನ್ನಲ್ಲಿ ಕ್ಯಾನ್ಸರ್ ಅಲ್ಲದ ಪೋಲಿಪ್ಸ್ ಕಾಣಿಸಿತ್ತು. ಬಳಿಕ ಅದನ್ನು ತೆಗೆಯಲಾಯಿತು. ಆ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದಿದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆ ಇತ್ತು. ಹಾಗಾಗಿಯೇ ಎಲ್ಲರೂ ಕ್ಯಾನ್ಸರ್ ಬಗ್ಗೆ ಮುಂಜಾಗ್ರತೆ ವಹಿಸಿ, ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮಾತ್ರ ನಾನು ಹೇಳಿದ್ದೆ" ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.
-
కొద్ది సేపటి క్రితం నేనొక క్యాన్సర్ సెంటర్ ని ప్రారంభించిన సందర్భంగా క్యాన్సర్ పట్ల అవగాహన పెరగాల్సిన అవసరం గురించి మాట్లాడాను. రెగ్యులర్ గా మెడికల్ టెస్టులు చేయించుకుంటే క్యాన్సర్ రాకుండా నివారించవచ్చు అని చెప్పాను. నేను అలర్ట్ గా వుండి కొలోన్ స్కోప్ టెస్ట్…
— Chiranjeevi Konidela (@KChiruTweets) June 3, 2023 " class="align-text-top noRightClick twitterSection" data="
">కొద్ది సేపటి క్రితం నేనొక క్యాన్సర్ సెంటర్ ని ప్రారంభించిన సందర్భంగా క్యాన్సర్ పట్ల అవగాహన పెరగాల్సిన అవసరం గురించి మాట్లాడాను. రెగ్యులర్ గా మెడికల్ టెస్టులు చేయించుకుంటే క్యాన్సర్ రాకుండా నివారించవచ్చు అని చెప్పాను. నేను అలర్ట్ గా వుండి కొలోన్ స్కోప్ టెస్ట్…
— Chiranjeevi Konidela (@KChiruTweets) June 3, 2023కొద్ది సేపటి క్రితం నేనొక క్యాన్సర్ సెంటర్ ని ప్రారంభించిన సందర్భంగా క్యాన్సర్ పట్ల అవగాహన పెరగాల్సిన అవసరం గురించి మాట్లాడాను. రెగ్యులర్ గా మెడికల్ టెస్టులు చేయించుకుంటే క్యాన్సర్ రాకుండా నివారించవచ్చు అని చెప్పాను. నేను అలర్ట్ గా వుండి కొలోన్ స్కోప్ టెస్ట్…
— Chiranjeevi Konidela (@KChiruTweets) June 3, 2023
ಮುಂದುವರೆದು ಬರೆದಿರುವ ಅವರು, "ಆದರೆ ಕೆಲವು ಮಾಧ್ಯಮ ಸಂಸ್ಥೆಗಳು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ನನಗೆ ಕ್ಯಾನ್ಸರ್ ಬಂದಿದೆ ಮತ್ತು ಅದರ ಚಿಕಿತ್ಸೆಯಿಂದ ಬದುಕಿದೆ ಎಂದು ಲೇಖನಗಳನ್ನು, ಸುದ್ದಿಗಳನ್ನು ಮಾಡಿದ್ದಾರೆ. ಇದರಿಂದ ಅನಗತ್ಯ ಗೊಂದಲ ಉಂಟಾಗಿದೆ. ಅನೇಕ ಹಿತೈಷಿಗಳು ನನಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾರೆ. ಅವರಿಗೆಲ್ಲ ಇದು ನನ್ನ ಸ್ಪಷ್ಟನೆ. ವಿಷಯ ಅರ್ಥವಾಗದೇ ಅಸಂಬದ್ಧಗಳನ್ನೆಲ್ಲ ಬರೆಯಬೇಡಿ ಎಂದು ಮಾಧ್ಯಮದವರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದರಿಂದಾಗಿ ಅನೇಕ ಜನರಿಗೆ ಭಯ ಉಂಟಾಗುತ್ತದೆ" ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ "ಮತ್ತೆ ಮದುವೆ" ಸಿನಿಮಾ ಜೂ. 9ಕ್ಕೆ ತೆರೆಗೆ
ಇದನ್ನು ಕಂಡ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮೆಗಾಸ್ಟಾರ್ ಆರೋಗ್ಯವಾಗಿದ್ದಾರೆ ಎಂಬುದೇ ಅವರಿಗೆ ಖುಷಿ ಕೊಟ್ಟಿದೆ. ನೀವು ಸ್ಪಷ್ಟನೆ ನೀಡಿದ್ದು ತುಂಬಾನೇ ಒಳ್ಳೆದಾಯ್ತು ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ನೀವು ನೂರಾರು ವರ್ಷ ಆರೋಗ್ಯವಾಗಿ ಬಾಳಿ. ಇನ್ನಷ್ಟು ಉತ್ತಮ ಸಿನಿಮಾಗಳನ್ನು ನೀಡುವಂತಾಗಲಿ ಎಂದು ಹಾರೈಸಿದ್ದಾರೆ.
ಚಿರಂಜೀವಿ ಸಿನಿಮಾ ಜರ್ನಿ: ಗಾಡ್ಫಾದರ್ ಸಿನಿಮಾ ನಂತರ ಸದ್ಯ ಭೋಲಾ ಶಂಕರ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಮೆಹರ್ ರಮೇಶ್ ನಿರ್ದೇಶನದ ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿದ್ದಾರೆ. ಚಿರಂಜೀವಿ ಅವರ ಸಹೋದರಿಯಾಗಿ ಕೀರ್ತಿ ಸುರೇಶ್ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಶೇಕಡಾ 80 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರ ಆಗಸ್ಟ್ 11 ರಂದು ಥಿಯೇಟರ್ಗೆ ಬರಲಿದೆ. ಕಾಲಿವುಡ್ ಸ್ಟಾರ್ ಅಜಿತ್ ಅಭಿನಯದ ತಮಿಳಿನ ಬ್ಲಾಕ್ ಬಸ್ಟರ್ ವೇದಾಲಂನ ತೆಲುಗು ರಿಮೇಕ್ ಆಗಿ ಭೋಲಾ ಶಂಕರ್ ತಯಾರಾಗುತ್ತಿದೆ.
ಇದನ್ನೂ ಓದಿ: ದಾಂಪತ್ಯದಲ್ಲಿ 50 ವರ್ಷ ಪೂರೈಸಿದ ಅಮಿತಾಭ್ ಬಚ್ಚನ್- ಜಯಾ: ಮಗಳಿಂದ ಸ್ಪೆಷಲ್ ಫೋಟೋ ಶೇರ್