ETV Bharat / entertainment

'ಮಂಡಲ' ಬಿಡುಗಡೆಗೆ ಮುಹೂರ್ತ ನಿಗದಿ: ಸೈನ್ಸ್-ಫಿಕ್ಷನ್ ಸಿನಿಮಾ ಮೇಲೆ ಸಾಕಷ್ಟು ಕುತೂಹಲ - mandala movie

ಸೈನ್ಸ್ ಫಿಕ್ಷನ್ ಸಿನಿಮಾ 'ಮಂಡಲ' ಮಾರ್ಚ್ 10ರಂದು ತೆರೆ ಕಾಣಲಿದೆ.

mandala movie release date
ಮಾ.10ಕ್ಕೆ ಮಂಡಲ ಸಿನಿಮಾ ಬಿಡುಗಡೆ
author img

By

Published : Feb 21, 2023, 3:54 PM IST

ಸಿನಿಮಾ ಮೇಲಿನ ಪ್ಯಾಶನ್‌ಗಾಗಿ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿ ನಟನೆ, ನಿರ್ದೇಶನದತ್ತ ಮುಖ ಮಾಡಿದವರ ಕುರಿತಾಗಿ ಅದೆಷ್ಟೋ ಉದಾಹರಣೆಗಳಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಅಜಯ್ ಸರ್ಪೇಷ್ಕರ್. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಅಜಯ್ ಸರ್ಪೇಷ್ಕರ್ ಅವರಿಗೆ ಸಿನಿಮಾ, ಫೋಟೋಗ್ರಫಿಯಲ್ಲಿ ಮೊದಲಿನಿಂದಲೂ ಅಪಾರ ಆಸಕ್ತಿ. ಇದಕ್ಕಾಗಿ ಸಾಫ್ಟ್‌ವೇರ್ ಕೆಲಸಕ್ಕೆ ಫುಲ್‌ಸ್ಟಾಪಿಟ್ಟು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸೈನ್ಸ್ ಫಿಕ್ಷನ್ ಸಿನಿಮಾ 'ಮಂಡಲ' ಮೂಲಕ ಅವರೀಗ ಪ್ರೇಕ್ಷಕರೆದುರು ಬರಲು ಸಜ್ಜಾಗಿ ನಿಂತಿದ್ದಾರೆ.

ಫಸ್ಟ್ ಲುಕ್ ಮೂಲಕ ಗಮನ ಸೆಳೆದ 'ಮಂಡಲ' ಫ್ಯಾಮಿಲಿ ಡ್ರಾಮಾ ಸಬ್ಜೆಕ್ಟ್ ಹೊಂದಿದೆ. ಮೊದಲ ಚಿತ್ರದಲ್ಲಿ ಒಂದೊಳ್ಳೆ ಸಬ್ಜೆಕ್ಟ್ ಜೊತೆಗೆ ಅನುಭವಿ ಕಲಾವಿದರನ್ನು ಒಟ್ಟುಗೂಡಿಸಿ ನಿರ್ದೇಶನ ಮಾಡಿದ್ದಾರೆ ಅಜಯ್ ಸರ್ಪೇಷ್ಕರ್. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

mandala movie release date
ಮಾ.10ಕ್ಕೆ ಮಂಡಲ ಸಿನಿಮಾ ಬಿಡುಗಡೆ

2018ರಲ್ಲೇ ನಡೆದಿತ್ತು ಶೂಟಿಂಗ್​: "2018ರಲ್ಲೇ ಮಂಡಲ ಸಿನಿಮಾದ ಚಿತ್ರೀಕರಣ ಮುಗಿದಿತ್ತು. ಸೈನ್ಸ್ ಫಿಕ್ಷನ್ ಸಿನಿಮಾವಾದ್ದರಿಂದ ಚಿತ್ರವನ್ನು ವಿಶ್ಯುವಲ್ ಎಫೆಕ್ಟ್ ಆವರಿಸಿಕೊಂಡಿದೆ. ಈ ಕೆಲಸದಲ್ಲಿರುವಾಗ ಕೋವಿಡ್ ಬಾಧಿಸಿ ಕೆಲಸ ಸ್ಥಗಿತವಾಗಿತ್ತು. ಇದೀಗ ಸಿನಿಮಾದ ಕೆಲಸ ಪೂರ್ಣಗೊಂಡಿದೆ. ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ" ಎಂದು ಅಜಯ್ ಸರ್ಪೇಷ್ಕರ್ ಹೇಳಿದರು.

ಇದನ್ನೂ ಓದಿ: ಭರವಸೆಯ ನಟನಾಗಿ ಕಾಂತಾರ ಸ್ಟಾರ್: ಫಾಲ್ಕೆ ಪ್ರಶಸ್ತಿ 2023ರ ಸುಂದರ ಕ್ಷಣಗಳು

ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಅವರನ್ನೊಳಗೊಂಡ ತಾರಾಬಳಗವಿದೆ. ಇದು ಅಜಯ್ ಸರ್ಪೇಷ್ಕರ್ ನಿರ್ದೇಶನದ ಚೊಚ್ಚಲ ಸಿನಿಮಾ. ಆರಂಭದಲ್ಲಿ ಇವರು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದರು. ಮಂಡಲ ಚಿತ್ರಕ್ಕೆ ಖುದ್ದು ಕಥೆ ಬರೆದು ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣವನ್ನೂ ಇವರೇ ಮಾಡಿದ್ದಾರೆ.

ಇದನ್ನೂ ಓದಿ: 150 ಕೋಟಿ ರೂ. ಮೌಲ್ಯದ ಮನೆ ಪೋಷಕರಿಗೆ ಉಡುಗೊರೆ ನೀಡಿದ ನಟ ಧನುಷ್

ಜೆಸ್ಸಿ ಕ್ಲಿಂಟನ್ ಸಂಗೀತ ನೀಡಿದ್ದಾರೆ. ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ, ನಿತಿನ್ ಲುಕೋಸೆ ಸೌಂಡ್ ಡಿಸೈನ್, ಒಲಿವರ್ ಎಲ್ವಿಸ್ ಹಾಗೂ ಮನೋಜ್ ಬೆಳ್ಳೂರು ವಿಎಫ್​ಎಕ್ಸ್, ಪ್ರಕಾಶ್ ಬೆಳವಾಡಿ ಹಾಗೂ ಅಜೆಯ್ ಸರ್ಪೇಷ್ಕರ್ ಅವರ ಚಿತ್ರಕಥೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.