ETV Bharat / entertainment

Poojapura Ravi: 800 ಸಿನಿಮಾಗಳಲ್ಲಿ ನಟಿಸಿದ್ದ ಪೂಜಾಪುರ ರವಿ ಇನ್ನಿಲ್ಲ.. - ಪೂಜಾಪುರ ರವಿ ಇನ್ನಿಲ್ಲ

ಅನಾರೋಗ್ಯ ಹಿನ್ನೆಲೆ ಜನಪ್ರಿಯ ಮಲಯಾಳಂ ನಟ ಪೂಜಾಪುರ ರವಿ ನಿಧನರಾಗಿದ್ದಾರೆ.

Poojapura Ravi died
ನಟ ಪೂಜಾಪುರ ರವಿ ನಿಧನ
author img

By

Published : Jun 18, 2023, 5:34 PM IST

ಜನಪ್ರಿಯ ನಟ ಪೂಜಾಪುರ ರವಿ (Poojapura Ravi) ನಿಧನರಾಗಿದ್ದಾರೆ. ಇಡುಕ್ಕಿ ಜಿಲ್ಲೆಯ ಮರಯೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮರಯೂರಿನಲ್ಲಿರುವ ಮಗಳ ಮನೆಯಲ್ಲಿ ಜೀವನ ನಡೆಸುತ್ತಿದ್ದ ಇವರು ಭಾನುವಾರ ಬೆಳಗ್ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾಳೆ.

800 ಚಲನಚಿತ್ರಗಳು, 4,000 ನಾಟಕ: ಐದು ದಶಕಗಳಿಂದ ನಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಸುಮಾರು 800 ಚಲನಚಿತ್ರಗಳು ಮತ್ತು ಸುಮಾರು 4,000 ನಾಟಕಗಳಲ್ಲಿ ನಟಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದರು. ಇಂದು ಇಹಲೋಕ ತ್ಯಜಿಸಿದ್ದು, ರಂಗಭೂಮಿ, ಚಿತ್ರರಂಗ, ಅಭಿಮಾನಿ ಬಳಗದವರು ಕಣ್ಣೀರಿಟ್ಟಿದ್ದಾರೆ.

1975ರಲ್ಲಿ ಚಿತ್ರರಂಗಕ್ಕೆ ಪ್ರವೇಶ: ಪೂಜಾಪುರ ರವಿ ಅವರು ಒಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಹುಬೇಡಿಕೆ ನಟನಾಗಿ ಮಿಂಚಿದ್ದರು. ಸಿನಿಮಾಗಳಲ್ಲಿ ತಮ್ಮ ನಟನಾ ಕೌಶಲ್ಯ ಸಾಬೀತು ಪಡಿಸಿದ್ದರು. ನಾಟಕಗಳ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿ ಬಳಿಕ ಬೆಳ್ಳಿತೆರೆಯಲ್ಲಿ ಛಾಪು ಮೂಡಿಸಿದ್ದರು. ಅವರು ಪ್ರಸಿದ್ಧ ನಾಟಕ ತಂಡ 'ಕಲಾನಿಲಯಂ' ಭಾಗವಾಗಿ ಕೆಲಸ ಮಾಡಿದರು. 1975ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.

ಅಭಿಮಾನಿಗಳ ಸಂಪಾದನೆ: ಆರಂಭಿಕ ಹಂತದಲ್ಲಿ ಅವರಿಗೆ ಸಿಗುತ್ತಿದ್ದದ್ದು ಸಣ್ಣಪುಟ್ಟ ಪಾತ್ರಗಳೇ. ಆದರೆ ನಿಧಾನವಾಗಿ ಮಲಯಾಳಂ ಚಿತ್ರರಂಗದ ಗಣ್ಯರ ಪಟ್ಟಿಗೆ ಸೇರ್ಪಡೆಯಾದರು. ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ವೇಳೆ 800ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರವನ್ನು ಸಲೀಸಾಗಿ ನಿರ್ವಹಿಸಬಲ್ಲ ಅವರ ಸಾಮರ್ಥ್ಯವೇ ಅವರನ್ನು ಎಲ್ಲರಿಗೂ ಇಷ್ಟವಾಗುವಂತೆ ಮಾಡಿತು. ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿತು.

ಧಾರಾವಾಹಿಗಳಲ್ಲೂ ಸಕ್ರಿಯ: ನಟ ಪೂಜಾಪುರ ರವಿ ಅವರ ಮೊದಲ ಚಿತ್ರ 'ವೇಲುತಂಪಿ ದಳವ'. ಕಾಮಿಡಿಯನ್​ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಅವರು ಕೊನೆಗೆ 2016ರಲ್ಲಿ ಗಪ್ಪಿ ಚಿತ್ರದಲ್ಲಿ ನಟಿಸಿದ್ದರು. 1990ರ ದಶಕದಲ್ಲಿ ಧಾರಾವಾಹಿಗಳಲ್ಲೂ ಸಕ್ರಿಯರಾಗಿದ್ದರು.

"ಕಲ್ಲನ್ ಕಪಲಿಲ್ಪ" ಚಿತ್ರದಲ್ಲಿ ಅಮ್ಮಿನಿಯ ಚಿಕ್ಕಪ್ಪನ ಪಾತ್ರವು ನಟ ಪೂಜಾಪುರ ರವಿ ಅವರನ್ನು ಚಲನಚಿತ್ರದಲ್ಲಿ ಜನಪ್ರಿಯಗೊಳಿಸಿತು. 1992 ರಲ್ಲಿ ಬಿಡುಗಡೆಯಾದ ಸುಬ್ರಮಣ್ಯಂ ಸ್ವಾಮಿ ಚಿತ್ರದ ಪಾತ್ರ ಕೂಡ ಕೂಡ ಅವರ ಗಮನಾರ್ಹ ಪಾತ್ರವಾಗಿದೆ. 1990ರ ದಶಕದಲ್ಲಿ ಸೀರಿಯಲ್​ಗಳಲ್ಲೂ ಕಾಣಿಸಿಕೊಂಡರು.

ಇದನ್ನೂ ಒದಿ: Adipurush: 'ಆದಿಪುರುಷ'ನಿಗೆ ಭಾರಿ ಆಕ್ಷೇಪ; ವಿವಾದಿತ ಸಂಭಾಷಣೆ​ ಬದಲಿಸಲು ಚಿತ್ರತಂಡ ನಿರ್ಧಾರ

ತಿರುವಾಂಕೂರು ಮಿಲಿಟರಿ ಶಾಲೆಯಲ್ಲಿ ಅಧಿಕಾರಿಯಾಗಿದ್ದ ಮಾಧವನ್ ಪಿಳ್ಳೈ ಮತ್ತು ಭವಾನಿಯಮ್ಮ ಅವರ ನಾಲ್ಕು ಮಕ್ಕಳ ಪೈಕಿ ನಟ ಪೂಜಾಪುರ ರವಿ ಹಿರಿಯರು. ಚಿನ್ನಮ್ಮ ಮೆಮೋರಿಯಲ್ ಸ್ಕೂಲ್ ಮತ್ತು ತಿರುಮಲ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದರು. ಆಕಾಶವಾಣಿಯ ನಾಟಕದಲ್ಲಿ ಕಂಠದಾನ ಮಾಡಲು ಆಯ್ಕೆಯಾದದ್ದೇ ಅವರ ನಟನಾ ವೃತ್ತಿಜೀವನದ ಮಹತ್ವದ ತಿರುವು. ಅವರು 7ನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ನಟನೆ ಆರಂಭಿಸಿದ್ದರು. ನಂತರ ರವಿ ಆಕಾಶವಾಣಿ ಬಾಲಲೋಕಂ ನಾಟಕಗಳಲ್ಲಿ ಕಂಠದಾನ ಮಾಡಿದರು. ಬಳಿಕ ನಾಟಕ, ಸಿನಿಮಾಗಳಲ್ಲಿ ತೊಡಗಿಸಿಕೊಂಡರು.

ಇದನ್ನೂ ಒದಿ: Animal: ಅನಿಮಲ್‌ ಚಿತ್ರದಲ್ಲಿ ರಣ್​ಬೀರ್ ಕಪೂರ್​-​ ರಶ್ಮಿಕಾ ಮಂದಣ್ಣ: ಸಿನಿಮಾ ಸೆಟ್‌ ಫೋಟೋ ವೈರಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.