ಬಾಲಿವುಡ್ ಮಾಜಿ ದಂಪತಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಪುತ್ರ ಅರ್ಹಾನ್ ಖಾನ್ ಆಗಾಗ ತಮ್ಮ ಹೆತ್ತವರೊಂದಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಕಳೆದ ಎರಡು ವಾರಗಳಲ್ಲಿ ಅರ್ಹಾನ್ ತಮ್ಮ ತಾಯಿಯೊಂದಿಗೆ ಮುಂಬೈನಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದರು. ಇದೀಗ ಗುರುವಾರ ರಾತ್ರಿ ಮತ್ತೆ ಮಲೈಕಾ ಅರೋರಾ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಮಗ ತಾಯಿಗೆ ವಿದಾಯ ಹೇಳುತ್ತಿದ್ದಂತೆ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಸ್ಟಾರ್ ಕಿಡ್ ತಮ್ಮ ಮುಂದಿನ ಅಧ್ಯಯನಕ್ಕಾಗಿ ಯುಎಸ್ಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಮಲೈಕಾ ಅರೋರಾ ಮತ್ತು ಅರ್ಹಾನ್ ಖಾನ್ ಕಾಣಿಸಿಕೊಂಡ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇನ್ಸ್ಟಾಗ್ರಾಮ್ನಲ್ಲಿ ಪಾಪರಾಜಿ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿ ಮಲೈಕಾ ತಮ್ಮ ಮಗನಿಗೆ ಬೆಚ್ಚಗಿನ ಅಪ್ಪುಗೆಯನ್ನು ನೀಡುವುದನ್ನು ಮತ್ತು ಅರ್ಹಾನ್ ಹೊರಡುವುದಕ್ಕೂ ಮುನ್ನ ವಿದಾಯ ಹೇಳುತ್ತಿರುವುದನ್ನು ಕಾಣಬಹುದು.
ಏರ್ಪೋರ್ಟ್ ನೋಟದಲ್ಲಿ ಮಲೈಕಾ ಅರೋರಾ ಬ್ಲ್ಯಾಕ್ ಲಾಂಗ್ ಡ್ರೆಸ್ನಲ್ಲಿ ಕಾಣಿಸಿಕೊಂಡರು. ಕೂದಲನ್ನು ಪೋನಿಟೇಲ್ ಕಟ್ಟಿ ನೋಡುಗರನ್ನು ಆಕರ್ಷಿಸಿದರು. ಮತ್ತೊಂದೆಡೆ, ಅರ್ಹಾನ್ ಮ್ಯಾಚಿಂಗ್ ಟ್ರ್ಯಾಕ್ ಪ್ಯಾಂಟ್ ಮತ್ತು ಕ್ಯಾಪ್ ಹೊಂದಿರುವ ಕಪ್ಪು ಸ್ವೆಟ್ ಶರ್ಟ್ ಧರಿಸಿದ್ದರು. ತಾಯಿ ಮತ್ತು ಮಗನ ಪ್ರೀತಿಯ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆ ವೆಬ್ಲಾಯ್ಡ್ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರ್ಬಾಜ್ ಖಾನ್, ತನ್ನ ಮಗ ಯುಎಸ್ನ ಲಾಂಗ್ ಐಲ್ಯಾಂಡ್ ಫಿಲ್ಮ್ ಸ್ಕೂಲ್ನಲ್ಲಿ ಫಿಲ್ಮ್ಮೇಕಿಂಗ್ ಅಧ್ಯಯನ ಮಾಡುತ್ತಿದ್ದಾನೆ ಎಂದು ತಿಳಿಸಿದ್ದರು. ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಅರ್ಹಾನ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಅರ್ಜುನ್ ಕಪೂರ್ ಹುಟ್ಟುಹಬ್ಬ ಆಚರಿಸಲು ಗೆಳೆಯನ ಮನೆಗೆ ಬಂದ ನಟಿ ಮಲೈಕಾ ಅರೋರಾ
ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 1998 ರಲ್ಲಿ ಮದುವೆಯಾದರು. ಅವರಿಬ್ಬರ ಪ್ರತ್ಯೇಕತೆಯ ವದಂತಿಗಳು 2016ರ ಮಾರ್ಚ್ ತಿಂಗಳಿನಿಂದ ಪ್ರಾರಂಭವಾಯಿತು. 2017 ರಲ್ಲಿ ಇವರಿಬ್ಬರು ಅಧಿಕೃತವಾಗಿ ವಿಚ್ಛೇದನ ಪಡೆದರು. ಅದಾಗ್ಯೂ ತಮ್ಮ ಮಗ ಅರ್ಹಾನ್ ಖಾನ್ಗೆ ಪೋಷಕರಾಗಿ ಮುಂದುವರೆಯುತ್ತಿದ್ದಾರೆ.
ಮಲೈಕಾ ಅರೋರಾ ಬಗ್ಗೆ..: ಮಲೈಕಾ ಅರೋರಾ ಫಿಟ್ನೆಸ್ ಮತ್ತು ಫ್ಯಾಷನ್ಗೆ ಫೇಮಸ್. ಇವರು ತಮ್ಮ ಆರೋಗ್ಯಕರ ಜೀವನಶೈಲಿ ಮತ್ತು ಎಕ್ಸ್ಟ್ರಾಡಿನರಿ ಫ್ಯಾಷನ್ ಆಯ್ಕೆಗಳಿಗಾಗಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. 49 ವರ್ಷದ ಈ ನಟಿ ತಮ್ಮದೇ ಫಿಟ್ನೆಸ್ ಸ್ಟುಡಿಯೋ ಹೊಂದಿದ್ದು, ಫುಡ್ ಡೆಲಿವರ್ ಸರ್ವಿಸ್ ನ್ಯೂಡ್ ಬೌಲ್ ಅನ್ನು ಕೂಡ ನಿರ್ವಹಿಸುತ್ತಿದ್ದಾರೆ. ಜೊತೆಗೆ ದಿ ಲೇಬಲ್ ಲೈಫ್ ಕ್ಲಾತ್ ಬ್ರಾಂಡ್ನ ಸ್ಟೈಲ್ ಎಡಿಟರ್ ಕೂಡ ಆಗಿದ್ದಾರೆ.
ಅವರು ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ಹೆಚ್ಚು ಸನಿಹವಾಗಿದ್ದಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ. ಫ್ಯಾನ್ಸ್ ಕೂಡ ಹೆಚ್ಚಿನದಕ್ಕಾಗಿ ಹಂಬಲಿಸುತ್ತಾರೆ. ಅವರ ಮನಮೋಹಕ ಜೀವನದ ಮುಂದಿನ ನೋಟಕ್ಕಾಗಿ ನಿರೀಕ್ಷಿಸುತ್ತಾರೆ. ನಟಿ ಮಲೈಕಾ ಅರೋರಾ, ಅರ್ಬಾಜ್ ಖಾನ್ ಅವರೊಂದಿಗಿನ ವಿಚ್ಛೇದನ ಬಳಿಕ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದಾರೆ.
ಇದನ್ನೂ ಓದಿ: ಬ್ರೇಕಪ್ ವದಂತಿ: ಊಹಾಪೋಹಗಳಿಗೆ ತೆರೆ ಎಳೆದ ಮಲೈಕಾ - ಅರ್ಜುನ್