ETV Bharat / entertainment

ಚಿರಂಜೀವಿ, ರಾಮ್​ಚರಣ್​ ಬಳಿಕ ನೆಟ್‌ಫ್ಲಿಕ್ಸ್‌ ಸಿಇಒ ಭೇಟಿಯಾದ ಮಹೇಶ್ ಬಾಬು - ಟೆಡ್ ಸರಂಡೋಸ್ ರಾಮ್​​ ಚರಣ್​

ತೆಲುಗು ಸೂಪರ್‌ ಸ್ಟಾರ್ ಮಹೇಶ್ ಬಾಬು ನೆಟ್‌ಫ್ಲಿಕ್ಸ್ ಸಿಇಒ ಟೆಡ್ ಸರಂಡೋಸ್ ಅವರನ್ನು ಭೇಟಿಯಾಗಿದ್ದಾರೆ.

ಚಿರಂಜೀವಿ, ರಾಮ್​ಚರಣ್​ ಬಳಿಕ ಮಹೇಶ್ ಬಾಬು ಭೇಟಿಯಾದ ನೆಟ್‌ಫ್ಲಿಕ್ಸ್‌ ಸಿಇಒ
Mahesh Babu meets Netflix CEO
author img

By ETV Bharat Karnataka Team

Published : Dec 9, 2023, 1:59 PM IST

ಜನಪ್ರಿಯ ಒಟಿಟಿ ಪ್ಲಾಟ್​ಫಾರ್ಮ್ 'ನೆಟ್‌ಫ್ಲಿಕ್ಸ್‌'ನ ಸಿಇಒ ಟೆಡ್ ಸರಂಡೋಸ್ (Ted Sarandos) ಮತ್ತು ಸೌತ್​​ ಸೂಪರ್‌ ಸ್ಟಾರ್ ಮಹೇಶ್ ಬಾಬು ಹೈದರಾಬಾದ್‌ನಲ್ಲಿ ಭೇಟಿಯಾಗಿದ್ದಾರೆ. ಮಹೇಶ್ ಬಾಬು ಮತ್ತು ಟೆಡ್ ಸರಂಡೋಸ್ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಭೇಟಿ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಜನಪ್ರಿಯ ನಟ ಮಹೇಶ್ ಬಾಬು ಸಹ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದಾರೆ.

ಮಹೇಶ್ ಬಾಬು ಇಂದು ಸೋಷಿಯಲ್​ ಮೀಡಿಯಾದಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ನಲ್ಲಿ, ಮಹೇಶ್​ ಬಾಬು, ಟೆಡ್ ಸರಂಡೋಸ್ ತಂಡವಿದೆ. ದೂರದೃಷ್ಟಿಯ ಸಿಇಒ ಮತ್ತು ಅವರ ಇಂಪ್ರೆಸಿವ್​ ಟೀಮ್​ನೊಂದಿಗೆ ಮನರಂಜನೋದ್ಯಮದ ಭವಿಷ್ಯದ ಬಗ್ಗೆ ಚರ್ಚೆಯಲ್ಲಿ ತೊಡಗಿರುವುವುದಾಗಿ ಉಲ್ಲೇಖಿಸಿದ್ದಾರೆ. ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಹ ಈ ಫೋಟೋದಲ್ಲಿ ಕಂಡು ಬಂದಿದ್ದಾರೆ. ಟೆಡ್ ಸರಂಡೋಸ್​​ ಮತ್ತು ಮಹೇಶ್ ಬಾಬು ಫೋಟೋಗಳು ಸಖತ್​ ಸದ್ದು ಮಾಡುತ್ತಿವೆ. ಏನು ಚರ್ಚಿಸಿರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಟಾಲಿವುಡ್​ ಸೂಪರ್​ ಸ್ಟಾರ್​ಗಳಾದ ಚಿರಂಜೀವಿ, ರಾಮ್​​ ಚರಣ್, ಜೂನಿಯರ್​ ಎನ್​ಟಿಆರ್​​​​ ಅವರನ್ನೂ ಟೆಡ್ ಸರಂಡೋಸ್ ಭೇಟಿಯಾಗಿದ್ದರು.

ಹೈದರಾಬಾದ್‌ಗೆ ಆಗಮಿಸಿದ ಟೆಡ್ ಸರಂಡೋಸ್ ಅವರನ್ನು ಮೊದಲು ಚಿರಂಜೀವಿ, ರಾಮ್​ಚರಣ್​​ ಭೇಟಿಯಾದರು. ಟೆಡ್ ಸರಂಡೋಸ್ ನಟರಿಂದ ಆತ್ಮೀಯ ಸ್ವಾಗತ ಪಡೆದರು. ಗಣ್ಯರ ಸಂವಾದದ ಫೋಟೋಗಳು ವೈರಲ್​ ಆದವು. ಹಲವು ಊಹಾಪೋಹಗಳನ್ನು ಹುಟ್ಟುಹಾಕಿದವು. ಚರ್ಚೆ ನಡೆಸಿರುವ ವಿಚಾರಗಳನ್ನು ಬಹಿರಂಗಪಡಿಸಲು ಅಭಿಮಾನಿಗಳು ಒತ್ತಾಯ ಕೂಡಾ ಮಾಡಿದ್ದಾರೆ.

ಇದನ್ನೂ ಓದಿ: 'ನನ್ನ ದೇವತೆಗಾಗಿ ಚಿನ್ನದ ದೇವತೆ ತರುತ್ತಿದ್ದೇನೆ': ಅತ್ಯುನ್ನತ ಪ್ರಶಸ್ತಿ ಗೆದ್ದ ವಿಜಯ್ ವರ್ಮಾ

ನಿನ್ನೆ ಆರ್​ಆರ್​ಆರ್​ ಸ್ಟಾರ್ ಜೂನಿಯರ್ ಎನ್‌ಟಿಆರ್ ಸಾಮಾಜಿಕ ಮಾಧ್ಯಮದಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಿದ್ದರು. ನೆಟ್‌ಫ್ಲಿಕ್ಸ್‌ನ ಸಿಇಒ ಅವರನ್ನೊಳಗೊಂಡ ಸರಣಿ ಚಿತ್ರಗಳು ಇವಾಗಿದ್ದವು. ಫೋಟೋಗಳ ಜೊತೆಗೆ, ಲಂಚ್​ ಮಿಟ್​​ಗೆ ಕರೆದಿದ್ದಕ್ಕಾಗಿ ಜೂನಿಯರ್ ಎನ್​ಟಿಆರ್ ಅವರು ಟೆಡ್ ಸರಂಡೋಸ್ ಮತ್ತು ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.