ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್, ಲವ್ ಸ್ಟೋರಿ, ಕ್ರೈಮ್-ಥಿಲ್ಲರ್ ಬೇಸ್ ಚಿತ್ರಗಳೇ ಹೆಚ್ಚು ನಿರ್ಮಾಣವಾಗುತ್ತಿದೆ. ಇದರ ಮಧ್ಯೆ ಮಗ್ಗಿ ಪುಸ್ತಕ ಎಂಬ ಕಾದಂಬರಿ ಆಧಾರಿತ ಸಿನಿಮಾವೊಂದು ಸಿನಿ ಪ್ರಿಯರಿಗಾಗಿ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ.
ಹೌದು ಎಚ್.ಸಿ.ಹರೀಶ್ ಅವರ ಅವನಿ ಕಾದಂಬರಿ ಆಧರಿಸಿ ಮಗ್ಗಿ ಪುಸ್ತಕ ಎಂಬ ಬಹುತೇಕ ಚಿತ್ರ ಸಿದ್ಧವಾಗಿದೆ. ಈ ಚಿತ್ರದ ಫಸ್ಟ್ ಲುಕ್ನ್ನು ಇಂದು ದಸರಾ ಮಹೋತ್ಸವದ ಅಂಗವಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿನ್ನಾಸ್ವಾಮಿ ಫಿಲ್ಮಂ ಸಂಸ್ಥೆಯಡಿ ಚಿನ್ನಾಸ್ವಾಮಿ ಯತಿರಾಜ್ ತಮ್ಮ ಸ್ನೇಹಿತರ ಜೊತೆಗೂಡಿ ಚಿತ್ರ ನಿರ್ಮಿಸುತ್ತಿದ್ದು, ಅವನಿ ಕಾದಂಬರಿಕಾರರು ಆಗಿರುವ ಎಚ್.ಸಿ ಹರೀಶ್ ಅವರೇ ಮಗ್ಗಿ ಪುಸ್ತಕ ಸಿನಿಮಾಗೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಅನಾವರಣಗೊಂಡಿರುವ ಪೋಸ್ಟರ್ನಲ್ಲಿ 3 ಮಕ್ಕಳನ್ನು ಒಳಗೊಂಡಿರುವ ಸಾಧಾರಣ ಕುಟುಂಬವೊಂದು ದೇವರ ಮೂರ್ತಿಯನ್ನು ಹೊತ್ತು ಸಾಗುತ್ತಿರುವುದನ್ನು ಕಾಣಬಹುದು. ಮಗ್ಗಿ ಪುಸ್ತಕ ಸಿನಿಮಾದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ಸಜ್ಜು, ಶ್ರೀರಕ್ಷಾ, ಹಿರಿಯ ಕಲಾವಿದರಾದ ಮೈಸೂರು ರಮಾನಂದ, ರಂಗಾಯಣ ರಘು, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ಬಿರಾದಾರ, ಮಿಮಿಕ್ರಿ ಗೋಪಿ, ಚಂದ್ರಪ್ರಭಾ, ವಾಣಿ, ರಾನ್ವಿ ಶೇಖರ್, ಕೃಷ್ಣ ಮಹೇಶ್, ವರದ, ಶ್ರೀನಿವಾಸ್ ಗೌಡ, ಮೂಗು ಸುರೇಶ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಮೈಸೂರು, ಮಂಗಳೂರು, ಎಚ್.ಡಿ. ಕೋಟೆ, ನಂಜನಗೂಡು, ಬೆಂಗಳೂರು ಸುತ್ತಮುತ್ತಲಿನಲ್ಲಿ ಶೂಟಿಂಗ್ ಮಾಡಲಾಗಿದೆ. ನಂದಕುಮಾರ್ ಛಾಯಾಗ್ರಹಣ, ಯಶಸ್ ನಾಚಪ್ಪ ಸಂಗೀತ, ಶರಣ್ ಕುಮಾರ್ ಗಜೇಂದ್ರಗಡ, ಗುರುನಾಥ ಬೋರಗಿ ಸಾಹಿತ್ಯ, ಶಿವಕುಮಾರ್ ಎಂ.ಸಂಕಲನ, ರಸೂಲ್ ನದಾಫ್ ಕಲಾ ನಿರ್ದೇಶನ ಮಗ್ಗಿ ಪುಸ್ತಕ ಸಿನಿಮಾಕ್ಕಿದೆ. ಆಲ್ಮೋಸ್ಟ್ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬರುವ ವರ್ಷಕ್ಕೆ ಸಿನಿಮಾವನ್ನು ತೆರೆಗೆ ತರುವ ಪ್ಲಾನ್ನ್ನು ಹಾಕಿಕೊಂಡಿದೆ. ಇಂದು ಮೈಸೂರು ರಾಜವಂಶದ ಕುಡಿಯಿಂದಲೇ ಆರ್ಶಿವಾದ ಸಿಕ್ಕಿರುವುದು ಚಿತ್ರತಂಡಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ.
ಇನ್ನು ರಕ್ತಸಿಕ್ತ, ಬ್ರೇಕ್ಪ್, ಹಾರರ್ ಮೂವಿಗಳನ್ನೇ ನೋಡುತ್ತಿರುವ ಸಿನಿಮಾ ಅಭಿಮಾನಿಗಳಿಗೆ ಮಗ್ಗಿ ಪುಸ್ತಕ ವಿಭಿನ್ನ ರೀತಿಯ ಅನುಭವ ನೀಡಬಹುದು ಎಂದು ಅಂದಾಜಿಸಲಾಗಿದೆ. ಬೇರೆ ರೀತಿಯ ಕಥಾಹಂದರ ಹೊಂದಿರುವ ಮಗ್ಗಿಪುಸ್ತಕದ ಯಶಸ್ಸಿನ ಲೆಕ್ಕಾಚಾರವನ್ನು ಪ್ರೇಕ್ಷಕರೇ ನಿರ್ಧರಿಸಬೇಕಿದೆ.
ಇದನ್ನೂ ಓದಿ: 'ರಾಜಹಂಸ' ಗೌರಿ ಶಂಕರ್ ಮುಂದಿನ ಸಿನಿಮಾದ ಫಸ್ಟ್ ಲುಕ್ ಟೈಟಲ್ ಪೋಸ್ಟರ್ ನಾಳೆ ಬಿಡುಗಡೆ