ಕನ್ನಡ ಚಿತ್ರರಂಗ ಯಶಸ್ಸಿನ ಹುಮ್ಮಸ್ಸಿನಲ್ಲಿ ಮುನ್ನುಗ್ಗುತ್ತಿದೆ. ಉತ್ತಮ ಕಥಾಹಂದರ, ಅತ್ಯುತ್ತಮ ಮೇಕಿಂಗ್ನಲ್ಲಿ ಸಿನಿಮಾಗಳು ಮೂಡಿಬರುತ್ತಿವೆ. ಯುವ ಕಲಾವಿದರ ಸದಭಿರುಚಿಯ ಸಿನಿಮಾಗಳಿಗೆ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬೆಂಬಲ ನೀಡುತ್ತಿದ್ದಾರೆ. ಅದರಂತೆ, ಲವ್ ಬರ್ಡ್ಸ್ ಎಂಬ ಹೊಸ ಚಿತ್ರದ ಸುಮಧುರ ಹಾಡೊಂದನ್ನು ಅಶ್ವಿನಿ ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನೀನೇ ದೊರೆತ ಮೇಲೆ...: 'ಲವ್ ಬರ್ಡ್ಸ್' ಶೀರ್ಷಿಕೆ ಹಾಗೂ ಟೀಸರ್ ವಿಚಾರಕ್ಕೆ ಸ್ಯಾಂಡಲ್ವುಡ್ ಅಂಗಳದಲ್ಲಿ ಟಾಕ್ ಆಗುತ್ತಿದೆ. ಲವ್ ಮಾಕ್ಟೈಲ್ ಜೋಡಿ ಅಂತಾ ಕರೆಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ ಹಾಗು ನಟಿ ಮಿಲನ ನಾಗರಾಜ್ ಒಟ್ಟಿಗೆ ತೆರೆ ಹಂಚಿಕೊಂಡಿರುವ ರೊಮ್ಯಾಂಟಿಕ್ ಚಿತ್ರವಿದು. ರೋಮಿಯೋ ಸಿನಿಮಾ ಖ್ಯಾತಿಯ ಪಿ.ಸಿ.ಶೇಖರ್ ನಿರ್ದೇಶನದ ಲವ್ ಬರ್ಡ್ಸ್ ಚಿತ್ರದ ಸುಮಧುರ ಹಾಡನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ರಿಲೀಸ್ ಮಾಡಿದ್ದಾರೆ. ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಮಾಸ್ತಿ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಕವಿರಾಜ್ ಬರೆದಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತವಿದೆ.
- " class="align-text-top noRightClick twitterSection" data="">
ಮದುವೆ ಕುರಿತ ಹಾಡು: ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಪಿ.ಸಿ.ಶೇಖರ್, "ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಚಿತ್ರಗಳ ನಿರ್ಮಾಣ ಸ್ವಲ್ಪ ಕಡಿಮೆ ಆಗಿದೆ. ನನಗೆ ಉತ್ತಮ ಕೌಟುಂಬಿಕ ಚಿತ್ರ ನಿರ್ದೇಶಿಸಬೇಕೆಂದು ಆಸೆ ಮೂಡಿತು. ನಿರ್ಮಾಪಕ ಕಡ್ಡಿಪುಡಿ ಚಂದ್ರು ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು. ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ತರ ಘಟ್ಟ. ಎಲ್ಲರಿಗೂ ಮದುವೆ ಬಗ್ಗೆ ಸಾಕಷ್ಟು ಕನಸುಗಳಿರುತ್ತವೆ. ಆ ಪ್ರಸಂಗಕ್ಕೆ ತಕ್ಕದಾದ ಹಾಡೊಂದನ್ನು ಕವಿರಾಜ್ ಅದ್ಭುತವಾಗಿ ಬರೆದಿದ್ದಾರೆ. ಅರ್ಜುನ್ ಜನ್ಯ ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಚೆನ್ನಾಗಿ ನಟಿಸಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಅಣ್ಣ ತಮ್ಮನಾದ ತಬಲನಾಣಿ ಹಾಗೂ ಕುರಿ ಪ್ರತಾಪ್: ಯಾವ ಚಿತ್ರಕ್ಕಾಗಿ ಗೊತ್ತಾ?
ನಟಿ ಮಿಲನ ನಾಗರಾಜ್ ಮಾತನಾಡಿ, "ನಮ್ಮ ಲವ್ ಮಾಕ್ಟೇಲ್ ಚಿತ್ರದ ಮೊದಲ ಹಾಡನ್ನು ಪುನೀತ್ ಸರ್ ಹಾಗೂ ಅಶ್ವಿನಿ ಅವರಿಗೆ ತೋರಿಸಿದ್ದೆವು. ಇಬ್ಬರು ನೋಡಿ ಮನಸಾರೆ ಹರಸಿದ್ದರು. ಚಿತ್ರದ ಹಾಡನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಬಿಡುಗಡೆ ಮಾಡಿರುವುದು ನಮಗೆ ಬಹಳ ಸಂತೋಷ ತಂದಿದೆ" ಎಂದರು.
ಇದನ್ನೂ ಓದಿ: "ನನ್ನ ಉಸಿರಾಟದಲ್ಲೂ ತಪ್ಪು ಕಂಡು ಹಿಡಿಯುವ ಜನರು..": ಟ್ರೋಲಿಗರ ವಿರುದ್ಧ ರಶ್ಮಿಕಾ ಬೇಸರ
ಲವ್ ಬರ್ಡ್ಸ್ ಚಿತ್ರತಂಡ: ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಲ್ಲದೇ ಸಂಯುಕ್ತ ಹೊರನಾಡು, ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್, ವೀಣಾ ಸುಂದರ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮದುವೆಗೆ ಸಂಬಂಧಿಸಿದ ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ಸಾಹಿತಿ ಕವಿರಾಜ್ ಹೇಳಿದರು. ಹಾಡು ಬಿಡುಗಡೆಗೊಳಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಧನ್ಯವಾದ ತಿಳಿಸಿದರು. ಶ್ರೀ ಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಟಗರು ಸಿನಿಮಾ ನಿರ್ಮಾಪಕ ಕಡ್ಡಿಪುಡಿ ಚಂದ್ರು ನಿರ್ಮಿಸಿದ್ದಾರೆ. ಸದ್ಯದಲ್ಲೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ.