ಕಾಲಿವುಡ್ ಸೂಪರ್ಸ್ಟಾರ್ ನಟ ದಳಪತಿ ವಿಜಯ್ ಮುಂಬರುವ ಬಹುನಿರೀಕ್ಷಿತ ಚಿತ್ರ 'ಲಿಯೋ'. ಇದೇ ಅಕ್ಟೋಬರ್ 19ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧಗೊಂಡಿದೆ. ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಪೋಸ್ಟರ್, ಹಾಡುಗಳಿಂದ ಪ್ರಚಾರ ಕಾರ್ಯ ಶುರು ಮಾಡಿದೆ. ಇದೀಗ ಟ್ರೇಲರ್ ಬಿಡುಗಡೆಯ ದಿನಾಂಕ ಕೂಡ ಅನೌನ್ಸ್ ಆಗಿದೆ.
'ಲಿಯೋ' ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್ ಸ್ಕ್ರೀನ್ ಸ್ಟುಡಿಯೋ ಹೊಸ ಪೋಸ್ಟರ್ನೊಂದಿಗೆ ಲಿಯೋ ಟ್ರೇಲರ್ ದಿನಾಂಕವನ್ನು ತಿಳಿಸಿದೆ. "ನಿಮ್ಮ ಆರ್ಡರ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಲಿಯೋ ಟ್ರೇಲರ್ ಆನ್ ದಿ ವೇ. ನಿಮ್ಮ ಊಟವನ್ನು ಆನಂದಿಸಲು ಸಿದ್ಧರಾಗಿ. ಸೆವೆನ್ ಸ್ಕ್ರೀನ್ ಸ್ಟುಡಿಯೋ ಅಕ್ಟೋಬರ್ 5 ರಂದು ನಿಮ್ಮಲ್ಲಿಗೆ ತಲುಪಿಸುತ್ತಿದೆ" ಎಂದು ಬರೆದುಕೊಂಡಿದೆ. ಲಿಯೋ ಟ್ರೇಲರ್ ಇದೇ ಅಕ್ಟೋಬರ್ 5 ರಂದು ಬಿಡುಗಡೆಯಾಗಲಿದೆ.
-
Your order is being prepared 😎#LeoTrailer is on its way! Get ready to enjoy your meal 🔥
— Seven Screen Studio (@7screenstudio) October 2, 2023 " class="align-text-top noRightClick twitterSection" data="
Unga delivery partner @7screenstudio will deliver them on October 5th 😉#LeoTrailerFromOct5#Thalapathy @actorvijay sir @Dir_Lokesh @trishtrashers @anirudhofficial @duttsanjay… pic.twitter.com/xgHzueGWpJ
">Your order is being prepared 😎#LeoTrailer is on its way! Get ready to enjoy your meal 🔥
— Seven Screen Studio (@7screenstudio) October 2, 2023
Unga delivery partner @7screenstudio will deliver them on October 5th 😉#LeoTrailerFromOct5#Thalapathy @actorvijay sir @Dir_Lokesh @trishtrashers @anirudhofficial @duttsanjay… pic.twitter.com/xgHzueGWpJYour order is being prepared 😎#LeoTrailer is on its way! Get ready to enjoy your meal 🔥
— Seven Screen Studio (@7screenstudio) October 2, 2023
Unga delivery partner @7screenstudio will deliver them on October 5th 😉#LeoTrailerFromOct5#Thalapathy @actorvijay sir @Dir_Lokesh @trishtrashers @anirudhofficial @duttsanjay… pic.twitter.com/xgHzueGWpJ
ಲಿಯೋ ಕನ್ನಡ ಪೋಸ್ಟರ್: ಇದಕ್ಕೂ ಮುನ್ನ 'ಲಿಯೋ' ಕನ್ನಡ ಪೋಸ್ಟರ್ ಅನಾವರಣಗೊಂಡಿತ್ತು. "ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಸಂಚು ರೂಪಿಸಿ. #LeoPosterFeast ಕಥೆಗಳನ್ನು ಅನಾವರಣಗೊಳಿಸುತ್ತದೆ. ಒಂದು ಸಮಯದಲ್ಲಿ ಒಂದು ಪೋಸ್ಟರ್. ಕನ್ನಡದಲ್ಲಿ ಲಿಯೋ ಭರ್ಜರಿ ರಿಲೀಸ್" ಎಂಬ ಶೀರ್ಷಿಕೆಯೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋ ಕನ್ನಡ ಪೋಸ್ಟರ್ ಅನ್ನು ಹಂಚಿಕೊಂಡಿತ್ತು.
ಇದನ್ನೂ ಓದಿ: 'ಲಿಯೋ' ಚಿತ್ರದಿಂದ ಸಂಜಯ್ ದತ್ ಫಸ್ಟ್ ಲುಕ್ ಔಟ್: ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ
ಸಂಜಯ್ ದತ್ ಫಸ್ಟ್ ಲುಕ್ ಔಟ್: 'ಲಿಯೋ' ಚಿತ್ರದಿಂದ ಸಂಜಯ್ ದತ್ ಅವರ ಫಸ್ಟ್ ಲುಕ್ ಪೋಸ್ಟರ್ ಅವರ ಜನ್ಮದಿನದಂದೇ ಅನಾವರಣಗೊಂಡಿತ್ತು. ಚಿತ್ರದಲ್ಲಿ ಅವರ ಪಾತ್ರದ ಹೆಸರು ಆಂಟೋನಿ ದಾಸ್. ಸೌತ್ ಸಿನಿಮಾದಲ್ಲಿ ಸಂಜಯ್ ದತ್ ಮತ್ತೊಮ್ಮೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಂಟೋನಿ ದಾಸ್ ಲುಕ್ ಅದ್ಭುತವಾಗಿದೆ.
ಮತ್ತೆ ಒಂದಾದ ಲೋಕೇಶ್- ವಿಜಯ್: ನಟ ವಿಜಯ್ ಅಭಿನಯದ ಲಿಯೋ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಲಿಯೋ' ಸಿನಿಮಾವನ್ನು ಖೈದಿ, ಮಾಸ್ಟರ್ ಮತ್ತು ವಿಕ್ರಮ್ನಂತಹ ಮಾಸ್ಟರ್ಪೀಸ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿದ್ದಾರೆ. 'ಮಾಸ್ಟರ್' ಚಿತ್ರದ ನಂತರ 'ಲಿಯೋ' ಮೂಲಕ ವಿಜಯ್ ಮತ್ತು ಲೋಕೇಶ್ ಕನಕರಾಜ್ ಮತ್ತೆ ಒಂದಾಗಿದ್ದಾರೆ. ವಿಜಯ್ ಅವರು ಈಗಾಗಲೇ ತಮ್ಮ ಪಾತ್ರದ ಶೂಟಿಂಗ್ ಮುಗಿಸಿದ್ದಾರೆ.
ಅಕ್ಟೋಬರ್ 19 ರಂದು ರಿಲೀಸ್: ಈ ಸಿನಿಮಾವು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್ ಕುಮಾರ್ ನಿರ್ಮಿಸಿರುವ 'ಲಿಯೋ' ಚಿತ್ರ ಇದೇ ವರ್ಷ ಅಕ್ಟೋಬರ್ 19 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಲಿಯೋ ಆಡಿಯೋ ರಿಲೀಸ್ ಈವೆಂಟ್ ರದ್ದು, ರಾಜಕೀಯ ಒತ್ತಡವಿಲ್ಲ: ಚಿತ್ರತಂಡ ಸ್ಪಷ್ಟನೆ