ಹುಬ್ಬೇರಿಸುವಂತಹ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಬಹುನಿರೀಕ್ಷಿತ ಸಿನಿಮಾ 'ಲಿಯೋ' ಎರಡನೇ ದಿನ ಭಾರಿ ಕುಸಿತ ಕಂಡಿದೆ. ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್ ಕಾಂಬಿನೇಶನ್ನ ಲಿಯೋ ಸಿನಿಮಾ ಗುರುವಾರದಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತು. ಭಾರಿ ಪ್ರಚಾರ, ನಿರೀಕ್ಷೆಗಳೊಂದಿಗೆ ತೆರೆಕಂಡ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತು. ಮೊದಲ ದಿನ ಹುಬ್ಬೇರಿಸುವಂತಹ ಕಲೆಕ್ಷನ್ ಮಾಡಿರುವ ಸಿನಿಮಾ, ಎರಡನೇ ದಿನ ಕುಸಿತ ಕಂಡಿದೆ. ಸಿನಿ ಉದ್ಯಮ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, 3ನೇ ದಿನದ ಗಳಿಕೆಯಲ್ಲಿ ಕೊಂಚ ಬೆಳವಣಿಗೆ ಕಾಣುವ ಸಾಧ್ಯತೆಯಿದೆ. ವಾರಾಂತ್ಯವಾದ ಹಿನ್ನೆಲೆ, ಸಿನಿಮಾದ ಕಲೆಕ್ಷನ್ ಅಂಕಿ ಅಂಶ ಏರುವ ಸಾಧ್ಯತೆಗಳಿವೆ.
ಲಿಯೋ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್: ಲಿಯೋ ತೆರೆಗಪ್ಪಳಿಸಿದ ಮೊದಲ ದಿನ, ಭಾರತದಲ್ಲಿ 64.8 ಕೋಟಿ ರೂ. ವ್ಯವಹಾರ ನಡೆಸಿತ್ತು. ವಿಶ್ವಾದ್ಯಂತ ಒಟ್ಟು 140 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ, ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 36 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಶೇ. 44ರಷ್ಟು ಇಳಿಕೆಯಾಗಿದೆ. ಮೂರನೇ ದಿನ (ಇಂದಿನ)ದ ವ್ಯವಹಾರ ಏರುವ ನಿರೀಕ್ಷೆ ಇದೆ. 38.73 ಕೋಟಿ ರೂ. ಗಳಿಸುವ ಮೂಲಕ ದೇಶೀಯ ಗಲ್ಲಾಪೆಟ್ಟಿಗೆಯ ಒಟ್ಟು ಕಲೆಕ್ಷನ್ 140.41 ಕೋಟಿ ರೂ. ಆಗಲಿದೆ. ತಮಿಳುನಾಡಿನಲ್ಲಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.
ಪೋಸ್ಟರ್‌ಗೆ ವ್ಯಕ್ತವಾದ ಆಕ್ಷೇಪಣೆಗಳು, ಆಡಿಯೋ ಬಿಡುಗಡೆ ಕಾರ್ಯಕ್ರಮ ರದ್ದುಗೊಳಿದ್ದು, ಸೇರಿದಂತೆ ಬಿಡುಗಡೆಗೆ ಮುನ್ನ ಲಿಯೋ ಹಲವು ಸವಾಲುಗಳನ್ನು ಎದುರಿಸಿದೆ. ತಮಿಳುನಾಡಿನಲ್ಲಿ ಮಾರ್ನಿಂಗ್ ಶೋಗಳನ್ನು ರದ್ದುಗೊಳಿಸಿದ್ದರೂ ಕೂಡ, ಸಿನಿಮಾ ಬಹುಕೋಟಿ ಸಂಪಾದಿಸುವಲ್ಲಿ ಯಶಸ್ವಿಯಾಯಿತು. ಮೊದಲ ದಿನ ರಜನಿಕಾಂತ್ ಮುಖ್ಯಭೂಮಿಕೆಯ ಜೈಲರ್ ಅನ್ನು ಮೀರಿಸಿದ್ದರೂ ಕೂಡ, ಎರಡನೇ ದಿನ ಗಮನಾರ್ಹ ಕುಸಿತ ಅನುಭವಿಸಿದೆ. ಕಲೆಕ್ಷನ್ ವೇಗವನ್ನು ಉಳಿಸಿಕೊಳ್ಳಬಹುದೇ ಅಥವಾ ಹಿನ್ನೆಡೆ ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಜೈಲರ್ ಸಿನಿಮಾ ವಿಶ್ವದಾದ್ಯಂತ 604.25 ಕೋಟಿ ರೂ. ಸಂಪಾದಿಸಿ, ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಸಿನಿಮಾವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: 'ತೆಲುಸು ಕದಾ'.. ಶ್ರೀನಿಧಿ ಶೆಟ್ಟಿ ಜನ್ಮದಿನ: 'ಕೆಜಿಎಫ್ ನಿಧಿ'ಗೆ ಶುಭಾಶಯಗಳ ಮಹಾಪೂರ
ಮಾಸ್ಟರ್, ಬೀಸ್ಟ್, ಮತ್ತು ವರಿಸು ಚಿತ್ರಗಳಲ್ಲಿ ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್ ಕೆಲಸ ಮಾಡಿದ್ದರು. ಈ ನಿರ್ದೇಶಕ - ನಟ ಕಾಂಬೋದಲ್ಲಿ ಬಂದ ಲಿಯೋ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 14 ವರ್ಷಗಳ ನಂತರ ತ್ರಿಷಾ ಕೃಷ್ಣನ್ ಹಾಗೂ ವಿಜಯ್ ಸ್ಕರೀನ್ ಶೇರ್ ಮಾಡಿದ್ದಾರೆ ಗಿಲ್ಲಿ, ತಿರುಪಾಚಿ, ಕುರುವಿ, ಆತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ದಸರಾ ವೈಭವದಲ್ಲಿ ವಿಂಟೇಜ್ 'ಕಾರ್'ಬಾರು: ವೈವಿಧ್ಯಮಯ ದೀಪಾಲಂಕಾರದಲ್ಲಿ ಮೂಡಿದ ನಾಡದೇವಿ, ಮಹರಾಜರು, ಸಂಸತ್ತು! Photos ನೋಡಿ