ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ 98ನೇ 'ಮನ್ ಕಿ ಬಾತ್' ನಡೆಸಿಕೊಟ್ಟರು. ಈ ಸಂದರ್ಭದಲ್ಲಿ, 'ಏಕತಾ ದಿನದ' ವಿಶೇಷ ಮೂರು ಸ್ಪರ್ಧೆಗಳ ವಿಜೇತರನ್ನು ಘೋಷಿಸಿದ ಪ್ರಧಾನ ಮಂತ್ರಿಯವರು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಗಾನ ಕೋಗಿಲೆ ದಿ. ಲತಾ ಮಂಗೇಶ್ಕರ್ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರನ್ನು ಸ್ಮರಿಸಿದರು.
'ಏಕತಾ ದಿನದ' ಸ್ಪರ್ಧೆಗಳ ವಿಜೇತರ ಹೆಸರನ್ನು ಪ್ರಕಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ, ಸ್ನೇಹಿತರೇ, ಸರ್ದಾರ್ ಪಟೇಲ್ ಅವರ ಜನ್ಮದಿನದಂದು ಅಂದರೆ 'ಏಕತಾ ದಿನ'ದಂದು ನಾವು 'ಮನ್ ಕಿ ಬಾತ್'ನಲ್ಲಿ ಮೂರು ಸ್ಪರ್ಧೆಗಳ ಬಗ್ಗೆ ಮಾತನಾಡಿದ್ದು ನಿಮಗೆ ನೆನಪಿರಬಹುದು. ಈ ಸ್ಪರ್ಧೆಗಳು : ಗೀತೆ - ದೇಶಭಕ್ತಿ ಗೀತೆಗಳು, ಲಾಲಿಗಳು ಮತ್ತು ರಂಗೋಲಿ ಸ್ಪರ್ಧೆಗಳನ್ನು ಒಂದೇ ದಿನ ಆಯೋಜಿಸಲಾಗಿದ್ದು, ಇದರಲ್ಲಿ ದೇಶಾದ್ಯಂತ 700ಕ್ಕೂ ಹೆಚ್ಚು ಜಿಲ್ಲೆಗಳಿಂದ 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮತ್ತು 20ಕ್ಕೂ ಹೆಚ್ಚು ಭಾಷೆಗಳಲ್ಲಿ ನಮೂದುಗಳನ್ನು ಸ್ವೀಕರಿಸಲಾಯಿತು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ಕಡೆಯಿಂದ ಅಭಿನಂದನೆಗಳು ಎಂದು ತಿಳಿಸಿದರು.
ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ, 'ಸ್ನೇಹಿತರೇ, ಈ ಸಂದರ್ಭದಲ್ಲಿ ನಾನು ಲತಾ ಮಂಗೇಶ್ಕರ್ ಅವರನ್ನು ನೆನಪಿಸಿಕೊಳ್ಳುವುದು ಸಹಜ ವಿಷಯ. ಏಕೆಂದರೆ ಈ ಸ್ಪರ್ಧೆ ಆರಂಭವಾದ ದಿನವೇ ಲತಾ ದೀದಿ ಟ್ವೀಟ್ ಮಾಡುವ ಮೂಲಕ ದೇಶವಾಸಿಗಳು ಈ ಪ್ರಯತ್ನಕ್ಕೆ ಕೈಜೋಡಿಸುವಂತೆ ಕೋರಿದ್ದರು' ಎಂದು ತಿಳಿಸಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸಿ. ಸಂಗೀತಗಾರ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರನ್ನೂ ಸ್ಮರಿಸಿದ್ದಾರೆ. ಕೆಲ ಶಾಸ್ತ್ರೀಯ ಸಂಗೀತ ವಾದ್ಯಗಳ ಜನಪ್ರಿಯತೆಯು ಕಾಲಾನಂತರದಲ್ಲಿ ಹೇಗೆ ಕಡಿಮೆಯಾಗುತ್ತಾ ಬಂದಿದೆ ಎಂಬುದನ್ನು ಪ್ರಧಾನಿ ವಿವರಿಸಿದರು.
ಇವರ್ಯಾರೆ ಇರಲಿ, ಇಂತಹ ಯಾವುದೇ ವಿಷಯವಿರಲಿ ನನ್ನ ಗಮನ ಆ ಕಡೆಗೆ ಹೋಗುವುದು ಸಹಜ. ಕೆಲ ದಿನಗಳ ಹಿಂದೆ 'ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ'ಗಳನ್ನು ನೀಡಲಾಯಿತು. ಸಂಗೀತ ಮತ್ತು ಪ್ರದರ್ಶಕ ಕಲೆಗಳ ಕ್ಷೇತ್ರದಲ್ಲಿ ಉದಯೋನ್ಮುಖ ಪ್ರತಿಭಾವಂತ ಕಲಾವಿದರಿಗೆ ಈ ಪ್ರಶಸ್ತಿಗಳನ್ನು ನೀಡಲಾಯಿತು. ಕಲೆ ಮತ್ತು ಸಂಗೀತ ಪ್ರಪಂಚದ ಬಗ್ಗೆ ಹೆಚ್ಚುತ್ತಿರುವ ಜನಪ್ರಿಯತೆಯ ಜೊತೆಗೆ, ಅವರು ತಮ್ಮ ಏಳಿಗೆಗೆ ಕೊಡುಗೆ ನೀಡುತ್ತಿದ್ದಾರೆ. ಕಾಲಾನಂತರದಲ್ಲಿ ಜನಪ್ರಿಯತೆಯು ಕಡಿಮೆಯಾಗುತ್ತಿರುವ ಅಂತಹ ವಾದ್ಯಗಳಿಗೆ ಹೊಸ ಜೀವನವನ್ನು ಈ ಕಲಾವಿದರು ಕೊಡುತ್ತಾರೆಂದು ತಿಳಿಸಿದರು.
ಇನ್ನೂ ಕರ್ನಾಟಕ ಜಾನಪದ ಶೈಲಿಯ "ಲಾಲಿ ಹಾಡು" ಮನ್ ಕಿ ಬಾತ್ನಲ್ಲಿ ಇಂದು ಪ್ರತಿಧ್ವನಿಸಿತು. ಚಾಮರಾಜನಗರದ ಬಿ.ಎಂ. ಮಂಜುನಾಥ್ ಬರೆದ ಸುಂದರ ಗೀತೆ, ಲಾಲಿ ಬರಹ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಬಾಚಿಕೊಂಡಿದೆ.
ಇದನ್ನೂ ಓದಿ: ಮನ್ ಕೀ ಬಾತ್ನಲ್ಲಿ ರಾಜ್ಯದ "ಲಾಲಿ ಹಾಡು" ಪ್ರಸಾರ: ಜೋಗುಳ ಗೀತೆಗೆ ಮೋದಿ ಮೆಚ್ಚುಗೆ
'ಮನ್ ಕಿ ಬಾತ್' ಮಾಸಿಕ ಭಾಷಣ ಆಗಿದ್ದು, ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುತ್ತದೆ. ಅದರ ಮೂಲಕ ದೇಶದ ಪ್ರಧಾನಿ ದೇಶವಾಸಿಗಳೊಂದಿಗೆ ಸಂವಾದ ನಡೆಸುತ್ತಾರೆ. ಇಂದಿನ ಮನ್ ಕಿ ಬಾತ್ 98 ನೇ ಆವೃತ್ತಿಯಾಗಿದೆ.