ETV Bharat / entertainment

ಕೋಸ್ಟಲ್​ವುಡ್​ನ ಮೊದಲ ಮಲ್ಟಿಸ್ಟಾರ್ಸ್ ಸಿನಿಮಾ: ಡಿ. 16ರಂದು ''ಲಾಸ್ಟ್ ಬೆಂಚ್'' ಬಿಡುಗಡೆ - Last bench release date

ಹಾಸ್ಯ, ಭಾವನಾತ್ಮಕ ಸನ್ನಿವೇಶಗಳ ಮಿಶ್ರಣವಾಗಿರುವ ''ಲಾಸ್ಟ್ ಬೆಂಚ್'' ಸಿನಿಮಾದಲ್ಲಿ ಕೋಸ್ಟಲ್​ವುಡ್​ನ ಖ್ಯಾತನಾಮ ಕಲಾವಿದರು ನಟಿಸಿದ್ದಾರೆ. ಬಹುದಿನಗಳ ಮುನ್ನವೇ ಪೂರ್ಣಗೊಂಡಿರುವ ಚಿತ್ರವನ್ನು ಡಿಸೆಂಬರ್ 16 ರಂದು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

Last bench tulu movie
''ಲಾಸ್ಟ್ ಬೆಂಚ್'' ಸಿನಿಮಾ
author img

By

Published : Dec 13, 2022, 5:20 PM IST

Updated : Dec 13, 2022, 6:01 PM IST

''ಲಾಸ್ಟ್ ಬೆಂಚ್'' ಸಿನಿಮಾ ಬಿಡುಗಡೆಗೆ ದಿನಗಣನೆ

ಮಂಗಳೂರು (ದಕ್ಷಿಣ ಕನ್ನಡ): ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಲ್ಟಿ ಸ್ಟಾರ್​ಗಳನ್ನು ಇಟ್ಟುಕೊಂಡು ಸಿನಿಮಾಗಳು ತೆರೆಗೆ ಬಂದಿದೆ. ಆದರೆ, ಸೀಮಿತ ಮಾರುಕಟ್ಟೆ ಇರುವ ಕೋಸ್ಟಲ್​​ ವುಡ್​ನಲ್ಲಿ ಮೊದಲ ಬಾರಿಗೆ ಮಲ್ಟಿ ಸ್ಟಾರ್​ಗಳನ್ನಿಟ್ಟುಕೊಂಡು ನಿರ್ಮಾಣವಾಗಿರುವ ಸಿನಿಮಾವೊಂದು ತೆರೆ ಕಾಣಲು ಸಜ್ಜಾಗಿದೆ.

''VIP's ಲಾಸ್ಟ್ ಬೆಂಚ್'' ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್ ಮತ್ತು ವಿನೀತ್ ಕುಮಾರ್ ನಾಯಕರಾಗಿ ನಟಿಸಿದ್ದಾರೆ. ಕಾಮಿಡಿ ಪ್ರಧಾನವಾಗಿರುವ ಈ ಸಿನಿಮಾ ಡಿಸೆಂಬರ್ 16 ರಂದು ಬಿಡುಗಡೆಯಾಗಲಿದೆ. ಮೂವರು ಬೇಜವಾಬ್ದಾರಿ ಹುಡುಗರ ಕಾಲೇಜು ಜೀವನದ ಕಥೆ ಒಳಗೊಂಡಿರುವ ಸಿನಿಮಾವಿದು.

ನಾಲ್ಕು ವರ್ಷಗಳ ಹಿಂದೆ ಚಿತ್ರೀಕರಣ ಮಾಡಲಾಗಿತ್ತು. ಕೊರೊನಾ ಸೇರಿದಂತೆ ಹಲವು ಕಾರಣಗಳಿಂದ ಸಿನಿಮಾ ತೆರೆಗೆ ಬರಲು ವಿಳಂಬವಾಗಿದೆ. ಈ ಸಿನಿಮಾ ಆರಂಭಿಸುವಾಗ ಮೂವರು ನಾಯಕರು ಈಗಿನಷ್ಟು ಪ್ರಸಿದ್ಧರಾಗಿರಲಿಲ್ಲ. ಇದೀಗ ಸೂಪರ್ ಹಿಟ್ ಫಿಲ್ಮ್ ರಾಜ್ ಸೌಂಡ್ಸ್ ಅಂಡ್​​ ಲೈಟ್ಸ್ ಚಿತ್ರದ ಮೂಲಕ ವಿನೀತ್, ಬಿಗ್ ಬಾಸ್ ಮೂಲಕ ರೂಪೇಶ್ ಶೆಟ್ಟಿ ಮತ್ತು ವಿವಿಧ ಸಿನಿಮಾಗಳ ಮೂಲಕ ಪೃಥ್ವಿ ಅಂಬರ್ ಹೆಸರು ಗಳಿಸಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಇದ್ದ ಸಮಯಕ್ಕಿಂತಲೂ ಈ ಮೂವರು ನಾಯಕರು ಇದೀಗ ಹೆಸರು ಮಾಡಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಪ್ರಧಾನ್ ಎಂ ಪಿ ನಿರ್ದೇಶನದ ಈ ಸಿನಿಮಾವನ್ನು ಎ.ಎಸ್ ಪ್ರೊಡಕ್ಷನ್ ಲಾಂಛನದಲ್ಲಿ ಆಶೀಕಾ ಸುವರ್ಣ ನಿರ್ಮಿಸಿದ್ದಾರೆ. ಚಿತ್ರದ ಓರ್ವ ನಾಯಕ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಇರುವ ಕಾರಣ ಸಿನಿಮಾ ಬಿಡುಗಡೆಗೆ ಅವರು ಭಾಗಿಯಾಗುತ್ತಿಲ್ಲ.

  • " class="align-text-top noRightClick twitterSection" data="">

''ಲಾಸ್ಟ್ ಬೆಂಚ್'' ಬಗ್ಗೆ ಮಾತನಾಡಿದ ನಾಯಕ ನಟ ವಿನೀತ್, ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನನಗೆ, ಪ್ರಥ್ವಿ, ರೂಪೇಶ್ ಶೆಟ್ಟಿ ಅವರಿಗೆ ದೊಡ್ಡ ಮಾರ್ಕೆಟ್ ಇರಲಿಲ್ಲ. ಆದರೆ, ಮೂರು ವರ್ಷದ ಬಳಿಕ ಹೋಲಿಕೆ ಮಾಡಿದರೆ ಇದೀಗ ಮೂವರಿಗೂ ಬೇಡಿಕೆ ಇದೆ. ಪ್ರೇಕ್ಷಕರು ಈ ಸಿನಿಮಾ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೆ ಎಲ್ ರಾಹುಲ್ - ಅಥಿಯಾ ಶೆಟ್ಟಿ ಮದುವೆಗೆ ಮುಹೂರ್ತ ಫಿಕ್ಸ್?!

ಈ ಸಿನಿಮಾದ ನಟ ವಿಸ್ಮಯ ವಿನಾಯಕ ಮಾತನಾಡಿ, ಈ ಮೂವರು ನಾಯಕ ನಟರು ಇತ್ತೀಚಿನ ದಿನಗಳಲ್ಲಿ ಹೆಸರು ಮಾಡಿದ್ದಾರೆ. ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಆದರೆ, ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇರಲಿಲ್ಲ. ಆದ ಕಾರಣ ಈ ತುಳು ಸಿನಿಮಾಗೆ ಬಜೆಟ್ ಹೊರೆಯಾಗಿಲ್ಲ ಎಂದು ತಿಳಿಸಿದರು.

ಸೀಮಿತ ಮಾರುಕಟ್ಟೆಯಲ್ಲಿರುವ ತುಳು ಭಾಷೆಯಲ್ಲಿ ಮಲ್ಟಿ‌ ಸ್ಟಾರ್​ಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿರೋದು ಇದೇ ಮೊದಲು. ಈ ಮೂವರು ನಾಯಕರು ತುಳುನಾಡಿನಲ್ಲಿ ತಮ್ಮದೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಬಹು ನಿರೀಕ್ಷಿತ ತುಳು ಸಿನಿಮಾ ಯಶಸ್ವಿಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಈ ಚಿತ್ರದ ಟೈಟಲ್ ಏನು..? ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಶ್ರದ್ಧಾ ಕಪೂರ್!

Last Updated : Dec 13, 2022, 6:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.