ETV Bharat / entertainment

'ಸಹೋದರ ಕೋಮಲ್ ಕಾಮಿಡಿಗೆ ನಾನು ಅಭಿಮಾನಿ': ನಟ ಜಗ್ಗೇಶ್​ - ಸ್ಯಾಂಡಲ್​ವುಡ್​ನ ಸೆನ್ಸೇಶನಲ್ ಸ್ಟಾರ್ ಕೋಮಲ್

ನಟ ಕೋಮಲ್​ ಕುಮಾರ್​ ಅಭಿನಯದ 'ಉಂಡೆನಾಮ' ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ.

undenama
'ಉಂಡೆನಾಮ' ಚಿತ್ರತಂಡ
author img

By

Published : Apr 8, 2023, 11:42 AM IST

ಸ್ಯಾಂಡಲ್​ವುಡ್​ನ ಸೆನ್ಸೇಶನಲ್ ಸ್ಟಾರ್ ಕೋಮಲ್ ಲಾಂಗ್ ಬ್ರೇಕ್ ಬಳಿಕ ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಿರುವ ಕೋಮಲ್ ಈಗ ಕನ್ನಡ ಚಿತ್ರರಂಗದಲ್ಲಿ 'ಉಂಡೆನಾಮ' ಹಾಕಲು ರೆಡಿಯಾಗಿದ್ದಾರೆ. ಸೈಲೆಂಟ್ ಆಗಿ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದೆ.

undenama
'ಉಂಡೆನಾಮ' ಚಿತ್ರತಂಡ

ಟೈಟಲ್​ನಲ್ಲೇ ಕಾಮಿಡಿ ಕಿಕ್ ಹೊಂದಿರುವ 'ಉಂಡೆನಾಮ' ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನವರಸ ನಾಯಕ ಜಗ್ಗೇಶ್ ಟ್ರೇಲರ್ ಲಾಂಚ್​ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೈಲರ್ ಬಿಡುಗಡೆಗೊಳಿಸಿ ಮಾತನಾಡಿದ ಜಗ್ಗೇಶ್, ತಮ್ಮ ಕೋಮಲ್ ಕಾಮಿಡಿ ಟೈಮಿಂಗ್​ಗೆ ನಾನು ಅಭಿಮಾನಿ ಎಂದು ಹೇಳಿದ್ದಾರೆ.

undenama
'ಉಂಡೆನಾಮ' ಚಿತ್ರತಂಡ

"ಟ್ರೇಲರ್ ಚೆನ್ನಾಗಿದೆ. ನನ್ನ ತಮ್ಮ ಕೋಮಲ್ , ಬಹಳ ವರ್ಷಗಳ ನಂತರ ನಟಿಸಿರುವ ಚಿತ್ರವಿದು. ಕೋಮಲ್ ಕಾಮಿಡಿ ಪಾತ್ರಗಳನ್ನು ನೋಡಿದಾಗ, ಎಷ್ಟೋ ಸಲ ನಾನು ಅಂದುಕೊಂಡಿದ್ದೀನಿ, ಇವನ ಹಾಗೆ ನಾನು ಕೂಡ ಕಾಮಿಡಿ ಮಾಡಲು ಕಲಿಯಬೇಕು ಅಂತ. ಅಷ್ಟು ಉತ್ತಮ ಕಲಾವಿದ ಕೋಮಲ್. ನಿರ್ದೇಶಕರು ಲಾಕ್​ಡೌನ್ ಸನ್ನಿವೇಶವನ್ನಿಟ್ಟುಕೊಂಡು ಹಾಸ್ಯ ಚಿತ್ರ ಮಾಡಿದ್ದಾರೆ. ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಬೆಂಬಲದ ನಿರೀಕ್ಷೆಯಲ್ಲಿ ಬಿಜೆಪಿ: ಕ್ಯಾಂಪೇನ್‌ಗೆ ಯಾರೆಲ್ಲಾ ಬರ್ತಿದ್ದಾರೆ?

ನಂತರ ಕೋಮಲ್ ಮಾತನಾಡಿ "ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕ ರಾಜಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಜೊತೆ ನಟಿಸಿರುವ ತಬಲನಾಣಿ, ಹರೀಶ್ ರಾಜ್ ಸೇರಿದಂತೆ ಎಲ್ಲ ಕಲಾವಿದರ ಅಭಿನಯ ಚೆನ್ನಾಗಿದೆ" ಎಂದು ಹೇಳಿದರು.

"ಮೊದಲ ಲಾಕ್​ಡೌನ್​ನಲ್ಲಿ ಕಥೆ ಬರೆದೆ. ನಿರ್ಮಾಪಕ ನಂದಕಿಶೋರ್ ಬಳಿ ಕಥೆ ಹೇಳಿದಾಗ ಅವರು ಈ ಚಿತ್ರವನ್ನು ಕೋಮಲ್​ ಅವರೇ ಮಾಡಬೇಕು ಎಂದರು. ನಾನು ಕೋಮಲ್ ಅವರಿಗಾಗಿಯೇ ಈ ಕಥೆ ಮಾಡಿದ್ದೆ. ಆದರೆ ಅವರು ನಟಿಸಲು ಒಪ್ಪುತ್ತಾರೋ? ಇಲ್ಲವೋ? ಎಂಬ ಆತಂಕ ನನ್ನಲ್ಲಿತ್ತು. ಕಥೆ ಕೇಳಿದ ಕೋಮಲ್ ಅವರು, ಈ ಕಥೆ ಚೆನ್ನಾಗಿದೆ. ನಾನಲ್ಲ, ಯಾರು ಮಾಡಿದರೂ ಈ ಚಿತ್ರ ಯಶಸ್ವಿಯಾಗುತ್ತದೆ ಎಂದರು. ಅದು ಅವರ ದೊಡ್ಡ ಗುಣ. ಸಹಕಾರ ನೀಡಿದ ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ನನ್ನ ಅಭಿನಂದನೆ" ಎಂದು ನಿರ್ದೇಶಕ ಕೆ.ಎಲ್ ರಾಜಶೇಖರ್ ಹೇಳಿದರು.

ಇನ್ನು ಉಂಡೆನಾಮ ಚಿತ್ರದಲ್ಲಿ ಕೋಮಲ್​ಗೆ ಜೋಡಿಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಹರೀಶ್ ರಾಜ್, ತಬಲನಾಣಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ನಿರ್ಮಾಪಕರಾದ ಟಿ.ಆರ್ ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೇಲರ್​ನಿಂದಲೇ ಗಮನ ಸೆಳೆಯುತ್ತಿರುವ 'ಉಂಡೆನಾಮ' ಇದೇ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಸ್ಟೈಲಿಶ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಟೀಸರ್​ ಜೊತೆ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​.. ಹೊಸ ಅವತಾರದಲ್ಲಿ ಅಲ್ಲು ಅರ್ಜುನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.