ETV Bharat / entertainment

ಒಮ್ಮೆಲೆ ಮೂರು​ ಹಿಟ್​ ಸೀಕ್ವೆಲ್​ ರಿಲೀಸ್​ಗೆ ತಯಾರಿ: ಹ್ಯಾಟ್ರಿಕ್​​ ನಿರೀಕ್ಷೆಯಲ್ಲಿ ಕಾರ್ತಿ - ಈಟಿವಿ ಭಾರತ ಕನ್ನಡ

Karthi sequel movies: ಕಾರ್ತಿ ನಟನೆಯ ಬ್ಲಾಕ್​ಬಸ್ಟರ್​ 'ಖೈದಿ', 'ಖಾಕಿ' ಮತ್ತು 'ಸರ್ದಾರ್' ಸಿನಿಮಾಗಳ ಸೀಕ್ವೆಲ್​ ಅನ್ನು ಒಮ್ಮೆಲೆ ಬಿಡುಗಡೆಗೊಳಿಸಲು ತಯಾರಿ ನಡೆಸಲಾಗುತ್ತಿದೆ.

Kollywood actor Karthi next movies details
ಒಮ್ಮೆಲೇ ಮೂರು​ ಹಿಟ್​ ಸೀಕ್ವೆಲ್​ ರಿಲೀಸ್​ಗೆ ತಯಾರಿ: ಹ್ಯಾಟ್ರಿಕ್​​ ನಿರೀಕ್ಷೆಯಲ್ಲಿ ಕಾರ್ತಿ
author img

By ETV Bharat Karnataka Team

Published : Dec 8, 2023, 4:01 PM IST

ಕಾಲಿವುಡ್​ ನಟ ಕಾರ್ತಿ ಸದ್ಯ ತಮ್ಮ ಮುಂಬರುವ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಭಾರಿ ನಿರೀಕ್ಷೆಗಳ ನಡುವೆ ನವೆಂಬರ್​ 10ರಂದು ಥಿಯೇಟರ್​ಗೆ ಅಪ್ಪಳಿಸಿದ 'ಜಪಾನ್​' ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಅವರ ನಟನೆಗೆ ಪ್ರೇಕ್ಷಕರಿಂದ ಉತ್ತಮ ಅಂಕ ಸಿಕ್ಕಿದರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ಗೆಲ್ಲಲಿಲ್ಲ. ಇದರಿಂದಾಗಿ ಕಾರ್ತಿ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಈ ಫಲಿತಾಂಶಗಳನ್ನು ಗಮನಿಸಿರುವ ನಟ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಹ್ಯಾಟ್ರಿಕ್​ ಹಿಟ್​ತಯಾರಿಯಲ್ಲಿದ್ದಾರೆ.

ಸದ್ಯ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಈಗಾಗಲೇ ಬಿಡುಗಡೆಯಾಗಿ ಥಿಯೇಟರ್​ಗಳಲ್ಲಿ ಧೂಳೆಬ್ಬಿಸಿರುವ ಮೂರು ಬ್ಲಾಕ್​ಬಸ್ಟರ್​ ಸಿನಿಮಾಗಳ ಸೀಕ್ವೆಲ್​ನಲ್ಲಿ ಕಾರ್ತಿ ತೊಡಗಿಕೊಂಡಿದ್ದಾರೆ. ಇತ್ತೀಚೆಗಷ್ಟೇ 'ಖಾಕಿ' ಸಿನಿಮಾದ ಮುಂದುವರಿದ ಭಾಗವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಲೋಕೇಶ್​ ಕನಕರಾಜ್​ ನಿರ್ದೇಶನದಲ್ಲಿ ಮೂಡಿಬರಲಿರುವ 'ಖೈದಿ 2' ಚಿತ್ರಕ್ಕೂ ತಯಾರಿ ನಡೆಯುತ್ತಿದೆ. ಇದಲ್ಲದೇ, 'ಸರ್ದಾರ್'​ ಸಿನಿಮಾದ ಸೀಕ್ವೆಲ್​ ಕೂಡ ಪ್ಲಾನ್​ ಮಾಡಲಾಗುತ್ತಿದೆ.

ಒಂದೇ ವರ್ಷದಲ್ಲಿ ಮೂರು ಹಿಟ್​ ಚಿತ್ರಗಳ ಸೀಕ್ವೆಲ್​ ಮಾಡಲು ಕಾರ್ತಿ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಹಿಂದೆ 'ಖೈದಿ 2' ಮತ್ತು 'ಖಾಕಿ 2' ಸಿನಿಮಾಗಳನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಲು ಪ್ಲಾನ್​ ಮಾಡಲಾಗಿದೆ ಎಂಬ ಮಾತು ಕೇಳಿಬಂದಿತ್ತು. ಸದ್ಯ, ಈ ಎರಡು ಚಿತ್ರಗಳ ಜೊತೆ 'ಸರ್ದಾರ್​ 2' ಕೂಡ ಸೆಟ್ಟೇರಲಿದೆಯಂತೆ. ಈ ಮೂಲಕ ಕಾರ್ತಿ ಅಭಿನಯದ ಮೂರು ಬ್ಲಾಕ್​ಬಸ್ಟರ್​ ಸಿನಿಮಾಗಳ ಸೀಕ್ವೆಲ್​ಗಳನ್ನು ಏಕಕಾಲಕ್ಕೆ ತೆರೆಗೆ ತರಲು ಯೋಜನೆ ನಡೆಯುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಒಂದೇ ವರ್ಷ ಮೂರು ಸೀಕ್ವೆಲ್​ಗೆ ತಯಾರಿ: ಆದರೆ, ಈ ಸಿನಿಮಾಗಳನ್ನು ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದರ ಕುರಿತು ಚಿತ್ರ ತಯಾರಕರು ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಇವೆಲ್ಲವೂ ಒಂದೇ ವರ್ಷ ರಿಲೀಸ್​ ಆದಲ್ಲಿ ಕಾರ್ತಿ ವಿಶೇಷ ದಾಖಲೆಯನ್ನು ಸೃಷ್ಟಿಸಲಿದ್ದಾರೆ. ಯಾಕೆಂದರೆ, ಇಲ್ಲಿಯವರೆಗೂ ಯಾವ ಹೀರೋ ಕೂಡ ಸೀಕ್ವೆಲ್​ಗಳನ್ನು ಈ ರೀತಿ ಪ್ಲಾನ್​ ಮಾಡಿಲ್ಲ. ಕಾರ್ತಿ ಮಾತ್ರ ಒಂದೇ ಬಾರಿಗೆ ಎರಡ್ಮೂರು ಸಿನಿಮಾಗಳ ಚಿತ್ರೀಕರಣ ಮುಗಿಸಿದ ದಾಖಲೆ ಹೊಂದಿದ್ದಾರೆ. ಹೀಗಾಗಿ ಅವರ ಮೇಲೆ ನಂಬಿಕೆ ಇಟ್ಟಿರುವ ನಿರ್ಮಾಪಕರು ಈ ಸೀಕ್ವೆಲ್​ಗಳ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಕಾರ್ತಿ ಸೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳು 2024ರಲ್ಲೇ ಬಿಡುಗಡೆಯಾಗುತ್ತೋ ಅಥವಾ ಮತ್ತೂ ಒಂದು ವರ್ಷ ಬೇಕಾಗುತ್ತೋ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

ಇದನ್ನೂ ಓದಿ: ಹಿಂದಿ ಸಿನಿಮಾ ಗೆಲ್ಲಿಸಿದ ದಕ್ಷಿಣದ ಪ್ರೇಕ್ಷಕರು​: ದಾಖಲೆ ಬರೆದ ಮೊದಲ ಬಾಲಿವುಡ್​ ಚಿತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.