ETV Bharat / entertainment

ಬಾಲಿವುಡ್​ನ ರೊಮ್ಯಾಂಟಿಕ್​ ಸೀನ್​ಗಳಿಗೆ ನಿರ್ದೇಶಕಿ ಕಿರಣ್​ ರಾವ್​ ಟೀಕೆ; 'ಬಾಹುಬಲಿ'ಗೆ ಮೆಚ್ಚುಗೆ

Kiran Rao: ಹಿಂದಿ ಸಿನಿಮಾಗಳಲ್ಲಿ ತೋರಿಸಲಾಗುವ ರೊಮ್ಯಾಂಟಿಕ್​ ದೃಶ್ಯಗಳಿಗೆ ನಿರ್ದೇಶಕಿ ಕಿರಣ್​ ರಾವ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Kiran Rao highlights concerns with Baahubali, Kabir Singh: 'Hero delicately strips her of her agency'
ಬಾಲಿವುಡ್​ನ ರೊಮ್ಯಾಂಟಿಕ್​ ಸೀನ್​ಗಳಿಗೆ ನಿರ್ದೇಶಕಿ ಕಿರಣ್​ ರಾವ್​ ಟೀಕೆ; 'ಬಾಹುಬಲಿ'ಗೆ ಮೆಚ್ಚುಗೆ
author img

By ETV Bharat Karnataka Team

Published : Nov 11, 2023, 10:10 PM IST

ಬಾಲಿವುಡ್​ ಸಿನಿಮಾಗಳಲ್ಲಿ ತೋರಿಸಲಾಗುವ ಅತಿಯಾದ ಪ್ರಣಯ ದೃಶ್ಯಗಳಿಗೆ ನಿರ್ಮಾಪಕಿ ಹಾಗೂ ನಿರ್ದೇಶಕಿ ಕಿರಣ್​ ರಾವ್​ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ದಕ್ಷಿಣ ಭಾರತದ ಸೂಪರ್​ಹಿಟ್​ ಸಿನಿಮಾ ಬಾಹುಬಲಿ ಮತ್ತು ಬಾಲಿವುಡ್​ನ ಕಬೀರ್ ​ಸಿಂಗ್​ ಸಿನಿಮಾವನ್ನು ತಾಳೆಹಾಕಿ ಉದಾಹರಿಸಿದ್ದಾರೆ. ಎಸ್​ಎಸ್​ ರಾಜಮೌಳಿ ಸಿನಿಮಾಗೆ ಮೆಚ್ಚುಗೆಯನ್ನು ಸೂಚಿಸಿ, ಹಿಂದಿ ಚಿತ್ರಗಳಲ್ಲಿ ಅತೀ ಆಳವಾದ ಪ್ರಣಯವನ್ನು ಎತ್ತಿ ತೋರಿಸುವ ಪ್ರವೃತ್ತಿ ವಿರುದ್ಧ ಕಿಡಿಕಾರಿದ್ದಾರೆ.

  • " class="align-text-top noRightClick twitterSection" data="">

2019ರಲ್ಲಿ ಬಿಡುಗಡೆಯಾದ ಸಂದೀಪ್​ ರೆಡ್ಡಿ ವಾಂಗಾ ನಿರ್ದೇಶನದ ಕಬೀರ್​ ಸಿಂಗ್​ ಸಿನಿಮಾವನ್ನು ಪ್ರಮುಖ ಉದಾಹರಣೆಯಾಗಿ ತೆಗೆದುಕೊಂಡ ಅವರು, ಇಂತಹ ಸಿನಿಮಾಗಳು ಸಮಾಜಕ್ಕೆ ನೀಡುವ ಸಂದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಾಲಿವುಡ್​ನ ಕೆಲವು ಚಿತ್ರಗಳು ರೊಮ್ಯಾಂಟಿಕ್​ ದೃಶ್ಯಗಳನ್ನು ತೀರಾ ಆಳವಾಗಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ, ಎಸ್​ಎಸ್​ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾವನ್ನು ಉಲ್ಲೇಖಿಸಿದ ಅವರು, ಇದರಲ್ಲಿ ಬರುವ ರೊಮ್ಯಾಂಟಿಕ್​ ಸೀನ್​ಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.

"ನಾನು ಆಕರ್ಷಕವಾಗಿ ಕಾಣುವ ಮತ್ತೊಂದು ಚಿತ್ರವೆಂದರೆ ಬಾಹುಬಲಿ: ದಿ ಬಿಗಿನಿಂಗ್​. ಇದರಲ್ಲಿ ಮಹಿಳೆಯನ್ನು ತೋರಿಸಿದ ರೀತಿ ನಿಜಕ್ಕೂ ಮೆಚ್ಚುವಂತಹದ್ದು. ಚಿತ್ರದ ನಾಯಕಿ ಮರದಿಂದ ಮರಕ್ಕೆ ಜಿಗಿಯುತ್ತಾ ಯೋಧಳಂತೆ ಕಾಣುತ್ತಾಳೆ. ಅವಳನ್ನು ನಾಯಕ ಹಿಂಬಾಲಿಸುವುದು, ಅವಳ ಕೂದಲನ್ನು ಹಿಡಿಯುವಷ್ಟರಲ್ಲಿ ಆಕೆ ಮಾಯವಾಗುವುದು. ಈ ರೀತಿಯಾಗಿ ಪ್ರಣಯವನ್ನು ತೋರಿಸಿದ ಪರಿ ಅದ್ಭುತ. ನಾನು ಇದನ್ನು ಆಕರ್ಷಕವಾಗಿ ಕಾಣುತ್ತೇನೆ. ಇದು ಭಾರತೀಯ ಚಿತ್ರರಂಗದ ಬಹುದೊಡ್ಡ ಸಿನಿಮಾವಾಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಬಾಹುಬಲಿ' ಖ್ಯಾತಿಯ ರಾಜಮೌಳಿ ಭೇಟಿಯಾದರೆ ಅಭಿಮಾನಿಗಳು ಭಾವಪರವಶರಾಗ್ತಾರೆ: ಅನುರಾಗ್ ಕಶ್ಯಪ್ ಸಂತಸ

ಬಾಹುಬಲಿ ಎರಡು ಭಾಗಗಳಲ್ಲಿ ತೆರೆಕಂಡಿತು. ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಹುಬಲಿ: ದಿ ಬಿಗಿನಿಂಗ್ (2015) ಭಾರತದಲ್ಲಿ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಿತು. ಬಾಹುಬಲಿ: ದಿ ಕನ್‌ಕ್ಲೂಷನ್ (2017) ಮೂಲಕ ರಾಜಮೌಳಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು. ಈ ಚಿತ್ರವು ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ವಿಶೇಷವಾಗಿ ಜಪಾನ್ ಮತ್ತು ಚೀನಾದಲ್ಲಿ ಜನಪ್ರಿಯತೆಯನ್ನು ಗಳಿಸಿತು. ಈ ಚಿತ್ರವು ಕಾಲ್ಪನಿಕ ಸಾಮ್ರಾಜ್ಯವಾದ ಮಾಹಿಷ್ಮತಿಯ ಸಿಂಹಾಸನಕ್ಕಾಗಿ ಇಬ್ಬರು ಸೋದರ ಸಂಬಂಧಿಗಳ ನಡುವಿನ ಪೈಪೋಟಿಯನ್ನು ಬಗ್ಗೆ ತಿಳಿಸುವ ಕಥೆಯಾಗಿದೆ.

ನಿರ್ದೇಶಕಿ ಕಿರಣ್​ ರಾವ್​ ಅವರ ಇತ್ತೀಚೆಗಿನ ಚಿತ್ರ ಲಾಪತಾ ಲೇಡಿಸ್​ ಅನ್ನು 2023ರ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. 2001ರಲ್ಲಿ ನಡೆಯುವ ಕಥೆ ಇದಾಗಿದ್ದು, ಗ್ರಾಮೀಣ ಭಾರತದಲ್ಲಿನ ಇಬ್ಬರು ವಧುಗಳು ಕಣ್ಮರೆಯಾಗುವ ಕಥಾಹಂದರ ಹೊಂದಿದೆ. ಚಿತ್ರದಲ್ಲಿ ನಿಶಾಂತಿ ಗೋಯೆಲ್​, ಪ್ರತಿಭಾ ರಂತ, ಸ್ಪರ್ಶ ಶ್ರೀವಾಸ್ತವ, ಛಾಯಾ ಕದಂ ಮತ್ತು ರವಿ ಕಿಶನ್​ ಸೇರಿದಂತೆ ಪ್ರತಿಭಾವಂತ ಕಲಾವಿದರಿದ್ದಾರೆ. ನಟ ಅಮೀರ್​ ಖಾನ್​ ಅವರ ಅಮೀರ್​ ಖಾನ್​ ಪ್ರೊಡಕ್ಷನ್ಸ್​ ಮತ್ತು ಕಿರಣ್​ ರಾವ್​ ಅವರ ಕಿಂಡ್ಲಿಂಗ್ ಪ್ರೊಡಕ್ಷನ್ಸ್​ ಅಡಿ ಚಿತ್ರ ನಿರ್ಮಾಣವಾಗಿದೆ.

ಇದನ್ನೂ ಓದಿ: ಬಾಹುಬಲಿ-ಮಹಿಷ್ಮತಿ ಅಧಿಪತ್ಯಕ್ಕೆ 7 ವರ್ಷದ ಸಂಭ್ರಮ; ಶೂಟಿಂಗ್​ ಕ್ಷಣಗಳನ್ನ ನೆನೆದ ತಾರಾಬಳಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.