ETV Bharat / entertainment

ಸುದೀಪ್ ಮುಂದಿನ ಸಿನಿಮಾ ಯಾವುದು?: ಕಿಚ್ಚನ ಸ್ಪಷ್ಟೀಕರಣ ಹೀಗಿದೆ.. - sudeep tweet

ನಟ ಸುದೀಪ್ ಅವರ​ ಮುಂದಿನ ಸಿನಿಮಾಗಳ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವತಃ ಕಿಚ್ಚನೇ ಟ್ವೀಟ್ ಮೂಲಕ ಸ್ಪಷ್ಟೀಕರಣ ಕೊಟ್ಟಿದ್ದಾರೆ.

kiccha sudeep upcoming movies
ನಟ ಸುದೀಪ್​ ಮುಂದಿನ ಸಿನಿಮಾhttp://10.10.50.85:6060/finalout4/karnataka-nle/thumbnail/02-April-2023/18148209_thumbnail_16x9_newsss.jpg
author img

By

Published : Apr 2, 2023, 12:15 PM IST

Updated : Apr 2, 2023, 12:24 PM IST

'ಅಭಿನಯ ಚಕ್ರವರ್ತಿ' ಸುದೀಪ್​​ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ 'ವಿಕ್ರಾಂತ್ ರೋಣ'. ಇದು ಸೂಪರ್ ಹಿಟ್ ಆಗಿತ್ತು. ಬಳಿಕ ಯಾವುದೇ ಹೊಸ ಚಿತ್ರವನ್ನು ಅವರು ಘೋಷಿಸಿಲ್ಲ. ಹೀಗಾಗಿ ಕಿಚ್ಚನ 46ನೇ ಸಿನಿಮಾ ಬಗ್ಗೆ ಹಲವು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿವೆ. ಪರಭಾಷೆ ನಿರ್ದೇಶಕರು ಇವರ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಸುದೀಪ್​ ಟ್ವೀಟ್ ಮಾಡಿದ್ದಾರೆ.

ನಟ ಸುದೀಪ್​ ಟ್ವೀಟ್: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ವೀಟ್, ಮೀಮ್ಸ್​​ಗಳನ್ನು ಅರ್ಥ ಮಾಡಿಕೊಂಡೆ. 'ಕಿಚ್ಚ 46' ಎಂಬುದು ನನಗೆ ವಿಶೇಷ ಎನಿಸಿತು. ಎಲ್ಲದಕ್ಕೂ ಧನ್ಯವಾದಗಳು. ಆದ್ರೆ ಸಣ್ಣ ಸ್ಪಷ್ಟೀಕರಣ ಕೊಡಲು ನಿರ್ಧರಿಸಿದ್ದೇನೆಂದು ಟ್ವೀಟ್ ಆರಂಭಿಸಿದ್ದಾರೆ.

ನಾನು ವಿರಾಮ ತೆಗೆದುಕೊಂಡಿದ್ದೇನೆ. ಇದು ನನ್ನ ಮೊದಲ ಬ್ರೇಕ್. ವಿಕ್ರಾಂತ್ ರೋಣ ಬಳಿಕ ಈ ಬ್ರೇಕ್ ಬೇಕಿತ್ತು. ಕೋವಿಡ್​ ಸಮಯ, ಬಿಗ್​ಬಾಸ್​ ಒಟಿಟಿ ಬ್ಯುಸಿ ಶೆಡ್ಯೂಲ್​ ಬಳಿಕ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ನನಗೆ ಖುಷಿ ಕೊಡುವ ಕೆಲಸ ಮಾಡುವ ಮೂಲಕ ಎಂಜಾಯ್​ ಮಾಡುತ್ತೇನೆ. ಕ್ರಿಕೆಟ್​ ನನಗೆ ಖುಷಿ ಕೊಡುವ ಮತ್ತು ರಿಲ್ಯಾಕ್ಸ್ ಮಾಡಲು ಉತ್ತಮ ಕ್ರೀಡೆಯಾಗಿದೆ. ಕೆಸಿಸಿ ಅಲ್ಲಿ ಖುಷಿ ಕ್ಷಣಗಳನ್ನು ಕಳೆದಿದ್ದೇನೆ. ಇದೊಂದು ಉತ್ತಮ ವಿರಾಮ​​ವಾಗಿತ್ತು.

ಅದಾಗ್ಯೂ, ನನ್ನ ಚಿತ್ರಕಥೆ ಚರ್ಚೆ ಮತ್ತು ಮೀಟಿಂಗ್ಸ್​ ನನ್ನ ಜೀವನದ ಒಂದು ಅವಿಭಾಜ್ಯ ಅಂಗ. ಮೂರು ಕಥೆಗಳು ಫೈನಲ್​ ಆಗಿವೆ, ಅಂದರೆ ಮೂರು ಸಿನಿಮಾಗಳು ಅಂತಿಮವಾಗಿವೆ. ಪೂರ್ವ ತಯಾರಿಗಳು ಮುಂದುವರಿದಿದೆ. ಈ ಮೂರು ಕಥೆಗಳಿಗೆ ದೊಡ್ಡ ಮಟ್ಟದಲ್ಲಿ ಹೋಮ್​ ವರ್ಕ್​ ಆಗಬೇಕು. ತಂಡಗಳು ಹಗಲು ರಾತ್ರಿ ಕೆಲಸದಲ್ಲಿ ನಿರತವಾಗಿದೆ. ಶೀಘ್ರದಲ್ಲೇ ಮುಂದಿನ ಚಿತ್ರದ ಬಗ್ಗೆ ಘೋಷಣೆ ಆಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೇಕಪ್ ಇಲ್ಲದೇ ನಟಿಸುವುದರಿಂದ ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಾರೆ : ಸಾಯಿ ಪಲ್ಲವಿ

ಅನೂಪ್​ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಭಾಷಾ' ಕೂಡ ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ. ಈ ಚಿತ್ರದಲ್ಲೂ ಸುದೀಪ್​​ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಡೈರೆಕ್ಟರ್​ ಅನೂಪ್​ ಭಂಡಾರಿ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಗಗಮನ ಸೆಳೆದಿದ್ದರು. '' 'ಬಿ' ಗಿಯಾಗಿ ಕೂತ್ಕೋಳಿ, 'ರಂ' ಪಾಟ ಶುರುವಾಗೋಕ್ ಸ್ವಲ್ಪ ಸಮಯ ಬೇಕು, 'ಬಾ' ಡೂಟದ ಜೊತೆ ಬರುತ್ತೇವೆ. ಅಲ್ಲಿವರೆಗೂ ಎಂದಿನ ಹಾಗೆ ತಾಳ್ಮೆ ಇರಲಿ ಎಂದು ವಿಭಿನ್ನವಾಗಿ ತಮ್ಮ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದರು. ಆರಂಭದ ಅಕ್ಷರಗಳಿಗೆ ಕೊಂಚ ಗ್ಯಾಪ್ ನೀಡುವ ಮೂಲಕ ತಮ್ಮ ಮುಂದಿನ ಸಿನಿಮಾ ಯಾವುದು ಎನ್ನುವುದರ ಸುಳಿವು ಬಿಟ್ಟು ಕೊಟ್ಟಿದ್ದರು.

ಇದನ್ನೂ ಓದಿ: ಶಿವಾಜಿ ಸುರತ್ಕಲ್ 2 ಟ್ರೇಲರ್ ರಿಲೀಸ್: ಹೆಚ್ಚಿದ ಕುತೂಹಲ, ಏ.14ಕ್ಕೆ ಸಿನಿಮಾ ತೆರೆಗೆ

'ಬಿಲ್ಲ ರಂಗ ಭಾಷಾ' ಸಿನಿಮಾ ಜೊತೆಗೆ ಬೇರೆ ಚಿತ್ರಕಥೆಗಳೂ ರೆಡಿಯಾಗಿವೆ. ಈ ಸಿನಿಮಾವನ್ನು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ನಿರ್ಮಿಸಲಿದೆ. ಸ್ಟಾರ್ ಡೈರೆಕ್ಷರ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಎದ್ದಿದ್ದವು. ಇವೆಲ್ಲವನ್ನೂ ಗಮನಿಸಿರುವ ನಟ ಸುದೀಪ್​ ಇಂದು ಟ್ವೀಟ್ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Last Updated : Apr 2, 2023, 12:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.