ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿರುವ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರ ನಾಡಿದ್ದು(ಜುಲೈ 28) ತೆರೆಗೆ ಅಪ್ಪಳಿಸಲಿದೆ. ಅದಕ್ಕೋಸ್ಕರ ಭರದ ಪ್ರಚಾರ ಕಾರ್ಯ ನಡೆಯುತ್ತಿದೆ. ಇದರ ಮಧ್ಯೆ ಸಂಸದರು, ಉನ್ನತ ಅಧಿಕಾರಿಗಳಿಗೋಸ್ಕರ ಸುದೀಪ್ ದೆಹಲಿಯಲ್ಲಿ ವಿಶೇಷ ಪ್ರೀಮಿಯರ್ ಶೋ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.
ದೆಹಲಿಯಲ್ಲಿ ಜುಲೈ 28ರಂದು ಸಂಜೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದೆಹಲಿಯ ಚಾಣಕ್ಯಪುರಿಯ ಪಿವಿಆರ್ ಥಿಯೇಟರ್ನಲ್ಲಿ ಪ್ರೀಮಿಯರ್ ಶೋ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಭಾಗಿಯಾಗುವಂತೆ ಸಂಸದ ಪ್ರತಾಪ್ ಸಿಂಹ ಅವರಿಗೂ ಆಹ್ವಾನ ಹೋಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಸುದೀಪ್ಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಪ್ರಿಮಿಯರ್ ಶೋನಲ್ಲಿ ರಾಜ್ಯಸಭಾ, ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
-
Eagerly waiting. Thank you @KicchaSudeep Sir. All the best for you. pic.twitter.com/iZFqCy5KAp
— Pratap Simha (@mepratap) July 26, 2022 " class="align-text-top noRightClick twitterSection" data="
">Eagerly waiting. Thank you @KicchaSudeep Sir. All the best for you. pic.twitter.com/iZFqCy5KAp
— Pratap Simha (@mepratap) July 26, 2022Eagerly waiting. Thank you @KicchaSudeep Sir. All the best for you. pic.twitter.com/iZFqCy5KAp
— Pratap Simha (@mepratap) July 26, 2022
ಇದನ್ನೂ ಓದಿರಿ: 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ'... ಉಪ್ಪಿ ಮಾತಿನಲ್ಲೇ ಕೇಳಿ!
ಜುಲೈ 28ರಂದು ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಚಿತ್ರ ರಿಲೀಸ್ ಆಗಲಿದ್ದು, ಇದರಲ್ಲಿ ಸುದೀಪ್ ಜೊತೆ ಜಾಕ್ವಲಿನ್, ನಿರೂಪ್ ಭಂಡಾರಿ ಹಾಗೀ ನೀತಾ ಅಶೋಕ್ ಇದ್ದಾರೆ. ಟೀಸರ್ ಹಾಗೂ ಟ್ರೈಲರ್ಗಳ ಮೂಲಕ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಈ ಚಿತ್ರ ವೀಕ್ಷಣೆ ಮಾಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.