ಬಾಲಿವುಡ್ ನವದಂಪತಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ತಮ್ಮ ಮೊದಲ ಹೋಳಿಯನ್ನು ವಿಶೇಷವಾಗಿ ಆಚರಿಸಿದ್ದಾರೆ. ಮದುವೆ ಪೂರ್ವದ ಶಾಸ್ತ್ರಗಳನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಹೋಳಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.
ದೇಶ ಅದ್ರಲ್ಲೂ ಉತ್ತರ ಭಾರತದಾದ್ಯಂತ ಬಣ್ಣದ ಹಬ್ಬದ ಸಡಗರವಿದೆ. ವಿವಿಧ ರೀತಿಯ ಆಚರಣೆಗಳು, ಬಣ್ಣದ ಎರೆಚಾಟ ಮೇಳೈಸುತ್ತಿದೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹೋಳಿ ಕಳೆಗಟ್ಟಿದೆ. ಬಾಲಿವುಡ್ ಮಂದಿಯೂ ಸಖತ್ ಕಲರ್ಫುಲ್ ಆಗಿ ಆಚರಿಸುತ್ತಿದ್ದಾರೆ. ಹೋಳಿ 2023 ಅನ್ನು ಅಭಿಮಾನಿಗಳಿಗೆ ವಿಶೇಷವಾಗಿಸುವ ದೃಷ್ಟಿಯಿಂದ ಬಾಲಿವುಡ್ ಬಹುಬೇಡಿಕೆಯ ತಾರೆ ಕಿಯಾರಾ ಅಡ್ವಾಣಿ ಒಂದು ಸುಂದರ ಫೋಟೋ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಕಿಯಾರಾ ಅಡ್ವಾಣಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಳದಿ ಶಾಸ್ತ್ರದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮದುವೆ ಪೂರ್ವದ ಶಾಸ್ತ್ರಗಳಲ್ಲಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ನಗುಮೊಗದಿಂದ ಮಿನುಗುತ್ತಿರುವುದನ್ನು ನೀವು ಕಾಣಬಹುದು. ನಮ್ಮಿಂದ (ಕಿಯಾರಾ - ಸಿದ್ಧಾರ್ಥ್) ನಿಮಗೆ ಮತ್ತು ನಿಮ್ಮವರಿಗೆ ಹೋಳಿ ಹಬ್ಬದ ಶುಭಾಶಯಗಳು ಎಂದು ಬರೆದಿದ್ದಾರೆ.
ಕಿಯಾರಾ ಅಡ್ವಾಣಿ ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಕೂಡ ತಮ್ಮ ಮೆಚ್ಚಿನ ತಾರೆಗೆ ಹೋಳಿ ಶುಭಾಶಯಗಳನ್ನು ತಿಳಿಸಿದ್ದಾರೆ. ನವ ದಂಪತಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ ಅಭಿಮಾನಿಯೊಬ್ಬರು, 'ಹ್ಯಾಪಿ ಹೋಳಿ ಸಿದ್ ಮತ್ತು ಕಿಯಾರಾ' ಎಂದು ಬರೆದರೆ, ಮತ್ತೊಬ್ಬರು 'ಶೆರ್ಷಾ ವಾಲಿ ಹೋಳಿ ಮುಬಾರಕ್' ಎಂದು ಕಾಮೆಂಟ್ ಮಾಡಿದ್ದಾರೆ. ಜೀವನದುದ್ದಕ್ಕೂ ಹೀಗೆ ಸಂತೋಷವಾಗಿರಿ ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ. ನಟಿಯ ಪೋಸ್ಟ್ನ ಕಾಮೆಂಟ್ ವಿಭಾಗ ಹೋಳಿ ವಿಶಸ್, ಫೈಯರ್, ಹೃದಯದ ಎಮೋಜಿಗಳಿಂದ ಕೂಡಿದೆ.
ಕಿಯಾರಾ ಅವರ ವೃತ್ತಿಜೀವನ ಗಮನಿಸುವುದಾದರೆ, ಕಾರ್ತಿಕ್ ಆರ್ಯನ್ ಜೊತೆಗೆ ಸತ್ಯ ಪ್ರೇಮ್ ಕಿ ಕಥಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಂಕರ್ ನಿರ್ದೇಶನದ ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಅಭಿನಯದ ಆರ್ಸಿ15 ಸಿನಿಮಾದಲ್ಲಿ ನಟನೆ ಮಾಡಲಿದ್ದಾರೆ. ಶೆರ್ಷಾ ಸಿನಿಮಾ ಬಳಿಕ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅದಲ್ ಬದಲ್ ಎಂಬ ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನ, ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಪೊಲೀಸ್ ಫೋರ್ಸ್ ಬಿಡುಗಡೆ ಹೊಸ್ತಿಲಿನಲ್ಲಿದೆ. ಪುಷ್ಕರ್ ಓಜಾ ಮತ್ತು ಸಾಗರ್ ಅಂಬ್ರೆ ನಿರ್ದೇಶನದ ಯೋಧ ಸಿನಿಮಾ ಕೂಡ ಶೀಘ್ರದಲ್ಲೇ ರಿಲೀಸ್ ಆಗಲಿದೆ. ರಾಶಿ ಖನ್ನಾ ಮತ್ತು ದಿಶಾ ಜೊತೆಗೆ ನಟಿಸಿರುವ ಈ ಚಿತ್ರವು ಜುಲೈ 7ರಂದು ತೆರೆ ಕಾಣಲಿದೆ.
ಇದನ್ನೂ ಓದಿ: ಹ್ಯಾಪಿ ಹುಟ್ದಬ್ಬ 'ಮಿಸಸ್ ರಾಮಾಚಾರಿ'! ದೂರದೂರಿನಲ್ಲಿ ಸೆಲೆಬ್ರೇಷನ್, ಫ್ಯಾನ್ಸ್ಗೆ ನಿರಾಶೆ
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಪ್ರೀತಿ ವ್ಯಕ್ತಪಡಿಸುವುದರಿಂದ ಹಿಂದೆ ಸರಿದಿಲ್ಲ. ಅವರ ಪ್ರೀತಿ ಗಮನಿಸಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಪರಸ್ಪರರ ಫೋಟೋಗಳಿಗೆ ಕಾಮೆಂಟ್ ಮಾಡುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಈ ದಂಪತಿ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.
ಇದನ್ನೂ ಓದಿ: ಆನಂದ ಸಾಗರದಲ್ಲಿ ನವ ದಂಪತಿ.. ಪತ್ನಿ ಕಿಯಾರಾ ಚೆಲುವಿಗೆ ಸಿದ್ಧಾರ್ಥ್ ಮೆಚ್ಚುಗೆಯ ಮಾತು