ETV Bharat / entertainment

ಟಿಕೆಟ್ ಬುಕ್ಕಿಂಗ್​ನಲ್ಲಿ RRR​​ ಸಿನಿಮಾ‌ ದಾಖಲೆ ಮುರಿದ ಕೆಜಿಎಫ್ ಚಾಪ್ಟರ್ 2? - KGF Chapter -2 will break out the records of RRR ticket Booking

ಸಿನಿಮಾ ವಿತರಕರ ಪ್ರಕಾರ, ಕೆಜಿಎಫ್ ಚಾಪ್ಟರ್ -2 ಟಿಕೆಟ್ ಬುಕ್ಕಿಂಗ್ ಆದ ಚಿತ್ರಮಂದಿರಗಳು ಹಾಗು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ನಟ ಯಶ್​
ನಟ ಯಶ್​
author img

By

Published : Apr 8, 2022, 10:15 PM IST

ಕೆಜಿಎಫ್ ಚಾಪ್ಟರ್- 2 ಭಾರತೀಯ ಚಿತ್ರರಂಗ ಅಲ್ಲದೇ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿರೋ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಹಾಗು ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಾಣದ ಈ ಸಿನಿಮಾ ಬಿಡುಗಡೆಗೆ ಒಂದು ವಾರ ಬಾಕಿ ಇದೆ.

ಈಗಾಗಲೇ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಅವರು ಮುಂಬೈ, ದಿಲ್ಲಿ, ಚನ್ನೈ ಹಾಗು ಕೊಚ್ಚಿನ್​ನಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಸಿನಿಮಾದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ನಿರೀಕ್ಷೆಗೂ ಮೀರಿ ಮುಂಗಡ ಬುಕ್ಕಿಂಗ್ ಆಗಿದೆ.

Acter yash
ನಟ ಯಶ್​

ಸಿನಿಮಾ ವಿತರಕರ ಪ್ರಕಾರ, ಕೆಜಿಎಫ್ ಚಾಪ್ಟರ್ -2 ಟಿಕೆಟ್ ಬುಕ್ಕಿಂಗ್ ಆದ ಚಿತ್ರಮಂದಿರಗಳು ಹಾಗು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪುಣೆ, ಸೂರತ್, ದಿಲ್ಲಿ, ಅಹಮದಾಬಾದ್, ಕೋಲ್ಕತ್ತಾ, ಜೈಪುರ ಮತ್ತು ಲಕ್ನೋದಂತಹ ನಗರಗಳಲ್ಲಿ ತಲಾ 10 ಲಕ್ಷ ರೂಪಾಯಿ ಗಳಿಸಿದೆ. ಆದರೆ, ಸೀಮಿತ ಶೋಗಳಲ್ಲಿ ಮಾತ್ರ ಬುಕ್ಕಿಂಗ್ ಆರಂಭವಾಗಿದ್ದು, ಭಾನುವಾರದ ವೇಳೆಗೆ ಸಿನಿಮಾದ ಮುಂಗಡ ಬುಕ್ಕಿಂಗ್ ಇನ್ನೂ ಜಾಸ್ತಿ ಆಗುವ ಸೂಚನೆ ಸಿಕ್ಕಿದೆ.

ಈ ಲೆಕ್ಕಾಚಾರ ನೋಡಿದ್ರೆ, ರಾಮ್ ಚರಣ್ ತೇಜಾ ಹಾಗು ಜೂನಿಯರ್ ಎನ್‌ಟಿಆರ್ ಅಭಿನಯದ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ, ಮುಂಗಡ ಬುಕ್ಕಿಂಗ್ ಮೂಲಕ 5.08 ಕೋಟಿ ಗಳಿಸಿತ್ತು. ಆದ್ರೆ, ಕೆಜಿಎಫ್ ಚಾಪ್ಟರ್ 2 ಸಿನಿಮಾ, 12 ಗಂಟೆಗಳಲ್ಲಿ 3.35 ಕೋಟಿಗಳಿಕೆ ಆಗಿದೆಯಂತೆ‌. ಇದು ದೊಡ್ಡ ವ್ಯವಹಾರವಾಗಿದೆ.

Acter yash

ಚಿತ್ರ ಬಿಡುಗಡೆಗೆ ಇನ್ನೂ ಒಂದು ವಾರ ಬಾಕಿ ಇದೆ. 3788 ಶೋಗಳಿಗೆ ಮುಂಗಡ ಬುಕಿಂಗ್ ಮೂಲಕ, ಆರ್ ಆರ್ ಆರ್ ಸಿನಿಮಾ ಆದಾಯ ಗಳಿಸಿತ್ತು. ಆದ್ರೆ, ಕೆಜಿಎಫ್‌ನ ಮುಂಗಡ ಬುಕ್ಕಿಂಗ್ ಕೇವಲ 1839 ಶೋಗಳ ಮೂಲಕ ಮಾತ್ರ ಮಾಡಲಾಗಿದೆ. ಹಿಂದಿ ನಗರಗಳಾದ ದಿಲ್ಲಿ, ಮುಂಬೈ ಜೊತೆಗೆ ಹೈದ್ರಾಬಾದ್, ತಮಿಳುನಾಡು, ಕೇರಳ ಹಾಗು ಕರ್ನಾಟಕದಲ್ಲಿ ಏಪ್ರಿಲ್ 13 ರ ಬುಧವಾರದವರೆಗೆ ಮುಂಗಡ ಬುಕಿಂಗ್‌ನಿಂದ 15 ರಿಂದ 18 ಕೋಟಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಗಳಿಕೆ ಮಾಡುತ್ತೆ ಅಂತಾ ಹೇಳಲಾಗುತ್ತಿದೆ‌.

ಇದನ್ನೂ ಓದಿ: ಊರ್ವಶಿ ರೌಟೇಲಾ ನಟನೆಯ ಹಿಂದಿ ಸಿನಿಮಾ ನಿರ್ಮಿಸುವ ಕನ್ನಡ ನಿರ್ಮಾಪಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.