ETV Bharat / entertainment

'ಭೂಲ್​ ಚುಕ್​ ಮಾಫ್': ಮೊದಲ ಬಾರಿಗೆ ಜೋಡಿಯಾದ ಕಾರ್ತಿಕ್​ ಆರ್ಯನ್​, ಶ್ರದ್ಧಾ ಕಪೂರ್​ ​ - ಈಟಿವಿ ಭಾರತ ಕನ್ನಡ

ಕಾರ್ತಿಕ್​ ಆರ್ಯನ್​ ಮತ್ತು ಶ್ರದ್ಧಾ ಕಪೂರ್​ 'ಭೂಲ್​ ಚುಕ್​ ಮಾಫ್'​ ಚಿತ್ರದ ಮೂಲಕ ಮೊದಲ ಬಾರಿಗೆ ಜೊತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Kartik Aaryan and Shraddha Kapoor
ಕಾರ್ತಿಕ್​ ಆರ್ಯನ್​, ಶ್ರದ್ಧಾ ಕಪೂರ್​ ​
author img

By

Published : Apr 13, 2023, 2:53 PM IST

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಮತ್ತು ನಟಿ ಶ್ರದ್ಧಾ ಕಪೂರ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮೊದಲ ಬಾರಿಗೆ ಈ ಜೋಡಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ. 'ಭೂಲ್​ ಚುಕ್​ ಮಾಫ್'​ ಚಿತ್ರದಿಂದ ಮೊದಲ ಬಾರಿಗೆ ಈ ಜೋಡಿ ಪ್ರೇಕ್ಷಕರನ್ನು ರಂಜಿಸಲಿದೆ. ಈ ಬಗ್ಗೆ ಜಿಯೋ ಸ್ಟುಡಿಯೋ ತಂಡ ಮಾಹಿತಿ ನೀಡಿದೆ. ಆದರೆ, ಸಿನಿಮಾ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಅಲ್ಲದೇ ರಣಬೀರ್​ ಕಪೂರ್​ ಮತ್ತು ಶ್ರದ್ಧಾ ಕಪೂರ್​ ಅಭಿನಯದ 'ತೂ ಜೂಟಿ ಮೇ ಮಕ್ಕರ್​' ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

'ತೂ ಜೂಟಿ ಮೇ ಮಕ್ಕರ್' ಸಿನಿಮಾದಲ್ಲಿ ಪರದೆಯ ಮೇಲೆ ಇವರಿಬ್ಬರು ಕಾಣಿಸಿಕೊಂಡಿದ್ದರು. ಆದರೆ, ಇಡೀ ಚಿತ್ರದಲ್ಲಿ ಇವರೇ ಜೋಡಿಯಾಗಿ ಮೊದಲ ಬಾರಿಗೆ 'ಭೂಲ್​ ಚುಕ್​ ಮಾಫ್'​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಕರಣ್​ ಶರ್ಮಾ ನಿರ್ದೇಶಿಸಲಿದ್ದಾರೆ. ಈ ಜೋಡಿಯ ಸಿನಿಮಾಕ್ಕಾಗಿ​ ಎದುರು ನೋಡುತ್ತಿದ್ದ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದೆ.

ಬುಧವಾರ, ಜಿಯೋ ಸ್ಟುಡಿಯೋಸ್​ ತನ್ನ 100 ಚಲನಚಿತ್ರಗಳನ್ನು ಪೂರೈಸಿದೆ. ಆ ಎಲ್ಲ ಚಿತ್ರಗಳ ಮಾಹಿತಿ ನೀಡಿರುವ ತಂಡವು ಈವೆರೆಗೆ ತಯಾರಾದ ಮತ್ತು ತಯಾರಾಗುವ ಚಿತ್ರಗಳ ಹೆಸರನ್ನು ಉಲ್ಲೇಖಿಸಿದೆ. ಈ ವೇಳೆ, ಕಾರ್ತಿಕ್​ ಮತ್ತು ಶ್ರದ್ಧಾ ಜೋಡಿಯಾಗಿ 'ಭೂಲ್​ ಚುಕ್​ ಮಾಫ್'​ ರೊಮ್ಯಾಂಟಿಕ್​ ಕಾಮಿಡಿ ಚಿತ್ರವೊಂದು ತಯಾರಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಇದೇ ವೇಳೆ, ವರುಣ್ ಧವನ್ ಅವರ ಭೇದಿಯಾ-2 ಮತ್ತು ರಾಜ್‌ಕುಮಾರ್ ರಾವ್ ಅವರ ಸ್ತ್ರೀ 2 ಸಿನಿಮಾವನ್ನು ಘೋಷಿಸಲಾಯಿತು.

ಇದನ್ನೂ ಓದಿ: ಲೂಧಿಯಾನದ ಚಿಕ್ಕ ಅಡುಗೆ ಮನೆಯಿಂದ ಮಾಸ್ಟರ್​ ಶೆಫ್​ ಕಾರ್ಯಕ್ರಮದ ಟಾಪ್​ 5 ಸ್ಥಾನದವರೆಗೆ ಕುಲ್ದೀಪ್​ ಕೌರ್​ ಪಯಣ

'ತೂ ಜೂಟಿ ಮೇ ಮಕ್ಕರ್' ಹಿಟ್​: ಲವ್ ರಂಜನ್ ನಿರ್ದೇಶನದ ತೂ ಜೂಟಿ ಮೇ ಮಕ್ಕರ್ ಸಿನಿಮಾ ವಿಶ್ವಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್​ ಮಾಡಿದೆ. ಈ ಚಿತ್ರದಲ್ಲಿ ರಣ್​ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೂ ಉತ್ತಮ ಪ್ರದರ್ಶನ ಕಂಡಿದೆ. ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾರ್ತಿಕ್​ ಆರ್ಯನ್​ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರ ಪ್ರೇಮಿಯಾಗಿ ರಣ್​ಬೀರ್​ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಸಂಬಂಧದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತಾರೆ, ಅದು ಸಂಘರ್ಷಕ್ಕೂ ದಾರಿ ಮಾಡಿಕೊಡುತ್ತದೆ. ಹೇಗೆ ತಮ್ಮ ಸಂಬಂಧವನ್ನು ನಿಭಾಯಿಸುತ್ತಾರೆ ಅನ್ನೋದೇ ಸ್ಟೋರಿ. ರೊಮ್ಯಾಂಟಿಕ್ ಸೀನ್​ಗಳ ಜೊತೆಗೆ ಕಾಮಿಡಿ ದೃಶ್ಯಗಳು ಸಹ ಈ ಚಿತ್ರದಲ್ಲಿದೆ. ಅಲ್ಲದೇ ರಣ್​​ಬೀರ್ ಕಪೂರ್, ಶ್ರದ್ಧಾ ಕಪೂರ್ ಜೊತೆಗೆ ಸ್ಟ್ಯಾಂಡ್​ ಅಪ್​ ಕಾಮಿಡಿಯನ್​​ ಅನುಭವ್​ ಬಸ್ಸಿ, ಬೋನಿ ಕಪೂರ್ ಮತ್ತು ಡಿಂಪಲ್ ಕಪಾಡಿಯಾ ಸಿನಿಮಾದಲ್ಲಿ ಮಹತ್ವದ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಶಾಹಿದ್​ ಕಪೂರ್ ಆ್ಯಕ್ಷನ್​- ಥ್ರಿಲ್ಲರ್​ ಚಿತ್ರ 'ಬ್ಲಡಿ ಡ್ಯಾಡಿ' ನೇರ ಓಟಿಟಿಯಲ್ಲಿ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.