ETV Bharat / entertainment

ಸೈಫ್​ ಮೊದಲ ಪತ್ನಿಯ ಮಗನಿಗೆ ಬರ್ತ್​ಡೇ ವಿಶ್​ ಮಾಡಿದ ನಟಿ ಕರೀನಾ ಕಪೂರ್​ - ಈಟಿವಿ ಭಾರತ ಕನ್ನಡ

22ನೇ ವಸಂತಕ್ಕೆ ಕಾಲಿಟ್ಟ ಇಬ್ರಾಹಿಂಗೆ ಬಾಲಿವುಡ್ ದಿವಾ ಕರೀನಾ ಕಪೂರ್ ಖಾನ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

birthday
ನಟಿ ಕರೀನಾ ಕಪೂರ್​
author img

By

Published : Mar 5, 2023, 5:50 PM IST

ನಟ ಸೈಫ್​ ಅಲಿ ಖಾನ್​ ಮೊದಲ ಪತ್ನಿಯ ಪುತ್ರನ ಹುಟ್ಟುಹಬ್ಬಕ್ಕೆ ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​ ಶುಭಹಾರೈಸಿದ್ದಾರೆ. ಕರೀನಾ ಅವರು ಸೈಫ್​ ಅಲಿ ಖಾನ್​ ಎರಡನೇ ಪತ್ನಿಯಾಗಿದ್ದು, ಇಬ್ರಾಹಿಂ ಅಲಿ ಖಾನ್​ಗೆ ವಿಶ್​ ಮಾಡಿರುವುದು ಸಖತ್​ ಸುದ್ದಿಯಾಗಿದೆ. ಇಬ್ರಾಹಿಂ ಕುಟುಂಬದ ಜೊತೆಗಿರುವ ಇತ್ತೀಚೆಗಿನ ಫೋಟೋವನ್ನು ನಟಿ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡು ಶುಭಾಶಯ ಕೋರಿದ್ದಾರೆ.

ಇಂದು ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಅಲಿ ಖಾನ್ 22 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪಟೌಡಿ ಕುಟುಂಬದ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಬರ್ತ್​ಡೇ ಬಾಯ್​ ಫೋಟೋ ಹಂಚಿಕೊಂಡು ವಿಶ್​ ಮಾಡುತ್ತಿದ್ದಾರೆ. ನಟಿ ಕರೀನಾ ಕಪೂರ್​, ಇಬ್ರಾಹಿಂ ಜೊತೆ ಕುಟುಂಬದವರು ನಿಂತಿರುವ ಫೋಟೋವನ್ನು ಹಂಚಿಕೊಂಡು, "ಹ್ಯಾಂಡ್ಸಮ್​ ಹುಡುಗನಿಗೆ ಹುಟ್ಟು ಹಬ್ಬದ ಶುಭಾಶಯಗಳು" ಎಂದು ಬರೆದಿದ್ದಾರೆ. ಜೊತೆಗೆ ಪಿಂಕ್​ ಹಾರ್ಟ್​ ಎಮೋಜಿ ಜೊತೆ 'ಲವ್​ ಯು' ಎಂದು ಕ್ಯಾಪ್ಶನ್​ ಕೊಟ್ಟಿದ್ದಾರೆ. ಕಳೆದ ವರ್ಷ ಮುಂಬೈನ ತಮ್ಮ ಮನೆಯಲ್ಲಿ ಸೈಫ್​ ಅವರ ಹುಟ್ಟುಹಬ್ಬ ಆಚರಣೆಯ ಫೋಟೋ ಇದಾಗಿದೆ.

birthday
ಇಬ್ರಾಹಿಂ ಅಲಿ ಖಾನ್​ ಹುಟ್ಟುಹಬ್ಬಕ್ಕೆ ಕರೀನಾ ಕಪೂರ್ ವಿಶ್​​

ಇದನ್ನೂ ಓದಿ: ದೀಪಿಕಾ ಪಡುಕೋಣೆ ಹೊಗಳಿದ ವಿವೇಕ್ ಅಗ್ನಿಹೋತ್ರಿ: ಶುರುವಾಯ್ತು 'ಡಬಲ್ ಸ್ಟ್ಯಾಂಡರ್ಡ್' ಚರ್ಚೆ!

ಈ ಮಧ್ಯೆ ಸೈಫ್ ಅಲಿ ಖಾನ್​ ಅವರ ಸಹೋದರಿ ಸಬಾ ಅಲಿ ಖಾನ್ ಪಟೌಡಿ ಕೂಡ ಸೋದರಳಿಯ ಇಬ್ರಾಹಿಂಗೆ ಶುಭಕೋರಿದ್ದಾರೆ. "ನನ್ನ ಸೋದರಳಿಯನಿಗೆ ಜನ್ಮದಿನದ ಶುಭಾಶಯಗಳು! ನಾನು ನಿನ್ನನ್ನು ಪ್ರೀತಿಸುತ್ತೇನೆ. ಕೀಪ್ ಶೈನಿಂಗ್!" ಎಂದು ಬರೆದುಕೊಂಡಿದ್ದಾರೆ. ಇಬ್ರಾಹಿಂ ಅಲಿ ಖಾನ್​ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಸಹೋದರ ಮತ್ತು ನಟ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಹಿರಿಯ ಮಗ. ಪ್ರಸ್ತುತ, ಇಬ್ರಾಹಿಂ ಅಲಿ ಖಾನ್​ ಅವರು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಲ್ಲಿ ಒಬ್ಬರಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ನಟಿ ಕರೀನಾ ಕಪೂರ್​ ಕಳೆದ ನವೆಂಬರ್‌ನಲ್ಲಿ ಮರ್ಡರ್​​ ಮಿಸ್ಟರಿ ಶೂಟಿಂಗ್​ ಅನ್ನು ಪೂರ್ಣಗೊಳಿಸಿದ್ದಾರೆ. ಮುಂಬರುವ ಚಿತ್ರವು ಕರೀನಾ ಕಪೂರ್​ ಖಾನ್​ ಅವರಿಗೆ ನಿರ್ಮಾಪಕರಾಗಿ ಚೊಚ್ಚಲ ಚಿತ್ರವಾಗಿದೆ. ಅವರು ಏಕ್ತಾ ಕಪೂರ್ ಅವರೊಂದಿಗೆ ಹೆಸರಿಡದ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು, ಸುಜೋಯ್ ಘೋಷ್ ಅವರ ಮುಂದಿನ ಚಿತ್ರದಲ್ಲೂ ನಟಿ ಕಾಣಿಸಿಕೊಳ್ಳಲಿದ್ದಾರೆ.

ನಟಿ ಕರೀನಾ ಕಪೂರ್​ ಖಾನ್​ ಮತ್ತು ಸೈಫ್ ಅಲಿಖಾನ್​ 2012 ರ ಅಕ್ಟೋಬರ್ ತಿಂಗಳಿನಲ್ಲಿ ಮುಂಬೈನಲ್ಲಿ ವಿವಾಹವಾದರು. ಈ ದಂಪತಿಗೆ ತೈಮೂರ್ ಅಲಿ ಖಾನ್​ ಮತ್ತು ಜೆಹ್ ಅಲಿ ಖಾನ್ ಎಂಬ ಎರಡು ಮಕ್ಕಳಿದ್ದಾರೆ. ಇನ್ನು ಕರೀನಾಳನ್ನು ವಿವಾಹವಾಗುವುದಕ್ಕಿಂತ ಮುಂಚೆ ಅಮೃತಾ ಸಿಂಗ್​ ಜೊತೆ ಸೈಫ್ ಮದುವೆಯಾಗಿದ್ದರು. ಇಬ್ರಾಹಿಂ ಅಲಿ ಖಾನ್​ ಮತ್ತು ಸಾರಾ ಅಲಿ ಖಾನ್ ಇವರಿಬ್ಬರ ಮಕ್ಕಳಾಗಿದ್ದಾರೆ.

ಇದನ್ನೂ ಓದಿ: ಮಹಿಳಾ ಐಪಿಎಲ್‌: ಬಾಲಿವುಡ್ ಬೆಡಗಿಯರ ಆಕರ್ಷಕ ನೃತ್ಯ ಪ್ರದರ್ಶನ, ಪ್ರೇಕ್ಷಕರು ಥ್ರಿಲ್!- ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.