ETV Bharat / entertainment

ಕರಣ್ ಡಿಯೋಲ್ - ದ್ರಿಶಾ ಆಚಾರ್ಯ ಸಂಗೀತ ಸಮಾರಂಭ - ಕರಣ್ ದ್ರಿಶಾ ಮದುವೆ

ನಿನ್ನೆ ಸಂಜೆ ಕರಣ್ ಡಿಯೋಲ್ - ದ್ರಿಶಾ ಆಚಾರ್ಯ ಅವರ ಸಂಗೀತ ಸಮಾರಂಭ ನಡೆದಿದ್ದು, ಗಣ್ಯರು ಭಾಗಿಯಾಗಿದ್ದರು.

Karan Deol Drisha Acharya sangeet ceremony
ಕರಣ್ ಡಿಯೋಲ್ - ದ್ರಿಶಾ ಆಚಾರ್ಯ ಸಂಗೀತ ಸಮಾರಂಭ
author img

By

Published : Jun 17, 2023, 11:30 AM IST

ಡಿಯೋಲ್ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಜನಪ್ರಿಯ ನಟ ಸನ್ನಿ ಡಿಯೋಲ್ (Sunny Deol) ಪುತ್ರ ಕರಣ್ ಡಿಯೋಲ್ (Karan Deol) ನಾಳೆ ಅದ್ಧೂರಿಯಾಗಿ ಗೆಳತಿಯ ಕೈ ಹಿಡಿಯಲಿದ್ದಾರೆ. ಶುಕ್ರವಾರ ರಾತ್ರಿ ಮುಂಬೈನ ಡಿಯೋಲ್ ನಿವಾಸದಲ್ಲಿ ವಿವಾಹಪೂರ್ವ ಸಂಗೀತ ಸಮಾರಂಭ ನಡೆದಿದೆ.

ಕರಣ್ ಡಿಯೋಲ್ ಮತ್ತು ದ್ರಿಶಾ ಆಚಾರ್ಯ ವರ ವಧುವಿನಂತೆ ಮೊದಲ ಬಾರಿಗೆ ಕಾಣಿಸಿಕೊಂಡರು. ರಣ್​​​ವೀರ್ ಸಿಂಗ್ ಸೇರಿದಂತೆ ಬಾಲಿವುಡ್ ಉದ್ಯಮದ ಅನೇಕ ಸೆಲೆಬ್ರಿಟಿಗಳು ಸಂಗೀತ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಗೀತ ಸಮಾರಂಭದ ಕೆಲ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇನ್​​ಸ್ಟಾಗ್ರಾಮ್​ನಲ್ಲಿ ಪಾಪರಾಜಿ ಖಾತೆಯಿಂದ ಶೇರ್ ಆಗಿರುವ ವಿಡಿಯೋ ಒಂದರಲ್ಲಿ, ಬಾಲಿವುಡ್​​ ನಟ ರಣ್​​ವೀರ್ ನೃತ್ಯ ಮಾಡುತ್ತಿದ್ದು, ಕರಣ್ ಅನ್ನು ಎತ್ತಿ ಸಂಭ್ರಮಿಸುತ್ತಿರುವುದು ಕಾಣಬಹುದು. ಎಲ್ಲರೂ ಬಹಳ ಸಂಭ್ರಮದ ಕ್ಷಣಗಳನ್ನು ಆನಂದಿಸುತ್ತಿದ್ದರು. ಕಾರ್ಯಕ್ರಮದಲ್ಲಿದ್ದವರು ಅವರನ್ನು ಹುರಿದುಂಬಿಸಿದರು. ಕರಣ್ ಅವರನ್ನು ಮದುವೆಯಾಗಲಿರುವ ದೃಶಾ ಆಚಾರ್ಯ ಅವರು ರಣ್​ವೀರ್​ ಮತ್ತು ಕರಣ್​ ಬಳಿ ನಿಂತು ಅವರನ್ನು ಹುರಿದುಂಬಿಸಿದರು. ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿರುವ ವಿಡಿಯೋಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರು, "ರಣ್​​ವೀರ್ ಸಿಂಗ್ ಓರ್ವ ಮಹಾನ್ ವ್ಯಕ್ತಿ. ಅವರು ಯಾವಾಗಲೂ ಇತರರನ್ನು ಸಂತೋಷವಾಗಿರಿಸುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ. ಬಹಳ ಉತ್ಸಾಹಿ ಎಂದು ಮತ್ತೊಬ್ಬರು ಬರೆದಿದ್ದಾರೆ.

ಕರಣ್ ಡಿಯೋಲ್ ಮತ್ತು ದ್ರಿಶಾ ಆಚಾರ್ಯ ಜೂನ್ 18 ರಂದು ಅಂದರೆ ನಾಳೆ ದಾಂಪತ್ಯ ಜೀವನ ಆರಂಭಿಸಲು ರೆಡಿ ಆಗಿದ್ದಾರೆ. ವಿವಾಹ ಪೂರ್ವದ ಶಾಸ್ತ್ರ, ಸಮಾರಂಭಗಳನ್ನು ಆನಂದಿಸುತ್ತಿದ್ದಾರೆ. ಇಡೀ ಡಿಯೋಲ್ ಕುಟುಂಬಸ್ಥರು ಮದುವೆ ಶಾಸ್ತ್ರಗಳಿಗೆ ಹಾಜರಾಗುವುದರೊಂದಿಗೆ ಸಂಭ್ರಮ ಹೆಚ್ಚಿಸಿದ್ದಾರೆ. ಪೇಟ ಧರಿಸಿ ವರನ ತಂದೆ ಸನ್ನಿ ಡಿಯೋಲ್ ಕಾಣಿಸಿಕೊಂಡರು. ಅವರು Gadar ಚಿತ್ರದ ಮೈನ್ ನಿಕ್ಲಾ ಗಡ್ಡಿ ಲೇಕೆ ಹಾಡಿಗೆ ನೃತ್ಯ ಮಾಡಿದರು. ಬಾಬಿ ಡಿಯೋಲ್ ಅವರು ತಮ್ಮ ಪತ್ನಿ ತಾನಿಯಾ ಮತ್ತು ಮಗ ಆರ್ಯಮನ್ ಅವರೊಂದಿಗೆ ಆಗಮಿಸಿದ್ದರು. ಸನ್ನಿ ಅವರ ಸೋದರಸಂಬಂಧಿ ಅಭಯ್ ಡಿಯೋಲ್ ಕೂಡ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Kangana Ranaut - ಮದುವೆ ಬಗ್ಗೆ ಬಹಿರಂಗಪಡಿಸಿದ ನಟಿ ಕಂಗನಾ ರಣಾವತ್

ವಧು ದ್ರಿಶಾ ಆಚಾರ್ಯ ಸುಂದರ ಕಪ್ಪು ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ. ವರ ಕರಣ್ ಕಸೂತಿ ಮಾಡಿದ ಶೇರ್ವಾನಿಯಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ. ಜೋಡಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದು ಮತ್ತು ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ಕೂಡಾ ನೀಡಿದ್ದಾರೆ. ಕರಣ್ ಮತ್ತು ದ್ರಿಶಾ ಕೆಲ ಕಾಲ ಡೇಟಿಂಗ್ ನಡೆಸಿದ್ದಾರೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿದೆ. ನಾಳೆ ಮದುವೆ ನಡೆಯಲಿದ್ದು, ನಂತರ ಅದ್ಧೂರಿ ಆರತಕ್ಷತೆ ನಡೆಯಲಿದೆ.

ಇದನ್ನೂ ಓದಿ: ಸ್ಕೈಪ್ ಮೂಲಕ ಸಿನಿಮಾ ನಿರ್ದೇಶನ: ಜೂ. 23ಕ್ಕೆ 'ರೋಡ್ ಕಿಂಗ್​​' ರಿಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.