ETV Bharat / entertainment

ಮೆಲ್ಬೋರ್ನ್ 2022ರ ಭಾರತೀಯ ಚಲನಚಿತ್ರೋತ್ಸವದಲ್ಲಿ ಗೌರವ ಅತಿಥಿಯಾಗಿ ಕಪಿಲ್ ದೇವ್ - ಗೌರವ ಅತಿಥಿಯಾಗಿ ಕಪಿಲ್ ದೇವ್

ಎರಡು ವರ್ಷಗಳ ನಂತರ ಮೆಲ್ಬೋರ್ನ್‌ನ್​ನಲ್ಲಿ ಭಾರತೀಯ ಚಲನಚಿತ್ರೋತ್ಸವು ಅದ್ಧೂರಿಯಾಗಿ ನಡೆಯಲಿದ್ದು, ಗೌರವ ಅತಿಥಿಯಾಗಿ ಭಾರತದ ಮಾಜಿ ನಾಯಕ ಕಪಿಲ್ ದೇವ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೋತ್ಸವಕ್ಕೆ 23 ಭಾಷೆಗಳ 100 ಕ್ಕೂ ಹೆಚ್ಚು ಚಲನಚಿತ್ರಗಳು ಆಯ್ಕೆಯಾಗಿವೆ.

Kapil Dev to be the guest of honour at Indian Film Festival of Melbourne 2022

author img

By

Published : Jul 8, 2022, 3:03 PM IST

ನವದೆಹಲಿ: ಭಾರತೀಯ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ 2022 (IFFM)ಗೆ ಗೌರವ ಅತಿಥಿಯಾಗಿ ಆಹ್ವಾನಿಸಲಾಗಿದೆ. ವಿಕ್ಟೋರಿಯನ್ ರಾಜಧಾನಿಯಲ್ಲಿ ನಡೆಯಲಿರುವ ಈ ಉತ್ಸವವು ಆಗಸ್ಟ್ 12-20 ರವರೆಗೆ ನಡೆಯಲಿದೆ. ಇತ್ತೀಚೆಗೆ ತೆರೆಕಂಡ ಕಬೀರ್ ಖಾನ್ ನಿರ್ದೇಶನದ '83' ಚಿತ್ರದ ಸಂಭ್ರಮವನ್ನು ಅವರು ಅಲ್ಲಿ ಹಂಚಿಕೊಳ್ಳಲಿದ್ದಾರೆ. ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್ ಬಯೋಪಿಕ್​ ಇದಾಗಿದ್ದು, ಚಿತ್ರದಲ್ಲಿ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್​​ ಕಾಣಿಸಿಕೊಂಡಿದ್ದರು.

ಕಾರ್ಯಕ್ರಮದ ಭಾಗವಾಗಲು ಉತ್ಸುಕರಾಗಿರುವ ದೇವ್, "ನಾನು IFFM 2022 ರ ಭಾಗವಾಗಲು ಎದುರು ನೋಡುತ್ತಿದ್ದೇನೆ. ಇದು ಭಾರತೀಯ ಸಿನಿಮಾಗಳನ್ನು ಪರಿಚಯಿಸುವ ಉತ್ತಮ ವೇದಿಕೆಗಳಲ್ಲಿ ಒಂದು. ಕ್ರೀಡೆ ಮತ್ತು ಸಿನಿಮಾ ಇವುಗಳು ಭಾರತೀಯರಿಗೆ ಅಷ್ಟೇ ಅಲ್ಲದೇ ವಿವಿಧ ಸಮುದಾಯ ಹಾಗೂ ದೇಶಗಳಿಗೆ ಪ್ರಮುಖ ಸಾಂಸ್ಕೃತಿಕ ಅನುಭವಗಳಾಗಿವೆ.

ಇದೇ ರೀತಿ ದಶಕಗಳಿಂದ ಜನರನ್ನು ಒಗ್ಗೂಡಿಸಿಕೊಂಡು ಬಂದಿರುವ ಸಂಗತಿಯಾಗಿದೆ. ಸಿನಿಮಾ ಮತ್ತು ಕ್ರೀಡೆ ಎರಡರಲ್ಲೂ ನಾವು ಆಳವಾದ ಪ್ರೀತಿ ಮತ್ತು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಹಾಗಾಗಿ ನಮ್ಮ ಪ್ರೀತಿ ಹಂಚಿಕೊಳ್ಳಲು ಇದೊಂದು ಲಾಭದಾಯಕ ವೇದಿಕೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕೊರೊನಾ ಕಾರಣದಿಂದ ಕಳೆದ ವರ್ಷಗಳಿಂದ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ಹಬ್ಬವನ್ನು ಸಿಮೀತ ಜನರೊಂದಿಗೆ ಮಾತ್ರ ನಡೆಸಲಾಗಿತ್ತು. ಈ ವರ್ಷ ವಿಕ್ಟೋರಿಯನ್ ರಾಜಧಾನಿಯಲ್ಲಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು ಅದಕ್ಕಾಗಿ ಭರದ ಸಿದ್ಧತೆ ನಡೆದಿದೆ. 2019ರ ಉತ್ಸವದಲ್ಲಿ ಶಾರುಖ್ ಖಾನ್, ಅರ್ಜುನ್ ಕಪೂರ್, ಟಬು, ವಿಜಯ್ ಸೇತುಪತಿ, ರಿಮಾ ದಾಸ್, ಜೋಯಾ ಅಖ್ತರ್, ಕರಣ್ ಜೋಹರ್ ಸೇರಿದಂತೆ ದೊಡ್ಡ ತಾರಾ ಬಳಗವೇ ಕಾಣಿಸಿಕೊಂಡಿತ್ತು. ಉತ್ಸವದ ಕುರಿತು ನಿರ್ದೇಶಕರಾದ ಮಿಟು ಭೌಮಿಕ್ ಲಾಮ್​ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಸಿನಿಮಾ ಉತ್ಸವದಲ್ಲಿ ಪ್ರಸಿದ್ಧ ಕ್ರಿಕೆಟಿಗ ಕಪಿಲ್ ದೇವ್ ಅವರು ಅತಿಥಿಯಾಗಿ ಆಗಮಿಸುತ್ತಿರುವುದು ಬಹಳ ಖುಷಿ ತರಿಸಿದೆ. ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ಸಿನಿಮಾ ಉತ್ಸವಕ್ಕೆ ಈ ವರ್ಷ ಕಳೆ ಬರಲಿದೆ.

ಅವರ 83 ಚಿತ್ರವನ್ನು ವೀಕ್ಷಿಸಲು ನಾವು ಉತ್ಸುಕರಾಗಿದ್ದೇವೆ. ಇದೊಂದು ಸಿನಿಮಾ ಮತ್ತು ಕ್ರಿಕೆಟ್ ಪ್ರೇಮಿಗಳ ನಗರವಾಗಿರುವುದರಿಂದ ಸಾವಿರಾರು ಪ್ರೇಕ್ಷಕರು ಅವರನ್ನು ಇಲ್ಲಿ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. 23 ಭಾಷೆಗಳ 100 ಕ್ಕೂ ಹೆಚ್ಚು ಚಲನಚಿತ್ರಗಳು ಉತ್ಸವಕ್ಕೆ ಆಯ್ಕೆಯಾಗಿವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.