ETV Bharat / entertainment

''ಇದು ಬರಿ ಬೆಳಕಲ್ಲ, ದರ್ಶನ'': ಕಾಂತಾರ ಪ್ರೀಕ್ವೆಲ್ ಫಸ್ಟ್ ಲುಕ್​ ರಿಲೀಸ್​​ ಡೇಟ್ ಅನೌನ್ಸ್ ಮಾಡಿದ ರಿಷಬ್ - Kantara

Kantara Prequel First Look: ಕಾಂತಾರ ಚಾಪ್ಟರ್​​ 1ರ ಫಸ್ಟ್ ಲುಕ್ ನಾಡಿದ್ದು ಅನಾವರಣಗೊಳ್ಳಲಿದೆ.

Kantara prequel first look
ಕಾಂತಾರ ಪ್ರೀಕ್ವೆಲ್ ಫಸ್ಟ್ ಲುಕ್​
author img

By ETV Bharat Karnataka Team

Published : Nov 25, 2023, 12:28 PM IST

Updated : Nov 25, 2023, 12:46 PM IST

''ಕಾಂತಾರ''.....ವಿಶೇಷ ಪರಿಚಯ ಬೇಕೆನಿಸದು. ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದ ಸಿನಿಮಾವಿದು. ಸಿನಿಪ್ರಿಯರು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದ ಖ್ಯಾತನಾಮರು ಸಹ ಮೆಚ್ಚಿ ಕೊಂಡಾಡಿದ ಅದ್ಭುತ ಚಿತ್ರ. ಅಪಾರ ಸಂಖ್ಯೆಯ ಪ್ರೇಕ್ಷಕರ ಮನಗೆದ್ದಿರುವ ಕಾಂತಾರದ ಮತ್ತೊಂದು ಭಾಗ ನಿರ್ಮಾಣಗೊಳ್ಳುತ್ತಿರುವುದು ನಿಮಗೆ ತಿಳಿದಿರುವ ವಿಚಾರವೇ. ಇದೀಗ ಕಾಂತಾರ ಪ್ರೀಕ್ವೆಲ್​ನ ಮೊದಲ ನೋಟ ಅನಾವರಣಗೊಳ್ಳುವ ಸಮಯ ಸಮೀಪಿಸಿದೆ.

ನಟ-ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬಂದ ಕಾಂತಾರ 2022ರ ಹಿಟ್ ಚಲನಚಿತ್ರವಾಗಿ ಹೊರಹೊಮ್ಮಿತು. ಸದ್ಯ ನಿರ್ಮಾಣಗೊಳ್ಳುತ್ತಿರುವುದು ಸೀಕ್ವೆಲ್ ಅಲ್ಲ, ಬದಲಾಗಿ ಪ್ರೀಕ್ವೆಲ್. ಕಾಂತಾರ ಚಾಪ್ಟರ್​​ 1 ನಿರ್ದೇಶನ ಸಾಹಸಕ್ಕೆ ಚಿತ್ರತಂಡ ಸಜ್ಜಾಗಿದೆ. ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವ ನೀಡಲು ರಿಷಬ್​ ಶೆಟ್ಟಿ ತಂಡ ಸಂಪೂರ್ಣ ಪರಿಶ್ರಮ ಹಾಕುತ್ತಿದೆ. ಕಾಂತಾರ ಪ್ರೀಕ್ವೆಲ್‌ನ ಮೊದಲ ನೋಟ ಯಾವಾಗ ಅನಾವರಣಗೊಳ್ಳಲಿದೆ ಎಂದು ಅಭಿಮಾನಿಗಳು ಕಾತರರಾಗಿದ್ದರು. ಅಂತಿಮವಾಗಿ ಡಿವೈನ್​ ಸ್ಟಾರ್ ಇಂದು ಮಾಹಿತಿ ಬಹಿರಂಗಪಡಿಸಿದ್ದಾರೆ.

ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್​​​ಗಳಲ್ಲಿ ಪೋಸ್ಟ್ ಶೇರ್ ಮಾಡಿರುವ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ, ''ಇದು ಬರಿ ಬೆಳಕಲ್ಲ, ದರ್ಶನ'' ಕಾಂತಾರ ಪ್ರೀಕ್ವೆಲ್​​​ ಫಸ್ಟ್ ಲುಕ್​​​ ನವೆಂಬರ್​​ 27ರ ಮಧ್ಯಾಹ್ನ 12:25ಕ್ಕೆ ಬಿಡುಗಡೆ ಎಂದು ಬರೆದುಕೊಂಡಿದ್ದಾರೆ.

''ಕಾಂತಾರ ಚಾಪ್ಟರ್ 1'' ಎಂದು ಹೆಸರಿಸಲಾಗಿರುವ ಪ್ರೀಕ್ವೆಲ್‌ನ ಫಸ್ಟ್ ಲುಕ್​​ ಅನ್ನು ನವೆಂಬರ್ 27ರಂದು ಅನಾವರಣಗೊಳಿಸಲು ನಿರ್ಧರಿಸಲಾಗಿದೆ. ಯಶಸ್ವಿ ಸಿನಿಮಾದ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೂಡ ಈ ಕುತೂಹಲಕಾರಿ ಸಂಗತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಪೋಸ್ಟ್ ಶೇರ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ''ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ'' ಎಂದು ಬರೆದುಕೊಂಡಿದೆ.

  • ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ 🔥

    Step into the sacred echoes of the past, where divinity weaves through every frame. Stay enchanted for a glimpse into… pic.twitter.com/jiuwyqQRaP

    — Hombale Films (@hombalefilms) November 25, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಪ್ರಬುದ್ಧತೆ ಮೆರೆದ ತ್ರಿಶಾ ಕೃಷ್ಣನ್: ಮನ್ಸೂರ್​​ ಕ್ಷಮಿಸಿದ ಜನಪ್ರಿಯ ನಟಿ

ಕಾಂತಾರ 2ರ ಕೆಲಸ ಈ ವರ್ಷದ ಆರಂಭದಲ್ಲೇ ಶುಭಾರಂಭಗೊಂಡಿದೆ. ಕಾಂತಾರ ನೂರು ದಿನಗಳ ಸಂಭ್ರಮಾಚರಣೆಯಲ್ಲಿ ಪ್ರೀಕ್ವೆಲ್ ಅನ್ನು ಘೋಷಿಸಲಾಗಿತ್ತು. "ನೀವು ಈಗ ವೀಕ್ಷಿಸಿರುವುದು ಭಾಗ 2. ಭಾಗ 1 ಮುಂದಿನ ವರ್ಷ ಬರಲಿದೆ. ಕಾಂತಾರ ಇತಿಹಾಸವು ಆಳವಾದ ಬೇರುಗಳನ್ನು ಹೊಂದಿರುವ ಕಾರಣ ಕಾಂತಾರ ಚಿತ್ರೀಕರಣದ ಸಮಯದಲ್ಲಿ ಈ ಕಲ್ಪನೆ ಹೊರಹೊಮ್ಮಿತು. ಪ್ರಸ್ತುತ, ನಮ್ಮ ಬರವಣಿಗೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಂಶೋಧನೆ ನಡೆಯುತ್ತಿರುವುದರಿಂದ, ಚಿತ್ರದ ಬಗ್ಗೆ ನಿರ್ದಿಷ್ಟ ವಿವರಗಳನ್ನು ಸದ್ಯ ಬಹಿರಂಗಪಡಿಸಲು ಆಗುವುದಿಲ್ಲ" ಎಂದು ತಿಳಿಸಿದ್ದರು.

ಇದನ್ನೂ ಓದಿ: ಮಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ರಣ್​​​ಬೀರ್ ಕಪೂರ್: ವಿಡಿಯೋ ನೋಡಿ

ಕಾಂತಾರ 2 ಜೊತೆಗೆ ಹೊಂಬಾಳೆ ಫಿಲ್ಮ್ಸ್ ''ಸಲಾರ್'' ಅನ್ನು ಸಹ ನಿರ್ಮಿಸುತ್ತಿದೆ. ಇದು 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಕೆಜಿಎಫ್​ ಜನಪ್ರಿಯತೆಯ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಲಾರ್ ಡಿಸೆಂಬರ್ 22ರಂದು ಚಿತ್ರಮಂದಿರ ಪ್ರವೇಶಿಸಲಿದೆ. ವಿಜಯ್​ ಕಿರಗಂದೂರ್ ಅದ್ಧೂರಿ ವೆಚ್ಚದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

Last Updated : Nov 25, 2023, 12:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.