ಭಾರತ ಚಿತ್ರರಂಗಕ್ಕೆ ಕೆಜಿಎಫ್ ಎಂಬ ಅತ್ಯುತ್ತಮ ಚಿತ್ರ ನೀಡಿರುವ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಹಾಗೂ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಚಿತ್ರದ ಟ್ರೈಲರ್ ರಿವೀಲ್ ಆಗಿದೆ. ಇಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ 'ಕಾಂತಾರ' ಸಿನಿಮಾದ ಟ್ರೈಲರ್ ಹೊಂಬಾಳೆ ಫಿಲಂಸ್ ಅನಾವರಣ ಮಾಡಿದೆ.
ಸದ್ಯ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ನಲ್ಲಿ ಕರುನಾಡ ಸಂಸ್ಕ್ರತಿಯ ಜೊತೆಗೆ ಮಾನವ ಮತ್ತು ಪ್ರಕೃತಿ ಸಂಘರ್ಷದ ಕುರಿತ ಕಥೆಯಾಗಿರರೋ ಕೌತುಕವನ್ನ ಒಳಗೊಂಡಿದೆ. ಮಂಗಳೂರಿನನ ಸೊಗಡಿನ ಕ್ರೀಡೆ ಕಂಬಳ, ಭೂತರಾಧನೆ ಸೇರಿದಂತೆ ಹಲವು ಇಂಟ್ರಸ್ಟಿಂಗ್ ವಿಷ್ಯಗಳು ಟ್ರೈಲರ್ನಲ್ಲಿ ಒಳಗೊಂಡಿದೆ.
![Kantara movie trailer released](https://etvbharatimages.akamaized.net/etvbharat/prod-images/16287086_csdfv.jpg)
ಬಹುತೇಕ ಕರಾವಳಿ ಭಾಗದಲ್ಲಿ ಚಿತ್ರೀಕರಣಗೊಂಡಿರುವ 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣವಿದೆ.
- " class="align-text-top noRightClick twitterSection" data="">
ಈಗಾಗಲೇ ಹಲವು ವಿಶೇಷಗಳಿಂದ 'ಕಾಂತಾರ' ಮನೆಮಾತಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಕರುನಾಡ ಸಂಸ್ಕೃತಿಯನ್ನು ಬಿಂಬಿಸುವ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ವಿಜಯಪ್ರಕಾಶ್, ಅನನ್ಯ ಭಟ್ ಹಾಡಿರುವ 'ಸಿಂಗಾರ ಸಿರಿಯೆ' ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ. ಸದ್ಯ ಟ್ರೈಲರ್ನಿಂದಲ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿರುವ 'ಕಾಂತಾರ' ಸಿನಿಮಾ ಸೆಪ್ಟಂಬರ್ 30 ರಂದೇ ದೇಶಾದ್ಯಂತ ತೆರೆ ಕಾಣುತ್ತಿದೆ. ಸದ್ಯ ಈ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಬ್ಯಾಚುಲರ್ ಪಾರ್ಟಿ ಜೊತೆಗೆ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರ ನಿರ್ಮಿಸುತ್ತಿರುವ ರಕ್ಷಿತ್ ಶೆಟ್ಟಿ