ETV Bharat / entertainment

ಕರಾವಳಿಯಲ್ಲೇ 6 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ 10 ಕೋಟಿ ವೆಚ್ಚದ 'ಕಾಂತಾರ'

10 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿರುವ ಕಾಂತಾರ ಸಿನಿಮಾ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ 5 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಕುಂದಾಪುರ ಮಲ್ಟಿಪ್ಲೆಕ್ಸ್​ವೊಂದರಲ್ಲಿ ಕಾಂತಾರ ಸಿನಿಮಾ ಬರೋಬ್ಬರಿ 1 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

author img

By

Published : Oct 14, 2022, 6:07 PM IST

Updated : Oct 14, 2022, 6:50 PM IST

Kantara Movie Collection
ಕಾಂತಾರ ಸಿನಿಮಾ ಕಲೆಕ್ಷನ್

ಚಿತ್ರರಂಗದಲ್ಲೀಗ ಕಾಂತಾರದ್ದೇ ಸದ್ದು. ಸೂಪರ್ ಹಿಟ್ ಆದ ಕಾಂತಾರ ಸಿನಿಮಾ ಪರಭಾಷೆಯಲ್ಲೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು, ದಾಖಲೆ ಬರೆಯಲು ಸಜ್ಜಾಗಿದೆ. ಈಗಾಗ್ಲೇ ಜೇಮ್ಸ್, ಕೆಜಿಎಫ್ ಚಾಪ್ಟರ್ 2, ವಿಕ್ರಾಂತ್ ರೋಣ, ಚಾರ್ಲಿ 777 ಸಿನಿಮಾಗಳು ಕೋಟ್ಯಂತರ ಅಭಿಮಾನಿಗಳಿಗೆ ಇಷ್ಟ ಆಗುವ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಕೋಟಿ ಕೋಟಿ ಲೂಟಿ ಮಾಡಿವೆ. ಈ ಸಾಲಿಗೆ ಈಗ ಕಾಂತಾರ ಸಿನಿಮಾ ಸೇರ್ಪಡೆ ಆಗುತ್ತಿದೆ.

ಹೌದು, ಸ್ಯಾಂಡಲ್​​ವುಡ್​ನಲ್ಲಿ ಕಾಂತಾರ ಸಿನಿಮಾ ಹವಾ ಜೋರಾಗಿದ್ದು, ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ಅಷ್ಟೇ ಅಲ್ಲ ಹಿಂದಿಯಲ್ಲಿ ಇಂದು ಬಿಡುಗಡೆ ಆಗಿದ್ದು, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಗೆ ಡಬ್ಬಿಂಗ್ ಆಗಿ ಬಿಡುಗಡೆಗೆ ಸಜ್ಜಾಗಿರೋ ಕಾಂತಾರ ಸಿನಿಮಾ ಕಡಿಮೆ ಬಜೆಟ್​ನಲ್ಲಿ ನಿರ್ಮಾಣ ಆಗಿ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದಿದೆ.

ನಟ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ 10 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಆಗಿತ್ತು. ಈಗ ಈ ಸಿನಿಮಾ 100 ಕೋಟಿ ಕಲೆಕ್ಷನ್ ಆಗಲಿದೆ ಅಂತಾ ಗಾಂಧಿ ನಗರದ ಸಿನಿಮಾ ಪಂಡಿತರು ಹೇಳಿದ್ದಾರೆ. ಕರಾವಳಿ ಭಾಗದ ಸೊಗಡಿನ ದೈವದ ಕಥೆ ಆಧರಿಸಿ ಬಂದ ಕಾಂತಾರಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಕಾಂತಾರ ಚಿತ್ರ ಬಿಡುಗಡೆ ಆಗಿ ಎರಡನೇ ವಾರಕ್ಕೆ ಕಾಲಿಟ್ಟಿದರೂ ಕೂಡ ಈ ಚಿತ್ರದ ಕ್ರೇಜ್ ಮಾತ್ರ ಒಂದಿಷ್ಟು ಕಡಿಮೆ ಆಗಿಲ್ಲ. ರಿಲೀಸ್ ಆದ ಎಲ್ಲ ಚಿತ್ರಮಂದಿಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ 5 ಕೋಟಿ ಕಲೆಕ್ಷನ್ ಮಾಡುವ ಮೂಲಕ ಕಾಂತಾರ ಸಿನಿಮಾ ದಾಖಲೆ ಬರೆದಿದೆ. ಕುಂದಾಪುರ ಮಲ್ಟಿಪ್ಲೆಕ್ಸ್​ವೊಂದರಲ್ಲಿ ಕಾಂತಾರ ಸಿನಿಮಾ ಬರೋಬ್ಬರಿ 1 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಗಾಂಧಿನಗರದ ಸಿನಿಮಾ ಪಂಡಿತರು ಹೇಳುವ ಪ್ರಕಾರ, ಮೊದಲವಾರ ಬರೋಬ್ಬರಿ 24 ಕೋಟಿ ಕಲೆಕ್ಷನ್ ಆಗಿದೆ. ಇನ್ನು ಎರಡನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾ 30 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ. ಇಂದು ಹಿಂದಿಯಲ್ಲಿ ಬಿಡುಗಡೆ ಆಗಿದ್ದು, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಿಗೂ ಡಬ್ಬಿಂಗ್ ಆಗಿದೆ. ಎಲ್ಲ ಭಾಷೆ ಸೇರಿ 40ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡುವ ಮುಖಾಂತರ 100 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗಿತ್ತಿದೆ. ಹೊಂಬಾಳೆ ಫಿಲ್ಮ್ಸ್​​​ನ ನಿರ್ಮಾಪಕ ವಿಜಯ್ ಕಿರಗಂದೂರ್ 10 ಕೋಟಿ ಬಜೆಟ್​ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ ಹಿಂದಿ ಕಾಂತಾರ.. ಅ.20ಕ್ಕೆ ಮಲೆಯಾಳಂ ಅವತರಣಿಕೆ ಬಿಡುಗಡೆ

ಈಗ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯ ಕಲೆಕ್ಷನ್ 100 ಕೋಟಿ ಆಗಲಿದೆಯೆಂದು ಅಂದಾಜಿಸಲಾಗಿದೆ. ಈ ಮೂಲಕ ಕಾಂತಾರ ಸಿನಿಮಾದ ಹವಾ ದಕ್ಷಿಣ ಭಾರತದಲ್ಲಿ ಜೋರಾಗಿದೆ.

Last Updated : Oct 14, 2022, 6:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.