ETV Bharat / entertainment

'ಕಾಂತಾರ'ದಲ್ಲಿ ನೀವೂ ನಟಿಸಬಹುದು; ಆಸಕ್ತರು ಆಡಿಶನ್ ಅವಕಾಶ ಸದುಪಯೋಗಪಡಿಸಿಕೊಳ್ಳಿ - Kantara

ಕಾಂತಾರ ಪ್ರೀಕ್ವೆಲ್​ನಲ್ಲಿ ನೀವೂ ನಟಿಸಬಹುದು. ಆಸಕ್ತರು ಆಡಿಶನ್​ನಲ್ಲಿ ಭಾಗಿಯಾಗಿ.

Kantara Chapter 1 Auditions Open
ಕಾಂತಾರ ಆಡಿಶನ್​​
author img

By ETV Bharat Karnataka Team

Published : Dec 12, 2023, 3:46 PM IST

Updated : Dec 12, 2023, 4:06 PM IST

'ಕಾಂತಾರ' ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ಸಿನಿಮಾ. ಹೊಂಬಾಳೆ ಫಿಲ್ಮ್ಸ್, ರಿಷಬ್​ ಶೆಟ್ಟಿ ಸಾರಥ್ಯದಲ್ಲಿ ಬಂದ ಈ ಚಿತ್ರ ಸೂಪರ್ ಡೂಪರ್​ ಹಿಟ್​ ಆಗಿ, ಈಗಲೂ ಪ್ರೇಕ್ಷಕರ ಅಚ್ಚುಮೆಚ್ಚಿನ ಸಿನಿಮಾ ಆಗಿದೆ. ಕಾಂತಾರ ಪ್ರೀಕ್ವೆಲ್​​​ ಅದ್ಧೂರಿಯಾಗಿ ನಿರ್ಮಾಣಗೊಳ್ಳಲಿದ್ದು, ಭರ್ಜರಿ ಸಿದ್ಧತೆ ನಡೆಯುತ್ತಿದೆ. 'ಕಾಂತಾರ ಒಂದು ದಂತಕಥೆ ಅಧ್ಯಾಯ-1'ರ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಅನ್ನು ಬಿಡುಗಡೆ ಮಾಡಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿರುವ ಚಿತ್ರತಂಡವೀಗ ಸಿನಿಪ್ರಿಯರಿಗೆ, ನಟ ನಟಿಯಾಗಬೇಕೆಂಬ ಕನಸು ಹೊತ್ತವರಿಗೆ ಗುಡ್​ ನ್ಯೂಸ್​ ಒಂದನ್ನು ಕೊಟ್ಟಿದೆ.

ಹೊಂಬಾಳೆ ಫಿಲ್ಮ್ಸ್, ರಿಷಬ್​ ಶೆಟ್ಟಿ ಪೋಸ್ಟ್: ಹೌದು, ಬಹುನಿರೀಕ್ಷಿತ ಪ್ರಾಜೆಕ್ಟ್ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ಮತ್ತು ನಟ-ನಿರ್ದೇಶಕ ರಿಷಬ್​ ಶೆಟ್ಟಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಆ ಪೋಸ್ಟ್ ಪ್ರಕಾರ, ನೀವೂ ಕೂಡ ಕಾಂತಾರ ಪ್ರೀಕ್ವೆಲ್​ನಲ್ಲಿ ನಟಿಸಬಹುದಾಗಿದೆ. ಪೋಸ್ಟ್​ನಲ್ಲಿ, ''ಕಾಂತಾರ. ಕಲಾವಿದರು ಬೇಕಾಗಿದ್ದಾರೆ. ಪುರುಷರು: ವಯಸ್ಸು 30 ರಿಂದ 60. ಮಹಿಳೆಯರು: ವಯಸ್ಸು 18 ರಿಂದ 60. ನೋಂದಣಿಗಾಗಿ kantara.film ಅನ್ನು ಒತ್ತಿ. ಈ ಡಿಸೆಂಬರ್​​ 14ರವರೆಗೆ ಚಾಲ್ತಿಯಲ್ಲಿರುತ್ತದೆ''.

ದಯವಿಟ್ಟು ಗಮನಿಸಿ: ''ರೀಲ್ಸ್ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು ಸ್ವೀಕರಿಸಲಾಗುವುದಿಲ್ಲ'' ಎಂದು ಬರೆಯಲಾಗಿದೆ. ಆನ್​ಲೈನ್​​ ಆಡಿಶನ್​ ಬಳಿಕ ವೈಯಕ್ತಿಕ ಆಡಿಷನ್‌ ನಡೆಯಲಿದೆ. ಶಾರ್ಟ್‌ಲಿಸ್ಟ್​ಗೆ ಆಯ್ಕೆ ಆದ ಪ್ರತಿಭೆಗಳನ್ನು ವೈಯಕ್ತಿಕವಾಗಿ ಆಡಿಷನ್‌ಗೆ ಕರೆಯಲಾಗುವುದು ಎಂದು ನಿರ್ದೇಶಕ ಮತ್ತು ನಿರ್ಮಾಪಕರು ತಿಳಿಸಿದ್ದಾರೆ.

ಇದನ್ನೂ ಓದಿ: ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಫ್ಯಾಮಿಲಿ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ

ಚಿತ್ರರಂಗದಲ್ಲಿ ಬೆಳೆಯಬೇಕು ಎಂಬ ಕನಸು ಹೊತ್ತವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಈ ಆಡಿಶನ್​ನಲ್ಲಿ ಆಯ್ಕೆ ಆದವರು ಕಾಂತಾರ ಪ್ರೀಕ್ವೆಲ್​ನಲ್ಲಿ ನಟಿಸುವ ಅವಕಾಶ ಪಡೆಯಲಿದ್ದಾರೆ. ಒಟ್ಟಾರೆ ಮುಂದಿನ ಈ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಸಿನಿಮಾ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

  • ನಿಮ್ಮ ಕೋಟ್ಯಾಂತರ ಅಭಿಮಾನಿಗಳಲ್ಲಿ ನಾನು ಒಬ್ಬ, ನಿಮ್ಮ ಸಾಧನೆ ನಮಗೆ ಮಾರ್ಗದರ್ಶನ. ಹುಟ್ಟು ಹಬ್ಬದ ಶುಭಾಶಯಗಳು ಸರ್.

    Wishing the Super Star @rajinikanth sir a blockbuster birthday!

    May your charisma continue to inspire generations. pic.twitter.com/SjuHwKUi92

    — Rishab Shetty (@shetty_rishab) December 12, 2023 " class="align-text-top noRightClick twitterSection" data=" ">

ರಜನಿಕಾಂತ್ ಜನ್ಮದಿನಕ್ಕೆ ಶುಭಕೋರಿದ ರಿಷಬ್​ ಶೆಟ್ಟಿ: ಸುಮಾರು 5 ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಛಾಪು ಮೂಡಿಸಿರುವ ರಜನಿಕಾಂತ್ ಅವರಿಗಿಂದು ಜನ್ಮದಿನದ ಸಂಭ್ರಮ. 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿರಿಯ ನಟನಿಗೆ ಡಿವೈನ್​ ಸ್ಟಾರ್ ಕೂಡ ವಿಶೇಷವಾಗಿ ಶುಭ ಕೋರಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ರಜನಿಕಾಂತ್​ ಜೊತೆಗಿರುವ ಫೋಟೋ ಹಂಚಿಕೊಂಡ ರಿಷಬ್​ ಶೆಟ್ಟಿ, ''ನಿಮ್ಮ ಕೋಟ್ಯಂತರ ಅಭಿಮಾನಿಗಳಲ್ಲಿ ನಾನು ಒಬ್ಬ, ನಿಮ್ಮ ಸಾಧನೆ ನಮಗೆ ಮಾರ್ಗದರ್ಶನ. ಹುಟ್ಟು ಹಬ್ಬದ ಶುಭಾಶಯಗಳು ಸರ್'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೇಸ್​​ ಹಾಕಬೇಕಿರುವುದು ತ್ರಿಶಾ; ಮನ್ಸೂರ್ ಅಲಿ ಖಾನ್​ಗೆ ಕೋರ್ಟ್ ಛೀಮಾರಿ!

Last Updated : Dec 12, 2023, 4:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.