ETV Bharat / entertainment

ಬಿಗ್​ ಬಾಸ್​​: ಆಟ ಹೋಗಿ ಹೊಡೆದಾಟ ಶುರುವಾಯ್ತಾ? ಮನೆಯಿಂದ ಹೊರಬಂದ ಸಂಗೀತಾ ಶೃಂಗೇರಿ! - vinay karthik fight

Bigg boss: ಕನ್ನಡ ಬಿಗ್​ ಬಾಸ್​ ಶೋನ ಹೊಸ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿದೆ.

Kannada Bigg boss
ಕನ್ನಡ ಬಿಗ್​ ಬಾಸ್​
author img

By ETV Bharat Karnataka Team

Published : Nov 22, 2023, 5:04 PM IST

'ಬಾರೋ ಅಂದ್ರೆ ಬರದೆ ಇರ್ತೀವಾ ನಾವು?', 'ಇದು ನಿಮ್ಮ ಆಟ...','ಏನೋ ನಿಮ್​​...', 'ಹೇಳೋ ಮುಂದಕ್ಕೆ ಹೇಳೋ', 'ಅಗ್ರೆಸಿವ್ ಆಗಿ ಆಡ್ಬೇಕಾ?', 'ಡರ್ಟಿ ಗೇಮ್ ನಾನ್ ತೋರಿಸ್ತೀನಿ'. ಅಬ್ಬಬ್ಬಾ, ಬಿಗ್‌ ಬಾಸ್ ಮನೆಯಲ್ಲಿ ಮಾತಿನ ಚಕಮಕಿ ತಾರಕಕ್ಕೇರಿದೆ. ಮಾತಿನ ಜೊತೆ ಕೈ ಕೈ ಮಿಲಾಯಿಸುವ, ಎದುರು ಬದಿರು ನಿಂತು ಕೆಣಕುವ ಪ್ರಸಂಗಗಳೂ ನಡೆದಿವೆ. ವಿನಯ್‌ ಮತ್ತು ಕಾರ್ತಿಕ್ ಮಧ್ಯೆ ಮತ್ತೆ ಬೆಂಕಿ ಹೊತ್ತಿಕೊಂಡಿದೆ.

ಬಿಗ್​ ಬಾಸ್​ ಪ್ರೋಮೋ ಅನಾವರಣ: ಜಿಯೋ ಸಿನಿಮಾ, ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಮಾತಿನ ಕಿಡಿಗಳು ಸಿಡಿಯುತ್ತಿರುವುದನ್ನು ಕಾಣಬಹುದು. ಹೌದು, 'ತಾರಕಕ್ಕೇರಿತಾ ದೋಸ್ತಿಗಳ ಜಿದ್ದಾಜಿದ್ದಿ?' ಎಂಬ ಶೀರ್ಷಿಕೆಯಡಿ ಸೋಷಿಯಲ್​ ಮೀಡಿಯಾಗಳಲ್ಲಿ ಅನಾವರಣಗೊಂಡಿರುವ ಕನ್ನಡ ಬಿಗ್​ ಬಾಸ್​ ಪ್ರೋಮೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಯುದ್ಧಭೂಮಿಯಾದ ಬಿಗ್​ ಬಾಸ್​ ಮನೆ: ಬಿಗ್‌ ಬಾಸ್ ಮನೆಯ ಸದಸ್ಯರಿಗೆ ಮಣ್ಣಿನಲ್ಲಿ ಬಣ್ಣದ ಹೂಗಳನ್ನು ನೆಟ್ಟು, ಎದುರಾಳಿ ತಂಡದಿಂದ ಅವುಗಳನ್ನು ಕಾಪಾಡಿಕೊಳ್ಳಬೇಕು ಎಂಬ ಟಾಸ್ಕ್ ನೀಡಲಾಗಿದೆ. ಹೂವಿನಿಂದ ಶುರುವಾದ ಈ ಆಟ ಕೆಲ ಹೊತ್ತಿನಲ್ಲೇ ಯುದ್ಧಭೂಮಿಯಾಗಿದೆ. ಮನೆ ಮಂದಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಒಂದು ತಂಡದ ಹೂವನ್ನು ಇನ್ನೊಂದು ತಂಡ ಕಿತ್ತುಕೊಳ್ಳಲು, ಹಾಳು ಮಾಡಲು ಯತ್ನಿಸಿದ್ದೇ ಈ ಮಾತಿನ ಚಕಮಕಿಗೆ ಕಾರಣ. ಒಬ್ಬರು ಇನ್ನೊಬ್ಬರನ್ನು ಎಳೆದಾಡಿ, ಜಗಳವಾಡಿಕೊಳ್ಳುವವರೆಗೂ ಮುಟ್ಟಿದೆ. ತುಕಾಲಿ ಸಂತೋಷ್, ಪ್ರತಾಪ್ ಅವರನ್ನು ನೆಲಕ್ಕುರುಳಿಸಿ ಹೂವುಗಳನ್ನು ಹಾಳು ಮಾಡಿದ್ದಾರೆ. ಕಾರ್ತಿಕ್ ಎದುರಾಳಿ ತಂಡದ ಹೂಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಹಿಂಬಾಲಿಸಿದ ವಿನಯ್ ಅವರನ್ನು ಜಗ್ಗಾಡಿದ್ದಾರೆ. ಮೈಕಲ್ ಹೂಬುಟ್ಟಿ ಗಟ್ಟಿಯಾಗಿ ಹಿಡಿದುಕೊಂಡರೆ, ಉಳಿದವರೆಲ್ಲ ಅವರ ಮೇಲೆ ಬಿದ್ದಿದ್ದಾರೆ.

ಇದನ್ನೂ ಓದಿ: ರಾಜಕೀಯ ವಿಡಂಬನೆಯ 'Politics ಕಲ್ಯಾಣ' ಸಿನಿಮಾಗೆ ವಿ. ಮನೋಹರ್ ಸಾಥ್: ಟ್ರೇಲರ್​ ಅನಾವರಣ

ಕಳೆದ ಒಂದೆರಡು ವಾರಗಳಲ್ಲಿ ಸೈಲೆಂಟ್ ಆಗಿದ್ದ ವಿನಯ್ ಈ ವಾರ ಸಖತ್ ಅಗ್ರೆಸಿವ್ ಆಗಿದ್ದಾರೆ. ಅದರ ಪರಿಣಾಮ ಈ ಗೇಮ್‌ನಲ್ಲಿ ಸ್ಪಷ್ಟವಾಗೇ ಕಾಣಿಸಿಕೊಳ್ಳುತ್ತಿದೆ. ಈ ಜಗಳ ಎಲ್ಲಿಗೆ ಮುಟ್ಟುತ್ತದೆ? ಏನಾಗುತ್ತದೆ? ಎಂಬುದನ್ನು ತಿಳಿದುಕೊಳ್ಳಲು ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ ಬಾಸ್ ಕನ್ನಡವನ್ನು ವೀಕ್ಷಿಸಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಮಾಡಲಾಗುತ್ತಿದೆ.

ಇದನ್ನೂ ಓದಿ: ಗೌರಿ ಶಂಕರ್ 'ಕೆರೆಬೇಟೆ' ಚಿತ್ರಕ್ಕೆ ಸಿಕ್ಕಳು ಚೆಲುವೆ: ನಾಯಕಿ ಬಿಂದು ಫಸ್ಟ್ ಲುಕ್ ನೋಡಿ

ಇನ್ನೂ ಈ ಪ್ರೋಮೋಗೂ ಮುನ್ನ ಅನಾವರಣಗೊಂಡಿರುವ ಪ್ರೋಮೋದಲ್ಲಿ ಸಂಗೀತಾ ಶೃಂಗೇರಿ ಮನೆಯಿಂದ ಹೊರಬಂದಿರುವ ದೃಶ್ಯವನ್ನು ಕಾಣಬಹುದು. ಸಂಗೀತಾ ಶೃಂಗೇರಿ ಮನೆಯ ಸ್ಟ್ರಾಂಗ್​​ ಕಂಟಸ್ಟೆಂಟ್​ ಆಗಿ ಗುರುತಿಸಿಕೊಂಡಿದ್ದಾರೆ. ಕಾರ್ತಿಕ್​ ಮತ್ತು ತನಿಷಾ ಜೊತೆ ಉತ್ತಮ ಸ್ನೇಹ ಕೂಡ ಹೊಂದಿದ್ದರು. ಆದರೆ ಕಳೆದ ಕೆಲ ದಿನಗಳಲ್ಲಿ ಈ ವಿಚಾರಗಳು ಬದಲಾಗಿವೆ. ಇಂದಿನ ಪ್ರೋಮೋದಲ್ಲಿ, ಸಂಗೀತಾ ಕಣ್ಣೀರಿಟ್ಟಿದ್ದು, ಮನೆಯ ಮುಖ್ಯದ್ವಾರದಿಂದ ಹೊರ ನಡೆದಿದ್ದಾರೆ. ಇದು ಮನೆ ಮಂದಿಗೆ ಮಾತ್ರವಲ್ಲದೇ ವೀಕ್ಷಕರಿಗೂ ಶಾಕ್ ನೀಡಿದೆ. ಮುಂದೆ ಏನಾಗುತ್ತದೆ? ಸಂಗೀತಾ ವಾಪಸ್​ ಬರ್ತಾರಾ? ಎಂಬುದನ್ನು ಕನ್ನಡ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.