ETV Bharat / entertainment

ತಮಗಿಲ್ಲದಿದ್ದರೂ ಪ್ರಾಣಿಗಳಿಗೆ ತಪ್ಪದೇ ಆಹಾರ ನೀಡುತ್ತಿದ್ದ ನಟಿ ಲೀಲಾವತಿ - ನಟಿ ಲೀಲಾವತಿ ಕೃಷಿ ಪ್ರೇಮ

ಮೂಕ ಪ್ರಾಣಿಗಳ ರಕ್ಷಣೆ ಮಾಡಬೇಕು ಎಂಬ ಹಂಬಲ ಅವರಲ್ಲಿ ಸದಾ ಇತ್ತು. ಇದೇ ಕಾರಣಕ್ಕೆ ಅವರು ಸೋಲದೇವಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಿದರು.

Kannada Actor Leelavati special Affection with animals

author img

By ETV Bharat Karnataka Team

Published : Dec 9, 2023, 12:09 PM IST

Updated : Dec 9, 2023, 12:39 PM IST

ಬೆಂಗಳೂರು: ಕನ್ನಡ ಖ್ಯಾತ ನಟಿ ಲೀಲಾವತಿಗೆ ನಟನೆಯ ಹೊರತಾಗಿ ಅತಿ ಹೆಚ್ಚು ಪ್ರೀತಿ ನೀಡುತ್ತಿದ್ದ ವಿಷಯಗಳು ಕೃಷಿ ಮತ್ತು ಪ್ರಾಣಿಗಳು. ಲೀಲಾವತಿ ಅವರಿಗೆ ಬಾಲ್ಯದಿಂದಲೂ ಬೀದಿ ನಾಯಿಗಳನ್ನು ಸಾಕುತ್ತಿದ್ದರು. ಪ್ರಾಣಿಗಳ ಮೇಲೆ ಅವರು ಹೊಂದಿದ್ದ ಪ್ರೀತಿಯೇ ಅವರಿಗೆ ಪಶು ಆಸ್ಪತ್ರೆ ನಿರ್ಮಾಣಕ್ಕೆ ಪ್ರೇರಣೆ ಆಗಿತ್ತು. ತಮ್ಮ ಸ್ವಂತ ಖರ್ಚಿನಲ್ಲಿ 45 ಲಕ್ಷ ರೂ ವ್ಯಯ ಮಾಡಿ ನಿರ್ಮಾಣ ಮಾಡಿದ್ದ ಪಶು ಆಸ್ಪತ್ರೆ ಇತ್ತೀಚಿಗಷ್ಟೇ ಉದ್ಘಾಟನೆ ಮಾಡಲಾಗಿತ್ತು.

ಲೀಲಾವತಿಗೆ ಬಾಲ್ಯದಿಂದಲೂ ಪ್ರಾಣಿಗಳ ಬಗ್ಗೆ ತುಂಬಾ ಪ್ರೀತಿ. ಇದೇ ಕಾರಣಕ್ಕೆ ಅವರು ಬೀದಿ ನಾಯಿಗಳನ್ನು ಸಾಕುತ್ತಿದ್ದರು. ಲೀಲಾವತಿಯವರ ಮಗ ವಿನೋದ್ ರಾಜ್ ತಮ್ಮ ತಾಯಿ ಅವರು ಮೂಕ ಪ್ರಾಣಿಗಳ ಮೇಲಿನ ಪ್ರೀತಿಯನ್ನ ಬಿಚ್ಚಿಟ್ಟರು, ಲೀಲಾವತಿ ಅಮ್ಮನವರಿಗೆ ಮನುಷ್ಯರಿಗಿಂತ ಮೂಕ ಪ್ರಾಣಿಗಳ ಮೇಲೆ ಪ್ರೀತಿ ಹೆಚ್ಚು, ಚೆನೈನ ಟಿ.ನಗರದಲ್ಲಿ ವಾಸವಾಗಿದ್ದಾಗ ತಮಗೆ ತಿನ್ನಲು ಇಲ್ಲದಿದ್ದ ಸಮಯದಲ್ಲೂ ಮನೆಯಲ್ಲಿ ಬೆಕ್ಕು ನಾಯಿಗಳನ್ನ ಸಾಕಿಕೊಂಡಿದ್ದರು. ಶೂಟಿಂಗ್ ಮುಗಿಸಿ ಮನೆಗೆ ಬಂದ ನಂತರ ಅವುಗಳಿಗೆ ಊಟ ಹಾಕಿದ ನಂತರನೇ ತಾವು ಊಟ ಮಾಡುತ್ತಿದ್ದರು. ಸದ್ಯ ನಮ್ಮ ತೋಟದಲ್ಲಿ 12 ನಾಯಿಗಳನ್ನ ಸಾಕಿದ್ದೇವೆ ಎಂದು ತಿಳಿಸಿದ್ದರು.

ಇದನ್ನು ಓದಿ: ಸ್ವಂತ ಹಣ ವ್ಯಯಿಸಿ ರಸ್ತೆಗುಂಡಿ ಮುಚ್ಚಿಸಿದ ನಟ ವಿನೋದ್ ರಾಜ್ - ವಿಡಿಯೋ

ಅವರ ಮುದ್ದು ನಾಯಿ ಬ್ಲಾಕಿ ಜೊತೆಗಿನ ಬಾಂಧವ್ಯ ವಿಕೇಂಡ್​ ವಿತ್​ ರಮೇಶ್​ ಕಾರ್ಯಕ್ರಮದಲ್ಲಿ ಅನಾವರಣ ಕೂಡ ಆಗಿತ್ತು. ನಾಯಿ ಬಗ್ಗೆ ಅವರಿಗೆ ಇದ್ದ ವಿಶೇಷ ನಂಟಿಗೆ ಸಾಕ್ಷಿಯೂ ಆಗಿತ್ತು. ಮೂಕ ಪ್ರಾಣಿಗಳ ರಕ್ಷಣೆ ಮಾಡಬೇಕು ಎಂಬ ಹಂಬಲ ಅವರಲ್ಲಿ ಸದಾ ಇತ್ತು. ಇದೆ ಕಾರಣಕ್ಕೆ ಅವರು ಸೋಲದೇವಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಎಷ್ಟೇ ಕಷ್ಟ ಎದುರಾದರೂ ಅದನ್ನು ಸಾಧಿಸಿದರು. ಅವರು ಇಹಲೋಹ ತ್ಯಜಿಸುವ ನಾಲ್ಕು ಐದು ದಿನಗಳ ಮುನ್ನ ಲೀಲಾವತಿ ಅವರ ಖರ್ಚಿನಲ್ಲಿ ಕಟ್ಟಿದ್ದ ಪಶು ಆಸ್ಪತ್ರೆಯ ಉದ್ಘಾಟನೆಯನ್ನ ಡಿಸಿಎಂ ನೆರವೇರಿಸಿದ್ದರು.

ಕೃಷಿ ಬಗ್ಗೆ ಲೀಲಾವತಿಗೆ ಇನ್ನಿಲ್ಲದ ಆಸಕ್ತಿ: ಕೃಷಿ ಬಗ್ಗೆ ಹೊಂದಿದ್ದ ಅಪಾರ ಒಲವಿನಿಂದಾಗಿ ಅವರು ನೆಲಮಂಗಲದ ಸೋಲದೇವನಹಳ್ಳಿಯ ತೋಟದಲ್ಲಿ ಕೃಷಿ ಕ್ರಾಂತಿಗೆ ಮುಂದಾಗಿ ಯಶಸ್ಸು ಕಂಡರು. ತಾವೊಬ್ಬ ಖ್ಯಾತ ನಟಿ ಎಂಬುದನ್ನು ಬದಿಗಿಟ್ಟು, ಸಾಮಾನ್ಯ ಕೃಷಿಕಳಂತೆ ತಾವೇ ನಿಗಾವಹಿಸಿ ಮಾಡಿದ ತೋಟದಲ್ಲಿನ ಹಸನದ ಫಸಲನ್ನು ಕಂಡು ಸಂತಸ ಪಟ್ಟರು. ತೋಟದಲ್ಲಿ ಪ್ರಾಣಿ ಮತ್ತು ಕೃಷಿಯಲ್ಲಿ ತಲ್ಲೀನರಾಗಿದ್ದ ಅವರಿಗೆ ಜೀವ ಭಯವೂ ಕಾಡುತ್ತಿತ್ತು.

ಮಗನೊಂದಿಗೆ ನೆಮ್ಮದಿಯಾಗಿ ತಮ್ಮ ಕನಸಿನ ಬದುಕಿನಲ್ಲಿ ಜೀವಿಸುತ್ತಿದ್ದ ಇವರ ಮೇಲೆ ಅನೇಕ ಬಾರಿ ಗುಂಡಿನ ದಾಳಿ ಯತ್ನ ಕೂಡ ನಡೆದಿತ್ತು, ಇದೇ ಕಾರಣಕ್ಕೆ ಅವರು ಅಧಿಕೃತ ಪಿಸ್ತೂಲ್​ ಅನ್ನು ಕೂಡ ತಮ್ಮ ಸ್ವಂತ ರಕ್ಷಣೆಗೆ ಪಡೆದಿದ್ದರು. ಮಗ ವಿನೋದ್​ ರಾಜ್​ ಸದಾ ಇದನ್ನು ತಮ್ಮ ಬಳಿಯೇ ಇಟ್ಟುಕೊಂಡು ತಿರುಗುವುದಾಗಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ನಟಿಯಾಗಿ, ತಾಯಿಯಾಗಿ, ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ ಅಭಿನೇತ್ರಿ ಲೀಲಾವತಿ

Last Updated : Dec 9, 2023, 12:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.