ETV Bharat / entertainment

Emergency Teaser: 'ಇಂಡಿಯಾ ಈಸ್​ ಇಂದಿರಾ, ಇಂದಿರಾ ಈಸ್​ ಇಂಡಿಯಾ'- ಎಮರ್ಜೆನ್ಸಿ ಟೀಸರ್ ರಿಲೀಸ್ - ಎಮರ್ಜೆನ್ಸಿ ಲೇಟೆಸ್ಟ್ ನ್ಯೂಸ್

ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾದ ಟೀಸರ್​ ಅನಾವರಣಗೊಂಡಿದೆ.

Emergency Teaser
ಎಮರ್ಜೆನ್ಸಿ ಟೀಸರ್​
author img

By

Published : Jun 25, 2023, 10:31 AM IST

Updated : Jun 25, 2023, 11:04 AM IST

ಎಮರ್ಜೆನ್ಸಿ (Emergency) 2023ರ ಬಹುನಿರೀಕ್ಷಿತ ಬಯೋಪಿಕ್​​​. ರಾಜಕೀಯ ಹಿನ್ನೆಲೆಯುಳ್ಳ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ. 'ಎಮರ್ಜೆನ್ಸಿ'ಯಲ್ಲಿ ಕಂಗನಾ ರಣಾವತ್ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿದ್ದಾರೆ. ನಟನೆ ಮಾತ್ರವಲ್ಲದೇ ನಿರ್ದೇಶನ, ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.

''ಇತಿಹಾಸದ ಕರಾಳ ಹಂತ": ಕಂಗನಾ ರಣಾವತ್ ಶನಿವಾರ ಎಮರ್ಜೆನ್ಸಿ ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಏಕವ್ಯಕ್ತಿ ನಿರ್ದೇಶಕರಾಗಿ ಕಂಗನಾರ ಚೊಚ್ಚಲ ಪ್ರಯತ್ನವಿದು. ಟೀಸರ್​ ಹಂಚಿಕೊಳ್ಳುವುದರ ಜೊತೆಗೆ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಸಹ ಬಹಿರಂಗಪಡಿಸಿದ್ದಾರೆ. ಕುತೂಹಲ ಕೆರಳಿಸುವ ಟೀಸರ್ ಹಂಚಿಕೊಂಡ ಪ್ರತಿಭಾನ್ವಿತ ನಟಿ ಕಂಗನಾ ರಣಾವತ್, ತುರ್ತು ಪರಿಸ್ಥಿತಿಯನ್ನು "ನಮ್ಮ ಇತಿಹಾಸದ ಕರಾಳ ಹಂತ" ಎಂದು ಕರೆದಿದ್ದಾರೆ.

ಎಮರ್ಜೆನ್ಸಿ ಬಿಡುಗಡೆ ದಿನಾಂಕ: 'ಎಮರ್ಜೆನ್ಸಿ' ನಿರ್ದೇಶಿಸಿರುವ ಕಂಗನಾ ರಣಾವತ್​ ಈ ಚಿತ್ರದಲ್ಲಿ ಭಾರತದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊದಲೇ ತಿಳಿಸಿದಂತೆ, ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಘಟನೆಯನ್ನು ಚಿತ್ರ ಹೇಳಲಿದೆ. ಟೀಸರ್​ನಲ್ಲಿ ಬರುವ 'ಇಂಡಿಯಾ ಈಸ್​ ಇಂದಿರಾ, ಇಂದಿರಾ ಈಸ್​ ಇಂಡಿಯಾ' ಸಾಲು ಪ್ರೇಕ್ಷಕರ ಗಮನ ಸೆಳೆದಿದೆ. ನವೆಂಬರ್ 24ರಂದು ಎಮರ್ಜೆನ್ಸಿಸಿನಿಮಾ ಬಿಡುಗಡೆ ಆಗುವುದಾಗಿಯೂ ನಟಿ ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿ ಘೋಷಣೆಯಾಗಿ 48 ವರ್ಷ: ಇನ್‌ಸ್ಟಾಗ್ರಾಮ್‌ನಲ್ಲಿ ಎಮರ್ಜೆನ್ಸಿ ಟೀಸರ್ ಅನ್ನು ಹಂಚಿಕೊಂಡ ಕಂಗನಾ, "ಒಬ್ಬ ರಕ್ಷಕರೋ ಅಥವಾ ಸರ್ವಾಧಿಕಾರಿಯೋ? ರಾಷ್ಟ್ರ ನಾಯಕರು ತಮ್ಮ ಜನರ ಮೇಲೆ ಯುದ್ಧವನ್ನು ಘೋಷಿಸಿದ ಸಂದರ್ಭವು ಇತಿಹಾಸದ ಕರಾಳ ಘಟ್ಟ" ಎಂದು ಬರೆದಿದ್ದಾರೆ. ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಆಗಿ ಇಂದಿಗೆ 48 ವರ್ಷಗಳು ತುಂಬಿವೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ- ಭೀಕರ ದೃಶ್ಯ ಫೋಟೋಗಳಲ್ಲಿ!

ಯುವ ಪೀಳಿಗೆಗೆ ಅರಿವಾಗಬೇಕು: ಚಿತ್ರದ ಬಗ್ಗೆ ಒಮ್ಮೆ ಮಾತನಾಡಿದ್ದ ಕಂಗನಾ, ''ತುರ್ತು ಪರಿಸ್ಥಿತಿ ನಮ್ಮ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕರಾಳ ಅಧ್ಯಾಯಗಳಲ್ಲಿ ಒಂದು" ಎಂದು ಹೇಳಿದ್ದರು. ದೇಶದ ಯುವ ಪೀಳಿಗೆಗೆ ನಮ್ಮ ರಾಷ್ಟ್ರದ ಅತಿದೊಡ್ಡ ರಾಜಕೀಯ ಘಟನೆಗಳ ಪರಿಚಯವಾಗಬೇಕು. ಭಾರತದ ಇತಿಹಾಸದಿಂದ ಈ ಅಸಾಧಾರಣ ಸಂಚಿಕೆಯನ್ನು ದೊಡ್ಡ ಪರದೆಯ ಮೇಲೆ ತರಲು ಉತ್ಸುಕಳಾಗಿದ್ದೇನೆ" ಎಂದು ತಿಳಿಸಿದ್ದರು.

ಇದನ್ನೂ ಓದಿ: ರಶ್ಮಿಕಾ ವಿಜಯ್​ ಡೇಟಿಂಗ್​ ವದಂತಿ: ಊಹಾಪೋಹಗಳಿಗೆ ಪುಷ್ಠಿ ನೀಡಿತು ವೈರಲ್​ ವಿಡಿಯೋ!

ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ರಣಾವತ್​ ಅಲ್ಲದೇ ಜೆ.ಪಿ. ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್, ಇಂದಿರಾ ಗಾಂಧಿ ಅವರ ಆಪ್ತರಾದ ಪುಫುಲ್ ಜಯಕರ್ ಪಾತ್ರದಲ್ಲಿ ಮಹಿಮಾ ಚೌಧರಿ, ಸಂಜಯ್ ಗಾಂಧಿ ಪಾತ್ರದಲ್ಲಿ ವಿಶಾಕ್ ನಾಯರ್, ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಶ್ರೇಯಸ್ ತಲ್ಪಾಡೆ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ನವೆಂಬರ್ 24ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

Last Updated : Jun 25, 2023, 11:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.