ETV Bharat / entertainment

ಧನ್ವೀರ್ 'ಕೈವ' ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಸಾಥ್: ಟ್ರೇಲರ್ ಅನಾವರಣ - Dhanveer Gowda

ಇತ್ತೀಚೆಗೆ 'ಕೈವ' ಸಿನಿಮಾದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Kaiva trailer released
ಕೈವ ಟ್ರೇಲರ್ ಅನಾವರಣ
author img

By ETV Bharat Karnataka Team

Published : Nov 29, 2023, 3:34 PM IST

'ಕೈವ' ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ಜಯತೀರ್ಥ ನಿರ್ದೇಶನದ ಸಿನಿಮಾದಲ್ಲಿ ಧನ್ವೀರ್ ನಾಯಕನಾಗಿ ನಟಿಸಿದ್ದು, ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದೆ. ರಾಜಾಜಿನಗರದ ಕೆ.ಎಲ್.ಇ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. 'ಬ್ಯಾಡ್​ ಮ್ಯಾನರ್ಸ್' ನಟ ಅಭಿಷೇಕ್ ಅಂಬರೀಶ್, ನಟ ಚಿಕ್ಕಣ್ಣ, ನಟಿ ಆಶಾ ಭಟ್ ಸೇರಿದಂತೆ ಅನೇಕ ಗಣ್ಯರು ಟ್ರೇಲರ್ ರಿಲೀಸ್​ ಈವೆಂಟ್​ಗೆ ಸಾಕ್ಷಿಯಾದರು.

  • " class="align-text-top noRightClick twitterSection" data="">

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, "ಕೈವ" ಚಿತ್ರದ ಟ್ರೇಲರ್ ಬಹಳ ಚೆನ್ನಾಗಿದೆ. ನಿರ್ದೇಶಕ ಜಯತೀರ್ಥ ಅವರು ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಧನ್ವೀರ್ ಸೇರಿದಂತೆ ಚಿತ್ರತಂಡದ ಎಲ್ಲರ ಅಭಿನಯ ಬಹಳ ಚೆನ್ನಾಗಿದೆ. ಈ ಸಿನಿಮಾ ಮುಂದಿನ ಡಿಸೆಂಬರ್ 8 ರಂದು ಬಿಡುಗಡೆ ಆಗುತ್ತಿದೆ‌. ಎಲ್ಲರೂ ಈ ಸಿನಿಮಾ ವೀಕ್ಷಿಸಿ, ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ಕೈವ ಚಿತ್ರತಂಡ ದರ್ಶನ್ ಅವರಿಗೆ ಹಸುವಿನ ಮರಿ ಉಡುಗೊರೆಯಾಗಿ ನೀಡಿತು.

ನಿರ್ದೇಶಕ ಜಯತೀರ್ಥ ಮಾತನಾಡಿ, ನನಗೆ "ಬೆಲ್ ಬಾಟಮ್" ಚಿತ್ರದ ವೇಳೆ ಮಾರ್ಚುರಿಗೆ ಹೋದಾಗ ಸಿಕ್ಕ ಕಥೆಯಿದು. 1983 ರಲ್ಲಿ ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರವಿದು. ಧನ್ವೀರ್ ಹಾಗೂ ಮೇಘಾ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಐವರು ನಿರ್ದೇಶಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ದರ್ಶನ್ ಅವರು "ಕೈವ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ನನ್ನ ಹಿಂದಿನ ಚಿತ್ರಗಳಿಗೂ ಅವರು ಬಂದು ಹಾರೈಸಿದ್ದರು. ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಬೆಂಬಲ ನೀಡಿದ್ದಾರೆ. ಅವರ ಅಚಲ ಬೆಂಬಲಕ್ಕೆ ನಾನು ಕೃತಜ್ಞ ಎಂದು ತಿಳಿಸಿದರು.

ಇದನ್ನೂ ಓದಿ: ಮತ್ತೆ ಪ್ರೇಮಕಥೆಯತ್ತ ದಿಯಾ ಹೀರೋ: ಪೃಥ್ವಿ ಅಂಬಾರ್ ಸಿನಿಮಾದ ಶೀರ್ಷಿಕೆಯೇನು?

ರಾಘು ಶಿವಮೊಗ್ಗ, ಬಿ.ಎಂ ಗಿರಿರಾಜ್, ಅಶ್ವಿನ್ ಹಾಸನ್ ಸೇರಿದಂತೆ ಸಾಕಷ್ಟು ಕಲಾವಿದರು ಕೈವ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಶ್ವೇತಪ್ರಿಯಾ ಅವರ ಕ್ಯಾಮರಾ ವರ್ಕ್ ಇದೆ. ರಘು ನಿಡವಳ್ಳಿ ಅವರ ಸಂಭಾಷಣೆ ಇದೆ. ರವೀಂದ್ರಕುಮಾರ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ಡಿಸೆಂಬರ್ 8 ರಂದು ಬಿಡುಗಡೆ ಆಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತಿದ್ದು, 'ಕೈವ' ಎಷ್ಟರ ಮಟ್ಟಿಗೆ ಗೆಲ್ಲಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಕನ್ನಡದಲ್ಲೂ ಬಿಡುಗಡೆಯಾಗಲಿದೆ ರಶ್ಮಿಕಾರ 'ಅನಿಮಲ್​': ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.